Author: ashwini ashok

ಭಾರತ ಹಾಗೂ ಪಾಕಿಸ್ತಾನ ನಡುವಣ ಹೈವೋಲ್ಟೇಜ್‌ ಪಂದ್ಯಕ್ಕೆ ದಿನಗಣನೆ ಆರಂಭವಾಗಿದೆ. ಈ ಪಂದ್ಯವನ್ನು ನೋಡಲು ಇಡೀ ವಿಶ್ವವೇ ಎದುರು ನೋಡ್ತಾ ಇದೆ. ಉಭಯ ತಂಡಗಳಲ್ಲಿ ಸ್ಟಾರ್ ಆಟಗಾರರ ದಂಡೇ ಇದ್ದು, ನಿಜಕ್ಕೂ ರೋಕಚತೆ ಹೆಚ್ಚಿಸಿದೆ. ಆದರೆ ಸದ್ಯದ ಭಾರತ ತಂಡ ನಿಜಕ್ಕೂ ಪಾಕ್‌ ಆಟಗಾರರಿಗೆ ಭಯ ಹುಟ್ಟಿಸಿದ್ದಂತೆ ಕಾಣುತ್ತಿದೆ. ಟೀಮ್ ಇಂಡಿಯಾದಲ್ಲಿ ಸ್ಟಾರ್ ಆಟಗಾರರ ದಂಡೇ ಇದೆ. ಭಾರತದ ಸ್ಟಾರ್‌ ಆಟಗಾರರ ಈಗೀನ ಫಾರ್ಮ್‌ ನಿಜಕ್ಕೂ ಪಾಕ್‌ ಆಟಗಾರರಿಗೆ ಭಯ ಹುಟ್ಟಿಸಿದೆ. ಟೀಮ್ ಇಂಡಿಯಾದ ಯುವ ಆಟಗಾರನ ಬಗ್ಗೆ ಪಾಕ್‌ ಮಾಧ್ಯಮದಲ್ಲೂ ಸಾಕಷ್ಟು ಚರ್ಚೆಗಳು ನಡೆದಿವೆ. ಅಲ್ಲದೇ ಓರ್ವ ಮಾಜಿ ಪಾಕ್‌ ಕ್ರಿಕೆಟಿಗ ಕೂಡ ಅವರನ್ನ ಹಾಡಿ ಹೊಗಳಿದ್ದಾರೆ. ಆ ಪ್ಲೇಯರ್ ಬೇರೆ ಯಾರೂ ಅಲ್ಲ, ಐಸಿಸಿ ಟಿ20 ಬ್ಯಾಟಿಂಗ್‌ನಲ್ಲಿ ನಂಬರ್ 1 ಸ್ಥಾನ ಪಡೆದಿರುವ ಅಭಿಷೇಕ್‌ ಶರ್ಮಾ. ಏಷ್ಯಾ ಕಪ್‌ ಟಿ20 ಟೂರ್ನಿಯ ಮೊದಲ ಪಂದ್ಯದಲ್ಲಿ ಯುಎಇ ವಿರುದ್ಧ ಅಮೋಘ ಬ್ಯಾಟಿಂಗ್ ಪ್ರದರ್ಶನ ನೀಡಿದ್ದ ಅಭಿಷೇಕ್‌ ಶರ್ಮಾ ಅವರ ಬ್ಯಾಟಿಂಗ್…

