ಬೆಂಗಳೂರು: ಸಿಲಿಕಾನ್ ಸಿಟಿ ಲಕ್ಷಾಂತರ ಜನರಿಗೆ ಅನ್ನದ ಸಿಟಿಯಾಗಿದೆ. ಹೀಗಾಗಿ ಬೆಂಗಳೂರಿಗರು ಎಚ್ಚರಿಕೆಯಿಂದ ಇರಬೇಕಾಗಿದೆ.

ಸಿಲಿಕಾನ್ ಸಿಟಿಯಲ್ಲಿ ಇಂದು ಗಾಳಿಯ ಗುಣಮಟ್ಟ (Air Quality) ಹೆಚ್ಚಿನ ಕಳಪೆಯಾಗಿದೆ. ಅಲ್ಲದೇ, ಇಂದು ಇಡೀ ದಿನಾ ತುಂಪಾ ಕಳಪೆಯಾಗಿರಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಗಾಳಿಮಟ್ಟದಲ್ಲಿ ಸರಾಸರಿ ವರದಿಯಾಗಿದೆ. 89 ಮತ್ತು 159 ರ ನಡುವೆ ಈ ಮಟ್ಟ ಇರಲಿದೆ ಎನ್ನಲಾಗಿದೆ. ನಿನ್ನೆ ನಗರದಲ್ಲಿ ಇದೇ ಮಟ್ಟ 85ರಷ್ಟಿತ್ತು. ಬೆಂಗಳೂರಿನಲ್ಲಿ ಇತ್ತೀಚಿನ ದಿನಗಳಲ್ಲಿ ಕಂಡು ಬಂದ ಅಪರೂಪದ ಗಾಳಿಯ ಗುಣಮಟ್ಟ ಇದು ಎನ್ನಲಾಗಿದೆ.
ಗಾಳಿ ಮಟ್ಟ ಇಳಿಕೆಗೆ PM2.5 ಮತ್ತು PM10 ಪ್ರಮುಖ ಕಾರಣವಾಗಿದ್ದು, PM2.5 ಮಟ್ಟಗಳು ಸುಮಾರು 54 µg/m³ ಆಗಿವೆ. ಈ ಹಿನ್ನೆಲೆಯಲ್ಲಿ ಮಕ್ಕಳು, ವೃದ್ಧರು ಹಾಗೂ ಉಸಿರಾಟದಲ್ಲಿ ತೊಂದರೆ ಎದುರಿಸುತ್ತಿರುವ ಜನರು ತುಂಬಾ ಎಚ್ಚರಿಕೆಯಿಂದ ಇರಬೇಕು ಎಂದು ತಜ್ಞರು ಎಚ್ಚರಿಕೆ ನೀಡಿದ್ದಾರೆ.

ಲ್ಲದೇ, ಮೈಸೂರಿನಲ್ಲಿ ಗಾಳಿಯ ಮಟ್ಟ 88 ಇದೆ. ಕಲಬುರ್ಗಿಯಲ್ಲಿ ಅಪಾಯದಲ್ಲಿದೆ. ಶಿವಮೊಗ್ಗದಲ್ಲಿ ಸಾಮಾನ್ಯ ಗಾಳಿ ಮಟ್ಟ ಇದೆ. ಬಳ್ಳಾರಿಯಲ್ಲಿ ದಿನದಿಂದ ದಿನಕ್ಕೆ ಗಾಳಿಯ ಮಟ್ಟ ಕಳಪೆಯಾಗುತ್ತಿದೆ. ಬಳ್ಳಾರಿಯಲ್ಲಿ ಗಾಳಿಯ ಮಟ್ಟ 172ಕ್ಕೆ ಇದೆ. ಹುಬ್ಬಳ್ಳಿಯಲ್ಲಿ ನಿನ್ನೆಗಿಂತ ಇಂದು ಸುಧಾರಣೆಯಾಗಿದೆ. ಉಡುಪಿಯ ಸಾಮಾನ್ಯ ಗಾಳಿಯ ಮಟ್ಟ ಇದೆ. ವಿಜಯಪುರದಲ್ಲಿ ಕೂಡ ಗಾಳಿ ಮಟ್ಟದಲ್ಲಿ ಕಳಪೆಯಾಗಿದೆ.

ಗಾಳಿ ಗುಣಮಟ್ಟ ಅರಿಯುವುದು ಹೀಗೆ..
ಉತ್ತಮ- 0-50
ಮಧ್ಯಮ – 50-100
ಕಳಪೆ – 100-150
ಅನಾರೋಗ್ಯಕರ – 150-200
ಗಂಭೀರ – 200 – 300
ಅಪಾಯಕಾರಿ – 300 -500ಕ್ಕೂ ಅಧಿಕ

Share.
Leave A Reply