ಸಿಬ್ಬಂದಿ ಆಯ್ಕೆ ಆಯೋಗವು ಕಾನ್‌ಸ್ಟೇಬಲ್‌ ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನಿಸಿದೆ. ಭಾರತದಾದ್ಯಂತ ಒಟ್ಟು 7565 ಕಾನ್‌ಸ್ಟೇಬಲ್‌ ಹುದ್ದೆಗಳು ಖಾಲಿ ಇದ್ದು ಆಸಕ್ತರು ಅಕ್ಟೋಬರ್‌ ಇಪ್ಪತ್ತೊಂದರ ಒಳಗೆ ಅರ್ಜಿಯನ್ನ ಸಲ್ಲಿಸಬಹುದು. 5069 ಪುರುಷ ಕಾನ್‌ಸ್ಟೇಬಲ್‌ ಹಾಗೂ 2496 ಮಹಿಳಾ ಕಾನ್‌ಸ್ಟೇಬಲ್‌ ಹುದ್ದೆಗಳು ಖಾಲಿ ಇವೆ. SSC ಅಧಿಕೃತ ಅಧಿಸೂಚನೆಯ ಪ್ರಕಾರ ಅಭ್ಯರ್ಥಿಯು ಯಾವುದೇ ಮಾನ್ಯತೆ ಪಡೆದ ಮಂಡಳಿಗಳು ಅಥವಾ ವಿಶ್ವವಿದ್ಯಾಲಯಗಳಿಂದ 12 ನೇ ತರಗತಿಯನ್ನು ಪೂರ್ಣಗೊಳಿಸಿರಬೇಕು. ಅಂದ್ರೆ ಪಿಯುಸಿ ಪಾಸ್‌ ಆಗಿರ್ಬೇಕು. ಇನ್ನು ಅಭ್ಯರ್ಥಿಯ ವಯಸ್ಸು 18ರಿಂದ 25ರ ಒಳಗಿರಬೇಕು. ಒಬಿಸಿ, ಎಸ್‌ಸಿ, ಎಸ್ಟಿ ಅಭ್ಯರ್ಥಿಗಳಿಗೆ ವಯಸ್ಸಿನ ಸಡಿಲಿಕೆ ಇರಲಿದೆ. ಕಂಪ್ಯೂಟರ್ ಆಧಾರಿತ ಪರೀಕ್ಷೆ, ದೈಹಿಕ ಪರೀಕ್ಷೆ, ದಾಖಲೆ ಪರಿಶೀಲನೆ, ವೈದ್ಯಕೀಯ ಪರೀಕ್ಷೆ ಮೂಲಕ ಆಯ್ಕೆ ಪ್ರಕ್ರಿಯೆ ನಡೆಯಲಿದ್ದು, ಆಯ್ಕೆಯಾದ ಅಭ್ಯರ್ಥಿಗಳಿಗೆ ತಿಂಗಳಿಗೆ 217000ರಿಂದ 69100 ರೂಪಾಯಿವರೆಗೆ ಮಾಸಿಕ ಸಂಬಳ ಇರಲಿದೆ. SC/ST/ಮಾಜಿ ಸೈನಿಕರಿಗೆ ಯಾವುದೇ ಅರ್ಜಿ ಶುಲ್ಕವಿಲ್ಲ. ಆದರೆ ಇತರ ಅಭ್ಯರ್ಥಿಗಳು ಆನ್‌ಲೈನ್ ಮೂಲಕ 100ರೂ. ಪಾವತಿಸಬೇಕಾಗುತ್ತದೆ. SSC ಕಾನ್ಸ್‌ಟೇಬಲ್ ಹುದ್ದೆಗೆ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಡಿಸ್ಕ್ರಿಪ್ಷನ್‌ನಲ್ಲಿರುವ ಲಿಂಕ್​ ಮೇಲೆ ಕ್ಲಿಕ್ ಮಾಡಿ.

Read Also : 9ನೇ ಬಾರಿ ಏಷ್ಯಾಕಪ್‌ಗೆಲ್ಲಲು ಭಾರತ ರೆಡಿ! : 40 ವರ್ಷಗಳ ಬಳಿಕ ಏಷ್ಯಾಕಪ್‌ ಫೈನಲ್‌ನಲ್ಲಿ ಇಂಡಿಯಾ-ಪಾಕ್‌ ಫೈಟ್!‌

Share.
Leave A Reply