Read More

ಹೇಮಾವತಿ ಲಿಂಕ್ ಕೆನಾಲ್ ಯೋಜನೆ ಕಾಮಗಾರಿ ಸ್ಥಳ ಪರಿಶೀಲನೆ ಮಾಡಿದ್ದು, ಅಧಿಕಾರಿಗಳ ಜೊತೆ ಚರ್ಚೆ ಮಾಡಿ ಯಾರಿಗೂ ಅನ್ಯಾಯವಾಗದಂತೆ ನೋಡಿಕೊಳ್ಳುತ್ತೇವೆ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಭರವಸೆ ನೀಡಿದರು. ತುಮಕೂರಿನ ಸುಂಕಾಪುರ ಬಳಿ ನಡೆಯುತ್ತಿರುವ ಹೇಮಾವತಿ ಲಿಂಕ್ ಕೆನಾಲ್ ಕಾಮಗಾರಿ ಪರಿವೀಕ್ಷಣೆ ನಂತರ ಜಲಸಂಪನ್ಮೂಲ ಸಚಿವರೂ ಆಗಿರುವ ಶಿವಕುಮಾರ್ ಅವರು ಮಾಧ್ಯಮಗಳನ್ನು ಉದ್ದೇಶಿಸಿ ಮಾತನಾಡಿದರು. “ಈ ವಿಚಾರದಲ್ಲಿ ಯಾವುದೇ ರೈತರು ಗಾಬರಿಯಾಗುವುದು ಬೇಡ. ನಾನು ಬೆಂಗಳೂರಿನಲ್ಲಿ ಅಧಿಕಾರಿಗಳ ಜೊತೆ ಚರ್ಚೆ ಮಾಡಿ, ತುಮಕೂರು ಜಿಲ್ಲೆಯ ರೈತರ ರಕ್ಷಣೆ ಬಗ್ಗೆ ತೀರ್ಮಾನ ಮಾಡುತ್ತೇನೆ. ಕೇವಲ ಕುಣಿಗಲ್ ಮಾತ್ರವಲ್ಲ ಎಲ್ಲಾ ಕ್ಷೇತ್ರಗಳ ಹಿತ ನಮಗೆ ಮುಖ್ಯ. ನಾವೆಲ್ಲರೂ ಸೇರಿ ಕಾನೂನು ಚೌಕಟ್ಟಿನಲ್ಲಿ ಕೆಲಸ ಮಾಡೋಣ. ನಿಮ್ಮ ಸಮಸ್ಯೆ ಏನೇ ಇದ್ದರೂ ನಾನು ಅದನ್ನು ಬಗೆಹರಿಸುತ್ತೇನೆ” ಎಂದು ಧೈರ್ಯ ತುಂಬಿದರು. “ಕೇಂದ್ರ ಸಚಿವರಾದ ಸೋಮಣ್ಣ ಹಾಗೂ ಶಾಸಕರ ಸಲಹೆ ಮೇರೆಗೆ ಹೇಮಾವತಿ ಲಿಂಕ್ ಕೆನಾಲ್ ಕಾಮಗಾರಿ ಸ್ಥಳ ಪರಿಶೀಲನೆ ಮಾಡಲು ಬಂದಿದ್ದೇನೆ. ನಾನು ಒಂದು ಕ್ಷೇತ್ರಕ್ಕೆ…

