ಈ ಒಂದು ಕೆಟ್ಟ ಅಭ್ಯಾಸದಿಂದ ಭಾರತೀಯರಲ್ಲಿ ಹೃದಯ ಸಂಬಂಧಿತ ರೋಗಗಳು, ಬಿಪಿ, ಕಿಡ್ನಿ ಸಮಸ್ಯೆ, ಪಾರ್ಶ್ವವಾಯುವಿನಂತಹ ಸಮಸ್ಯೆಗಳು ಕಾಣಿಸಿಕೊಳ್ಳುವ ಅಪಾಯ ಹೆಚ್ಚಿದೆ ಅಂತಾ ಐಸಿಎಂಆರ್ನ ರಾಷ್ಟ್ರೀಯ ಸಾಂಕ್ರಾಮಿಕ ರೋಗವಿಜ್ಞಾನ ಸಂಸ್ಥೆ ವಿಜ್ಞಾನಿಗಳು ಎಚ್ಚರಿಸಿದ್ದಾರೆ. ಅದೇನಂದ್ರೆ ಅಗತ್ಯಕ್ಕಿಂತ ಹೆಚ್ಚು ಉಪ್ಪನ್ನ ಸೇವಿಸೋದು.
ಜಾಸ್ತಿ ಉಪ್ಪು ತಿಂತೀರಾ, ಇರಲಿ ಎಚ್ಚರ..!
ಒಬ್ಬ ವ್ಯಕ್ತಿ ದಿನಕ್ಕೆ 5 ಗ್ರಾಂಗಿಂತ ಕಡಿಮೆ ಉಪ್ಪನ್ನು ಸೇವಿಸ್ಬೇಕು. ಆದ್ರೆ ಭಾರತೀಯರು ಇದಕ್ಕಿಂತ ಹೆಚ್ಚಿನ ಉಪ್ಪನ್ನ ಸೇವಿಸ್ತಾ ಇದ್ದಾರೆ. ಇದ್ರಿಂದ ಹಲವಾರು ಆರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳುತ್ವೆ ಅಂತಾ ವಿಜ್ಞಾನಿಗಳು ತಿಳಿಸಿದ್ದಾರೆ. ಇದೇ ಕಾರಣದಿಂದಾಗಿ 20-30 ವರ್ಷದವರೂ ಕೂಡ ಹೃದಯ ಸಂಬಂಧಿ ಹಾಗೂ ಇನ್ನಿತರ ಕಾಯಿಲೆಗಳಿಗೆ ತುತ್ತಾಗ್ತಿದ್ದಾರೆ.
ಉಪ್ಪಿಗಿಂತ ಡೇಂಜರ್ ಬೇರೆ ಇಲ್ಲ..
ಪ್ಯಾಕೇಜ್ಡ್ ಫುಡ್ ಅಂದ್ರೆ ಚಿಪ್ಸ್, ನೂಡಲ್ಸ್, ಜಂಕ್ ಫುಡ್ಗಳಲ್ಲಿ ಹಿಡನ್ ಸಾಲ್ಟ್ ಇರುತ್ತೆ. ಅಂದ್ರೆ ಅವುಗಳ ಶೆಲ್ಫ್ಲೈಫ್ಅನ್ನ ಹೆಚ್ಚಿಸೋಕೆ ಲೆಕ್ಕಕ್ಕಿಂತ ಜಾಸ್ತಿ ಉಪ್ಪನ್ನ ಬಳಸಿರ್ತಾರೆ.
ಹೀಗಾಗಿ ಇವುಗಳ ಸೇವನೆ ಕಡಿಮೆ ಮಾಡ್ಬೇಕಾಗುತ್ತೆ. ಇದ್ರ ಜೊತೆಗೆ ಹಣ್ಣುಗಳು, ಮಜ್ಜಿಗೆ, ಮೊಸರು ಇನ್ನಿತರ ಪದಾರ್ಥಗಳಿಗೆ ಅನಗತ್ಯವಾಗಿ ಉಪ್ಪನ್ನ ಹಾಕೋದನ್ನ ಅವಾಯ್ಡ್ ಮಾಡ್ಬೇಕು. ಈ ಕ್ರಮಗಳೊಂದಿಗೆ ಆದಷ್ಟು ಉಪ್ಪಿನ ಸೇವನೆಯನ್ನ ಕಡಿಮೆ ಮಾಡಿದ್ರೆ ಆರೋಗ್ಯ ಸಮಸ್ಯೆಗಳು ಕಾಡುವ ಸಾಧ್ಯತೆ ಕಡಿಮೆ ಅಂತಾ ಐಸಿಎಂಆರ್ ತಿಳಿಸಿದೆ.