ಮೆಕ್ಸಿಕೋ ಸಿಟಿ: ರೈಲು ಹಳ್ಳಿ ತಪ್ಪಿದ ಪರಿಣಾಮ 13 ಜನ ಸಾವನ್ನಪ್ಪಿ, 98 ಜನ ಗಂಭೀರವಾಗಿ ಗಾಯಗೊಂಡಿರುವ ಘಟನೆ ನಡೆದಿದೆ.

ಈ ಘಟನೆ ದಕ್ಷಿಣ ಮೆಕ್ಸಿಕೋದ (South Mexico) ಓಕ್ಸಾಕದಲ್ಲಿ (Oaxaca) ಇಂಟರ್ ಓಷಿಯಾನಿಕ್ ಹತ್ತಿರ ಈ ಘಟನೆ ನಡೆದಿದೆ. ಘಟನೆಯಲ್ಲಿ 13 ಜನ ಸಾವನ್ನಪ್ಪಿ, 98 ಜನ ಗಾಯಗೊಂಡಿದ್ದಾರೆ. ರೈಲಿನಲ್ಲಿ ಒಟ್ಟು 250 ಜನ ಪ್ರಯಾಣಿಕರಿದ್ದರು. ರೈಲು, ಲೀನಾ ಕ್ರೂಜ್ ಬಂದರುನಿಂದ ಕೋಟ್ಜಾಕೋಲ್ಕೋಸ್‌ಕ್ಕೆ ತೆರಳುತ್ತಿತ್ತು. ನಿಜಾಂಡಾ ಪಟ್ಟಣದ ಹತ್ತಿರ ತೆರಳುತ್ತಿದ್ದಾಗ ರೈಲು ಹಳಿ ತಪ್ಪಿದೆ.

ಪರಿಣಾಮ 13 ಜನರು ಸಾವನ್ನಪ್ಪಿದ್ದು, 98 ಜನರು ಗಾಯಗೊಂಡಿದ್ದಾರೆ. 36 ಜನರಿಗೆ ಚಿಕಿತ್ಸೆ ನೀಡಲಾಗಿದೆ. ಈ ಪೈಕಿ 193 ಜನರು ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎನ್ನಲಾಗಿದೆ. ಮೆಕ್ಸಿಕೋ ಅಧ್ಯಕ್ಷೆ ಕ್ಲೌಡಿಯಾ ಶೀನ್‌ಬಾಮ್ ಎಕ್ಸ್‌ನಲ್ಲಿ ದುಃಖ ವ್ಯಕ್ತಪಡಿಸಿದ್ದು, ಮೃತರ ಕುಟುಂಬಸ್ಥರಿಗೆ ಅಗತ್ಯ ಸಹಾಯ ಮಾಡಲು ಹಿರಿಯ ಅಧಿಕಾರಿಗಳಿಗೆ ಸೂಚಿಸಿದ್ದೇನೆ ಎಂದಿದ್ದಾರೆ. ಇಂಟರ್ ಓಷಿಯಾನಿಕ್ ರೈಲು 2023ರಲ್ಲಿ ಉದ್ಘಾಟನೆಯಾಗಿತ್ತು. ಇಂಟರ್ ಓಷಿಯಾನಿಕ್ ಕಾರಿಡಾರ್ ಯೋಜನೆಯ ಭಾಗವಾಗಿದೆ.

Share.
Leave A Reply