Read More

ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡದ ನಾಯಕ ರಜತ್‌ ಪಾಟೀದಾರ್‌ ಭರ್ಜರಿ ಶತಕ ಸಿಡಿಸಿದ್ದಾರೆ. ಬೆಂಗಳೂರಿನಲ್ಲಿ ನಡೆಯುತ್ತಿರುವ ದುಲಿಪ್‌ ಟ್ರೋಪಿಯಲ್ಲಿ ಪಾಟೀದಾರ್‌ ಸೆಂಚುರಿ ಸಿಡಿಸಿ ಸಖತ್‌ ಸೌಂಡ್‌ ಮಾಡಿದ್ದಾರೆ. ಕೇಂದ್ರ ತಂಡವನ್ನು ಮುನ್ನಡೆಸುತ್ತಿರುವ ರಜತ್‌ ಪಾಟೀದಾರ್‌ ದುಲೀಪ್ ಟ್ರೋಫಿಯ ಕ್ವಾರ್ಟರ್ ಫೈನಲ್‌ನಲ್ಲೂ ಶತಕ ಬಾರಿಸಿದ್ರು. ಇದೀಗ ಫೈನಲ್‌ನಲ್ಲಿಯೂ ಕೂಡ ಶತಕ ಬಾರಿಸಿ ದಾಖಲೆ ಬರೆದಿದ್ದಾರೆ. 112 ಎಸೆತಗಳಲ್ಲಿ 100 ರನ್‌ ಗಳಿಸಿದ ಪಾಟೀದಾರ್‌, 12 ಬೌಂಡರಿ ಮತ್ತು 2 ಸಿಕ್ಸರ್‌ ಬಾರಿಸಿದ್ದಾರೆ. ಅಂದಹಾಗೆ ಇದು ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ ರಜತ್ ಅವರ 15 ನೇ ಶತಕವಾಗಿದೆ. ದುಲೀಪ್ ಟ್ರೋಫಿಯಲ್ಲಿ ಅಬ್ಬರಿಸುತ್ತಿರುವ ರಜತ್ ಪಾಟಿದಾರ್ ಆಡಿರುವ 4 ಇನ್ನಿಂಗ್ಸ್‌ಗಳಲ್ಲಿ 369 ರನ್ ಗಳಿಸಿದ್ದಾರೆ. ಈ ಮೂಲಕ ಈ ಟೂರ್ನಿಯಲ್ಲಿ ಅತಿ ಹೆಚ್ಚು ರನ್ ಬಾರಿಸಿದವರ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದಾರೆ.

Read More

ತುಮಕೂರಿನ ಗುಬ್ಬಿಯಲ್ಲಿರುವ ಎಚ್ ಎ ಎಲ್ ಹೆಲಿಕಾಪ್ಟರ್ ತಯಾರಿಕಾ ಕೇಂದ್ರಕ್ಕೆ ಡಿಸಿಎಂ ಡಿ ಕೆ ಶಿವಕುಮಾರ್ ಅವರು ಶುಕ್ರವಾರ ಭೇಟಿ ನೀಡಿದ್ದರು. ದೆಹಲಿಯಲ್ಲಿ ಕರ್ನಾಟಕ ಸರಕಾರದ ವಿಶೇಷ ಪ್ರತಿನಿಧಿ ಟಿ ಬಿ ಜಯಚಂದ್ರ, ಶಾಸಕ ಗುಬ್ಬಿ ಶ್ರೀನಿವಾಸ್ ಮತ್ತಿತರರು ಇದ್ದರು. ನಂತರ ಹೇಮಾವತಿ ಲಿಂಕ್ ಕೆನಾಲ್ ಕಾಮಗಾರಿ ವೀಕ್ಷಣೆ ಮಾಡಿದರು. ಸುಂಕಾಪುರದ ಟಿ.ಬಿ ಕೆನಾಲ್ 70 ನೇ ಕಿ.ಮೀ.ನಲ್ಲಿ ಹೇಮಾವತಿ ಲಿಂಕ್ ಕೆನಾಲ್ ಕಾಮಗಾರಿಯನ್ನು ಜಲ ಸಂಪನ್ಮೂಲ ಸಚಿವರೂ ಆಗಿರುವ ಡಿಸಿಎಂ ಡಿ ಕೆ ಶಿವಕುಮಾರ್ ಅವರು ವೀಕ್ಷಿಸಿದರು. ಭದ್ರಾ ಜಲಾಶಯಕ್ಕೆ ಬಾಗಿನ ಸಮರ್ಪಣೆ!ಬಳಿಕ ಶಿವಮೊಗ್ಗ ಜಿಲ್ಲೆ ಲಕ್ಕವಳ್ಳಿಯ ಭದ್ರಾ ಜಲಾಶಯಕ್ಕೆ ಡಿಸಿಎಂ ಡಿ ಕೆ ಶಿವಕುಮಾರ್ ಅವರು ಪೂಜೆ ಸಲ್ಲಿಸಿ, ಬಾಗಿನ ಸಮರ್ಪಿಸಿದರು. ಸಚಿವ ಎಸ್ ಎಸ್ ಮಲ್ಲಿಕಾರ್ಜುನ, ಸಂಸದೆ ಪ್ರಭಾ ಮಲ್ಲಿಕಾರ್ಜುನ, ಶಾಸಕ ಶಿವಗಂಗಾ ಮತ್ತಿತರರು ಜತೆಗಿದ್ದರು. Read Also : ಬೆಂಗಳೂರಿಗರೇ ಇತ್ತ ಗಮನಿಸಿ : ನೀರು ಪೂರೈಕೆಯಲ್ಲಿ ವ್ಯತ್ಯಯ, 3 ದಿನ ಕಾವೇರಿ ನೀರು ಬರಲ್ಲ..!

