ನವದೆಹಲಿ: ಭಾರತ ಹಾಗೂ ಪಾಕಿಸ್ತಾನ ಮಧ್ಯೆ ನಡೆದ ಯುದ್ಧವನ್ನು ನಿಲ್ಲಿಸುದ್ದಿ ನಾನೇ ಎಂದು ಟ್ರಂಪ್ ಹೇಳಿಕೆಯ ನಂತರ ಹೇಳಿರುವ ಚೀನಾಗೆ ಭಾರತ ತಿರುಗೇಟು ನೀಡಿದೆ.
ಕದನ ವಿರಾಮ ನಿರ್ಧಾರದಲ್ಲಿ ಯಾವುದೇ ಮೂರನೇ ಪಕ್ಷದ ಪಾತ್ರ ಇರಲಿಲ್ಲ ಎಂದು ಭಾರತ ಸ್ಪಷ್ಟಪಡಿಸಿದೆ. ಭಾರತ ಮತ್ತು ಪಾಕಿಸ್ತಾನದ ನಡುವೆ ಮೇ ತಿಂಗಳಲ್ಲಿ ನಡೆದಿದ್ದ ಸೇನಾ ಸಂಘರ್ಷದ ಸಂದರ್ಭದಲ್ಲಿ ಕದನ ವಿರಾಮಕ್ಕೆ ಕಾರಣವಾಗಿದ್ದು, ಉಭಯ ದೇಶಗಳ ಡೈರೆಕ್ಟರ್ ಜನರಲ್ ಆಫ್ ಮಿಲಿಟರಿ ಆಪರೇಷನ್ಸ್ ನಡುವೆ ನಡೆದ ನೇರ ಮಾತುಕತೆ ಎಂದು ಭಾರತ ಹಿಂದೆ ಕೂಡ ಸ್ಪಷ್ಟಪಡಿಸಿದ್ದು, ಈಗಲೂ ಈ ಹೇಳಿಕೆ ನೀಡಿದೆ.
“ನಾವು ಈಗಾಗಲೇ ಇಂತಹ ಹೇಳಿಕೆಗಳನ್ನು ತಳ್ಳಿಹಾಕಿದ್ದೇವೆ. ಭಾರತ ಮತ್ತು ಪಾಕಿಸ್ತಾನದ ನಡುವಿನ ದ್ವಿಪಕ್ಷೀಯ ವಿಷಯಗಳಲ್ಲಿ ಮೂರನೇ ವ್ಯಕ್ತಿಗೆ ಯಾವುದೇ ಪಾತ್ರವಿಲ್ಲ. ಭಾರತ-ಪಾಕಿಸ್ತಾನ ಕದನ ವಿರಾಮವು ಉಭಯ ದೇಶಗಳ ಡಿಜಿಎಂಒಗಳ ನಡುವೆ ನೇರವಾಗಿ ಒಪ್ಪಂದವಾಗಿತ್ತು ಎಂದು ಹಲವು ಬಾರಿ ಸ್ಪಷ್ಟಪಡಿಸಿದ್ದೇವು. ಈಗಲೂ ಸ್ಪಷ್ಟಪಡಿಸುತ್ತಿದ್ದೇವೆ ಎಂದು ಭಾರತ ಹೇಳಿದೆ ಎಂದು ವರದಿಯಾಗಿದೆ.
