Site icon BosstvKannada

Kamal Haasan ಹೇಳಿಕೆ ಬಗ್ಗೆ ಶಿವಣ್ಣನ ಫಸ್ಟ್‌ ರಿಯಾಕ್ಷನ್‌…! : ಯಾಕ್‌ ಹೀಗಂದ್ರು?

Kamal Haasan

ತಮಿಳು ನಟ Kamal Haasan ಶಿವಣ್ಣನ ಮುಂದೆಯೇ ‘ತಮಿಳಿನಿಂದ ಕನ್ನಡ ಹುಟ್ಟಿದೆ’ ಅಂತ ಹೇಳೋ ಮೂಲಕ ಕನ್ನಡಿಗರ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಇತ್ತೀಚೆಗೆ ತಮ್ಮ ಸಿನಿಮಾ ಥಗ್‌ ಲೈಪ್‌ ಆಡಿಯೋ ಲಾಂಚ್‌ ಕಾರ್ಯಕ್ರಮ ದಲ್ಲಿ ಕೋಟ್ಯಾಂತರ ಕರುನಾಡಿಗರ ಜೀವನಾಡಿಯಾಗಿರುವ ನಮ್ಮ ಕನ್ನಡ ಭಾಷೆಗೆ ನಟ ಕಮಲ್ ಹಾಸನ್‌ ಅವಮಾನಿಸಿದ್ದಾರೆ.

ಇನ್ನೂ ಈ ಬಗ್ಗೆ ಮೊದಲ ಬಾರಿಗೇ ನಟ ಶಿವಣ್ಣ ಪ್ರತಿಕ್ರಿಯೆ ನೀಡಿದ್ದಾರೆ. ಈ ಬಗ್ಗೆ ಮಾತಾಡಿದ ಅವರು, ಕಮಲ್ ಹಾಸನ್ ನನಗೆ ಬಹಳ ಇಷ್ಟ. ನನಗೆ ಅವರು ಫೆವರೇಟ್. ನನ್ನ ತಂದೆ ಮತ್ತು ಕಮಲ್ ಅವರ ಸಂಬಂಧ ಬೇರೆ ಅದಕ್ಕಾಗಿ ನಾನು ಅವರ ಅಭಿಮಾನಿಯಲ್ಲ. ನಾನು ಕಮಲ್ ಅವರನ್ನ ನನಗೆ ಸ್ಪೂರ್ತಿ ಅಂತ ಭಾವಿಸಿದ್ದೀನಿ. ನಮ್ಮನ್ನ ಅವರ ಕಾರ್ಯಕ್ರಮಕ್ಕೆ ಹೋದ್ವಿ ಬಂದ್ವಿ ಅಷ್ಟೇ.

Also Read: ವೇಸ್ಟ್‌ ಅಂದವರ ಬಾಯಲ್ಲಿ ಬೆಸ್ಟ್, ‌ಬೆಂಕಿಯಲ್ಲಿ ಅರಳಿದ ‌Rishabh Pant !

ಕನ್ನಡದ ಬಗ್ಗೆ Kamal Haasan ಅವರಿಗೂ ಪ್ರೀತಿ ಇದೆ. ಕಮಲ್ ಅವರು ಬೆಂಗಳೂರಿಗೆ ಬಂದಾಗ ಕೇಳಬಹುದಿತ್ತು. ಈಗ ಯಾಕೆ ಅದನ್ನ ದೊಡ್ಡ ವಿಚಾರ ಮಾಡುತ್ತೀರಾ? ಬರೀ ಬಾಯಲ್ಲಿ ಮಾತ್ರ ಕನ್ನಡ ಕನ್ನಡ ಅನ್ನಬಾರದು. ಕನ್ನಡಕ್ಕಾಗಿ ನಾನು ಹೋರಾಟ ಮಾಡುತ್ತೀನಿ, ಕನ್ನಡಕ್ಕಾಗಿ ನಾನು ಸಾಯುತ್ತೀನಿ. ಕನ್ನಡ ಅಂತೀರಾ ಸ್ಟಾರ್ ನಟರಿಗೆ ಮಾತ್ರ ಬೆಂಬಲಿಸೋದು, ಹೊಸಬರನ್ನ ಕೂಡ ಬೆಳೆಸಬೇಕು. ಕಮಲ್ ಹಾಸನ್ ಅವರಿಗೆ ಇದೆಲ್ಲ ಗೊತ್ತಾಗುತ್ತೆ ಅವರೇ ಅದನ್ನ ಸರಿ ಮಾಡಿಕೊಳ್ಳುತ್ತಾರೆ ಎಂದಿದ್ದಾರೆ.

Exit mobile version