Read More

ಬೆಂಗ್ಳುರಲ್ಲಿ ಮೂರು ದಿನಗಳ ಕಾಲ ಕಾವೇರಿ ನೀರು ಬರೋದಿಲ್ಲ. ಕಾವೇರಿ ನೀರು ಸರಬರಾಜು ತುರ್ತು ನಿರ್ವಹಣಾ ಕಾಮಗಾರಿ ಹಿನ್ನೆಲೆ 3 ದಿನ ಕಾವೇರಿ ನೀರು ಪೂರೈಕೆ ಸ್ಟಾಪ್‌ ಆಗಲಿದೆ. ಸೆಪ್ಟೆಂಬರ್ 15, 16 ಮತ್ತು 17 ರಂದು ಒಟ್ಟು 5 ಹಂತಗಳಲ್ಲಿ ಸುಮಾರು 60 ಗಂಟೆಗಳ ಕಾಲ ನೀರು ಸರಬರಾಜು ಸ್ಥಗಿತವಾಗಲಿದೆ. ಈ ಬಗ್ಗೆ ಬೆಂಗಳೂರು ಜಲಮಂಡಳಿ ಅಧ್ಯಕ್ಷ ಡಾ.ವಿ.ರಾಮ್‌ ಪ್ರಸಾತ್‌ ಮನೋಹರ್‌ ಮಾಹಿತಿ ನೀಡಿದ್ದು, ಕಾಮಗಾರಿಗಳನ್ನು ಕೈಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಕಾವೇರಿ ನೀರು ಸರಬರಾಜು ಯೋಜನೆಯ ವಿವಿಧ ಹಂತಗಳ ಜಲರೇಚಕ ಯಂತ್ರಾಗಾರಗಳನ್ನು ಬಂದ್‌ ಮಾಡಲಾಗ್ತಿದೆ. ಈ ಜಲರೇಚಕ ಯಂತ್ರಾಗಾರಗಳ ಸ್ಥಗಿತತೆಯಿಂದ ಕಾವೇರಿ ನೀರು ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಲಿದೆ ಎಂದಿದ್ದಾರೆ. ಆದ್ರಿಂದ ಸೆಪ್ಟೆಂಬರ್‌ 15ರ ಬೆಳಗ್ಗೆ 1ರಿಂದ ಸೆಪ್ಟೆಂಬರ್ 17ರ ಮಧ್ಯಾಹ್ನ 1ರವರೆಗೆ ಒಟ್ಟು 60 ಗಂಟೆಗಳ ಕಾಲ ಕಾವೇರಿ ನೀರು ಸಿಗೋದಿಲ್ಲ. ಹೀಗಾಗಿ ಸಾರ್ವಜನಿಕರು ಮುಂಚಿತವಾಗಿ ಮೂರು ದಿನಗಳ ಕಾಲ ನೀರು ಸಂಗ್ರಹಿಸಿಟ್ಟುಕೊಳ್ಳಲು ಜಲ ಮಂಡಳಿ ಮನವಿ ಮಾಡಿದೆ. Read Also…

