ಬೆಂಗಳೂರು: ಆಕಾಶದೆತ್ತರಕ್ಕೆ ಹಾರಾಟ ನಡೆಸುತ್ತಿರುವ ಚಿನ್ನದ ಬೆಲೆ ಕಳೆದ ಕೆಲವು ದಿನಗಳಿಂದ ಏರಿಳಿತ ಕಾಣುತ್ತಿದೆ. ಇಂದು ಮತ್ತೆ ಏರಿಕೆಯ ಹಾದಿ ಹಿಡಿದಿದೆ. 10 ಗ್ರಾಂ ಶುದ್ಧ ಚಿನ್ನದ ಬೆಲೆ 1 ಲಕ್ಷದ 30 ಸಾವಿರ ರೂ. ದಾಟಿದೆ. ಚಿನ್ನದ ಮೇಲಿನ ಹೂಡಿಕೆ ಹೆಚ್ಚಳದಿಂದ ಚಿನ್ನದ ಬೆಲೆ ಭಾರಿ ಏರುತ್ತಿದೆ.
ಡಿ. 8ರಂದು ಮಾರುಕಟ್ಟೆಗಳಲ್ಲಿ 24 ಕ್ಯಾರೆಟ್ ಚಿನ್ನದ ಬೆಲೆ ಗ್ರಾಂ ಒಂದಕ್ಕೆ 13,042 ರೂ. ಆಗಿದೆ. ಇಂದು ಮತ್ತೆ ಗ್ರಾಂಗೆ 27 ರೂ. ಹೆಚ್ಚಳವಾಗಿದೆ. 10 ಗ್ರಾಂ ಶುದ್ಧ ಚಿನ್ನಕ್ಕೆ 1,30,420 ರೂ. ಇದೆ. 24 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆ 270 ರೂ. ಏರಿಕೆ ಕಂಡಿದೆ.
22 ಕ್ಯಾರೆಟ್ 1 ಗ್ರಾಂ ಬೆಲೆ 11,955 ರೂ. ಆಗಿದ್ದು, 25 ರೂ. ಏರಿಕೆ ಆಗಿದೆ. 10 ಗ್ರಾಂ ಬೆಲೆ 1,19,550 ರೂಪಾಯಿ ಇದೆ. ಇಂದು 10 ಗ್ರಾಂ ನಲ್ಲಿ 250 ರೂ ಹೆಚ್ಚಳಾಗಿದೆ.
ಬೆಳ್ಳಿ ಬೆಲೆಯಲ್ಲಿ ಇಂದು ಇಳಿಕೆ ಕಂಡಿದ್ದು, 1 ರೂ. ಕಡಿತವಾಗಿದೆ. ಇಂದು ಒಂದು ಕೆಜಿ ಬೆಳ್ಳಿಯ ದರ 1,89,000 ರೂ. ಆಗಿದೆ.
ಸೂಚನೆ: ನಾವು ನೀಡಿರುವ ಚಿನ್ನ ಹಾಗೂ ಬೆಳ್ಳಿಯ ದರವೇ ನಿಖರ ಎಂದು ಹೇಳಲು ಆಗುವುದಿಲ್ಲ. ಪ್ರಮುಖ ಜ್ಯುವೇಲರಿ ಶಾಪ್ ಗಳಿಂದ ಈ ಮಾಹಿತಿ ಪಡೆದಿರುತ್ತೇವೆ. ಆದರೆ, ಚಿನ್ನಾಭರಣಗಳ ಮೇಲೆ ಅಂಗಡಿಯವರು ವಿವಿಧ ದರಗಳನ್ನು ನಿಗದಿ ಮಾಡಿರುತ್ತಾರೆ.