Read More

ಭಾರತ್ ಹೆವಿ ಎಲೆಕ್ಟ್ರಿಕಲ್ಸ್ ಲಿಮಿಟೆಡ್‌ನಲ್ಲಿ ಆರ್ಟಿಸನ್ಸ್ ಗ್ರೇಡ್-IV ಹುದ್ದೆಗಳು ಖಾಲಿ ಇದ್ದು, ನೇಮಕಾತಿಗಾಗಿ ಅಧಿಸೂಚನೆ ಪ್ರಕಟಿಸಿದೆ. BHELನಲ್ಲಿ ಒಟ್ಟು 515 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದ್ದು, ಆಸಕ್ತರು ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಬಹುದು. ತಮಿಳುನಾಡು – ಮಧ್ಯಪ್ರದೇಶ – ಕರ್ನಾಟಕ – ಉತ್ತರ ಪ್ರದೇಶ ಈ ರಾಜ್ಯಗಳಿಗೆ ಪೋಸ್ಟಿಂಗ್‌ ಆಗಲಿದೆ. ತಿಂಗಳಿಗೆ 29,500 ರೂಪಾಯಿಯಿಂದ 65,000 ರೂಪಾಯಿವರೆಗೆ ಮಾಸಿಕ ವೇತನ ಇರಲಿದೆ. BHEL ಅಧಿಕೃತ ಅಧಿಸೂಚನೆಯ ಪ್ರಕಾರ ಅಭ್ಯರ್ಥಿಯು 10 ನೇ ತರಗತಿ, ಮಾನ್ಯತೆ ಪಡೆದ ಮಂಡಳಿಗಳು ಅಥವಾ ವಿಶ್ವವಿದ್ಯಾಲಯಗಳಿಂದ ITI ಪೂರ್ಣಗೊಳಿಸಿರಬೇಕು. ಜೊತೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಯ ವಯಸ್ಸು 27 ವರ್ಷಗಳ ಒಳಗಿರಬೇಕು. ಆದ್ರೆ, OBC, SC/ST, ಕಂಪ್ಯೂಟರ್ ಆಧಾರಿತ ಪರೀಕ್ಷೆ, ಕೌಶಲ್ಯ ಪರೀಕ್ಷೆ ಮತ್ತು ದಾಖಲೆ ಪರಿಶೀಲನೆ ಮೂಲಕ ಸಂದರ್ಶನ ಪ್ರಕ್ರಿಯೆ ನಡೆಯಲಿದೆ.

Read More

ರಾತ್ರಿ ಸಮಯದಲ್ಲಿ ಚುಮುಗುಡುವ ಚಳಿಯ ಮಧ್ಯೆ ಕೂಲ್‌ ಕೂಲ್‌ ಐಸ್‌ಕ್ರೀಂ ತಿನ್ನುವ ಅಭ್ಯಾಸ ನಿಮಿಗಿದ್ಯಾ? ಹಾಗಿದ್ರೆ ಆರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳೋದು ಖಂಡಿತ. ಯಾಕಂದ್ರೆ ರಾತ್ರಿ ವೇಳೆ ಐಸ್‌ಕ್ರೀಂ ತಿನ್ನೋದ್ರಿಂದ ಫಿಸಿಕಲ್‌ ಹಾಗೂ ಮೆಂಟಲ್‌ ಹೆಲ್ತ್‌ ಎರಡರ ಮೇಲೂ ಪರಿಣಾಮ ಬೀರುತ್ತೆ. ಸಾಮಾನ್ಯವಾಗಿ ಸೂರ್ಯ ಮುಳುಗಿದ ಮೇಲೆ ಲಘು ಆಹಾರ ಅಂದ್ರೆ ಲೈಟ್‌ ಫುಡ್‌ ಸೇವನೆ ಮಾಡ್ಬೇಕು ಅಂತಾ ಹೇಳಲಾಗುತ್ತೆ. ಯಾಕಂದ್ರೆ ಸೂರ್ಯಾಸ್ತದ ನಂತರ ನಮ್ಮ ದೇಹದ ಡೈಜೆಷನ್‌ ನಿಧಾನವಾಗುತ್ತೆ. ಐಸ್‌ಕ್ರೀಂ ತುಂಬಾ ಹೆವಿಯಾದ ಆಹಾರ. ಏನಿಲ್ಲ ಅಂದ್ರೂ 300ರಿಂದ 400 ಕ್ಯಾಲೊರೀಸ್‌ ಈ ಐಸ್‌ಕ್ರೀಂನಲ್ಲಿ ಇರುತ್ತೆ. ಇದು ಒಂದು ಹೊತ್ತಿನ ಊಟಕ್ಕೆ ಸಮ. ಅಂದ್ರೆ ನೀವು ಊಟ ಮಾಡಿ ಆಮೇಲೆ ಐಸ್‌ಕ್ರೀಂ ತಿಂದ್ರೆ ಎರಡು ಬಾರಿ ಊಟ ಮಾಡಿದಷ್ಟು ಕ್ಯಾಲೊರಿ ನಿಮ್ಮ ದೇಹ ಸೇರುತ್ತೆ. ಮೊದಲೇ ರಾತ್ರಿ ಹೊತ್ತಲ್ಲಿ ಡೈಜೆಷನ್‌ ನಿಧಾನವಾಗಿರೋದ್ರಿಂದ ಜೀರ್ಣಕ್ರಿಯೆಗೆ ತೊಂದರೆ ಆಗುತ್ತೆ. ಇದ್ರಿಂದ ಗ್ಯಾಸ್ಟ್ರಿಕ್‌, ಆಸಿಡಿಟಿ, ಹೊಟ್ಟೆಯುಬ್ಬರದಂತಹ ಗಟ್‌ ರಿಲೇಟೆಡ್‌ ಆರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಬಹುದು. ಹಾಗೆ ನಿಮ್ಮ…

Read More

ಶುಭ ಶುಕ್ರವಾರದಂದೆ ಸಿನಿಪ್ರಿಯರಿಗೆ ರಾಜ್ಯ ಸರ್ಕಾರದಿಂದ ಗುಡ್‌ನ್ಯೂಸ್‌ ಸಿಕ್ಕಿದೆ. ಏನಪ್ಪಾ ಥಿಯೇಟರ್‌ಗೆ ಹೋಗಿ ಒಂದ್‌ ಮೂವಿ ನೋಡಲಿಕೆ ಆಗ್ತಿಲ್ಲಾ.. ಅಷ್ಟು ಇದೆ ಟಿಕೆಟ್‌ ಪ್ರೈಸ್‌ ಅನ್ನೊರಿಗೆ. ರಾಜ್ಯಸರ್ಕಾರ ಬಿಗ್‌ ರಿಲೀಫ್‌ ಕೊಟ್ಟಿದೆ. ಸಿನಿಪ್ರಿಯರು ಇನ್ಮುಂದೆ ಥಿಯೇಟರ್‌ಗೆ ಚಿಂತೆಯಿಲ್ಲದೇ ಜೇಬಲ್ಲಿ ಇನ್ನೂರೂಪಾಯಿ ಇಟ್ಕೊಂಡು ಹೋದ್ರೂ ಸಾಕು.. ನೀವು ನೋಡಬೇಕೆಂದೆರೋ ಸಿನಿಮಾದ ಟಿಕೆಟ್‌ ನಿಮ್ಮ ಕೈ ಸೇರುತ್ತೆ. ಹೌದು.. ರಾಜ್ಯದಲ್ಲಿ ಚಿತ್ರ ಮಂದಿರಕ್ಕೆ ಹೋಗುವವರ ಸಂಖ್ಯೆ ಕಡಿಮೆಯಾದ ಕಾರಣ ಅನೇಕ ಚಿತ್ರಮಂದಿರಗಳು ಮುಚ್ಚಿಹೋಗಿವೆ, ಕನ್ನಡ ಚಿತ್ರರಂಗ ಅನೇಕಸವಾಲುಗಳನ್ನ ಎದುರಿಸುತ್ತೆ, ಇಂಥ ಸಮಯದಲ್ಲಿ ರಾಜ್ಯ ಸರ್ಕಾರ ಮಹತ್ತರ ನಿರ್ಧಾರವನ್ನ ಕೈಗೊಂಡಿದೆ. ಹೌದು ಸಿನಿಮಾಗ ಟಿಕೆಟ್‌ ದರ ದುಬಾರಿ ಆಗುತ್ತಿರುವ ಕಾರಣ ಅನೇಕರು ಚಿತ್ರಮಂದಿರಕ್ಕೆ ಹೋಗಲು ಹಿಂದೇಟು ಹಾಕುತ್ತಿದ್ದರು. ಅದರಲ್ಲೂ ಪರಭಾಷಾ ಸಿನಿಮಾಗಳು ಕರ್ನಾಟಕದಲ್ಲಿ ರಿಲೀಸ್ ಆಗುತ್ತವೆ ಎಂದರೆ ಟಿಕೆಟ್ ದರ 500ರಿಂದ ಆರಂಭವಾಗಿ 1000 ರೂಪಾಯಿ ತಲುಪಿದ ಉದಾಹರಣೆಗಳು ಸಹ ಇದೆ. ಇದಕ್ಕೆ ಕಡಿವಾಣ ಹಾಕಲು ಕರ್ನಾಟಕ ಸರ್ಕಾರ ಏಕರೂಪ ಟಿಕೆಟ್ ದರ ಜಾರಿಗೆ ತರೋದಾಗಿ…

Read More

ದೇಶದ ನೂತನ ಉಪರಾಷ್ಟ್ರಪತಿಯಾಗಿ ಸಿ.ಪಿ ರಾಧಾಕೃಷ್ಣನ್ ‍ಪ್ರಮಾಣ ವಚನ ಸ್ವೀಕಾರ ಮಾಡಿದರು. ದೇಶದ 15ನೇ ಉಪರಾಷ್ಟ್ರಪತಿಯಾಗಿ ಸಿ.ಪಿ ರಾಧಾಕೃಷ್ಣನ್ ಅವರಿಂದು ಗಣ್ಯರ ಸಮ್ಮುಖದಲ್ಲಿ ಪ್ರಮಾಣವಚನ ಸ್ವೀಕರಿಸಿದರು. ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಪ್ರಮಾಣವಚನ ಬೋಧಿಸಿದರು. ರಾಷ್ಟ್ರಪತಿ ಭವನದಲ್ಲಿ ನಡೆದ ಪ್ರಮಾಣವಚನ ಸ್ವೀಕಾರ ಸಮಾರಂಭದಲ್ಲಿ ಪ್ರಧಾನಿ ನರೇಂದ್ರ ಮೋದಿ, ಅಮಿತ್‌ ಶಾ, ರಾಜನಾಥ್‌ ಸಿಂಗ್‌, ಮಾಜಿ ಉಪರಾಷ್ಟ್ರಪತಿ ಜಗದೀಪ್‌ ಧನ್ಕರ್‌ ಸೇರಿದಂತೆ ನೂರಾರು ಗಣ್ಯರ ಸಮ್ಮುಖದಲ್ಲಿ ಪ್ರಮಾಣ ವಚನ ಸ್ವೀಕರಿಸಿದರು. ಒಡಿಶಾ ಸಿಎಂ ಮೋಹನ್ ಚರಣ್ ಮಾಝಿ, ಕರ್ನಾಟಕ ರಾಜ್ಯಪಾಲ ಥಾವರ್‌ಚಂದ್ ಗೆಹ್ಲೋಟ್, ಲೋಕಸಭೆ ಸ್ಪೀಕರ್ ಓಂ ಬಿರ್ಲಾ, ಜೆ.ಪಿ ನಡ್ಡಾ ,ಹೆಚ್ ಡಿ ಕುಮಾರಸ್ವಾಮಿ, ನಿತಿನ್ ಗಡ್ಕರಿ, ಶೋಭಾ ಕರಂದ್ಲಾಜೆ, ಆಂಧ್ರ ಸಿಎಂ ಚಂದ್ರಬಾಬು ನಾಯ್ಡು, ಪಂಜಾಬ್ ರಾಜ್ಯಪಾಲ ಮತ್ತು ಚಂಡೀಗಢ ಆಡಳಿತಾಧಿಕಾರಿ ಗುಲಾಬ್ ಚಂದ್ ಕಟಾರಿಯಾ, ಜಾರ್ಖಂಡ್‌ ರಾಜ್ಯಪಾಲ ಸಂತೋಷ್ ಗಂಗ್ವಾರ್ ಮತ್ತು ಮಧ್ಯಪ್ರದೇಶ ಸಿಎಂ ಮೋಹನ್ ಯಾದವ್ ಸೇರಿದಂತೆ ಹಲವರು ಭಾಗಿಯಾಗಿದ್ದಾರೆ. Read Also : ರಾಜ್ಯದಲ್ಲಿ ಮತ್ತೆ…

Read More

ಕರ್ನಾಟಕದಲ್ಲಿ ಮತ್ತೆ ಸೆಪ್ಟೆಂಬರ್‌ 22ರಿಂದ ಸಾಮಾಜಿಕ, ಜಾತಿ ಗಣತಿ ಶುರುವಾಗಲಿದೆ. ಇದೇ ತಿಂಗಳ 22 ರಿಂದ ರಾಜ್ಯದಲ್ಲಿ ಹೊಸ ಜಾತಿ ಗಣತಿ ನಡೆಯಲಿದೆ. ಮೊದಲಿಗೆ ಆಶಾ ಕಾರ್ಯಕರ್ತರು ಮನೆ ಮನೆಗೂ ಸ್ಟಿಕ್ಕರ್ ಅಂಟಿಸಿ 60 ಪ್ರಶ್ನೆಗಳಿರುವ ಬುಕ್​ಲೆಟ್ ಕೊಡಲಿದ್ದಾರೆ. ಬಳಿಕ ಶಿಕ್ಷಕರು ಗಣತಿಗೆ ಮನೆ ಮನೆಗೂ ತೆರಳಿ, ಬುಕ್​ಲೆಟ್​​ನಲ್ಲಿರುವ 60 ಪ್ರಶ್ನೆಗಳಿಗೆ ಮಾಹಿತಿ ಕಲೆ ಹಾಕಲಿದ್ದಾರೆ. ಈ ಬಗ್ಗೆ ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ಜಾತಿ ಗಣತಿ ಬಗ್ಗೆ ಮಾಹಿತಿ ನೀಡಿದರು. ಸೆಪ್ಟೆಂಬರ್ 22ರಿಂದ ಅಕ್ಟೋಬರ್ 7 ರವರೆಗೆ 15 ದಿನಗಳ ಕಾಲ ಸಮೀಕ್ಷೆ ನಡೆಯಲಿದೆ ಎಂದು ಅವರು ತಿಳಿಸಿದರು. ಕಳೆದ ಬಾರಿಯ ಸಮೀಕ್ಷೆಗೆ ಒಕ್ಕಲಿಗರು ಮತ್ತು ಲಿಂಗಾಯತರಿಂದ ಭಾರಿ ವಿರೋಧ ವ್ಯಕ್ತವಾಗಿತ್ತು. ನಂತರ, ಆ ಸಮೀಕ್ಷಾ ವರದಿಯನ್ನು ಸರ್ಕಾರ ಅಂಗೀಕರಿಸಿರಲಿಲ್ಲ. ಕಾಂಗ್ರೆಸ್ ಹೈಕಮಾಂಡ್ ಸೂಚನೆ ಮೇರೆಗೆ ಇದೀಗ ಮತ್ತೆ ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆಗೆ ಮುಂದಾಗಿದೆ. ಶಿಕ್ಷಕರು ಮನೆ ಮನೆಗೂ ಭೇಟಿ ನೀಡಿ ಹೊಸ ಸಮೀಕ್ಷೆ ನಡೆಸಲಿದ್ದಾರೆ. ಹೊಸ ಜಾತಿಗಣತಿ…

Read More