ನಿನ್ನೆ ನಡೆದ ಆರ್‌ಸಿಬಿ ಮತ್ತು ಲಖ್ನೋ ನಡುವಿನ ಮಹತ್ವದ ಪಂದ್ಯದಲ್ಲಿ ಆರ್‌ಸಿಬಿ ತಂಡ ರೋಚಕ ಗೆಲುವು ಸಾಧಿಸಿತ್ತು. ಆದ್ರೆ ಈ ಪಂದ್ಯದಲ್ಲಿ ಲಖ್ನೋ ತಂಡದ ನಾಯಕ Rishabh pant ಅದ್ಭುತ ಪ್ರದರ್ಶನ ನೀಡಿ ಶತಕ ಕೂಡ ಗಳಿಸಿದ್ರು. ಆ ಶತಕದ ಹಿಂದೆ ಅವರ ಶ್ರಮ ಮತ್ತು ಒಂದು ದುರ್ಘಟನೆಯಿಂದ ಅವರು ಪಾರಾದ ವಿಚಾರವೇ ರೋಚಕವಾಗಿದೆ.
2022ರಲ್ಲಿ ಕ್ರಿಕೆಟರ್ Rishabh pant ಅವರಿಗೆ ಭೀಕರ ಅಪಘಾತ ಆಗಿತ್ತು. ಅವರ ಕಾರ್ ನುಚ್ಚು ನೂರಾಗಿತ್ತು. ಆ ಕಾರ್ ಸುಟ್ಟು ಕರಕಲಾಗಿದ್ದು, ನೋಡಿದ್ದರೆ ರಿಷಬ್ ಪಂತ್‌ಗೆ ಯಾವ ಮಟ್ಟಕ್ಕೆ ಗಾಯಗಳಾಗಿವೆ ಎಂದು ಊಹಿಸಲು ಆಗೋದಿಲ್ಲ. ಅಷ್ಟು ದೊಡ್ಡ ಅಪಘಾತ ಆಗಿದ್ದಕ್ಕೆ ರಿಷಬ್ ಪಂತ್ ಅವರು ತಿಂಗಳಾನುಗಟ್ಟಲೇ ಬೆಡ್ ರೆಸ್ಟ್ ಪಡೆದಿದ್ದರು. ಕ್ರಿಕೆಟ್ ಲೋಕದಲ್ಲಿ ಎಷ್ಟು ಫಿಟ್ ಆಗಿದ್ದರೂ ಸಾಲದು. ಸಾಕಷ್ಟು ಬಾರಿ ಫಾರ್ಮ್‌ನಲ್ಲಿ ಇರೋಕೆ ಆಗದು. ಹೀಗಿರಬೇಕಾದರೆ ಅಪಘಾತ ಆದರೆ ಏನು ಕಥೆ?.
ಇನ್ನು ಕ್ರಿಕೆಟ್‌ನಲ್ಲಿ ಮಿಂಚಲು ಮಾನಸಿಕವಾಗಿ, ದೈಹಿಕವಾಗಿ ಕೂಡ ರಿಷಬ್ ಪಂತ್ ಅವರು ಸ್ಟ್ರಾಂಗ್ ಇರಬೇಕಾಗುತ್ತದೆ. ಈಗ LSG v/s RCB ಮ್ಯಾಚ್ ವೇಳೆ ರಿಷಬ್ ಪಂತ್ ಅವರು 61 ಬಾಲ್‌ಗಳಲ್ಲಿ 118 ರನ್ ಪಡೆದಿದ್ದರು. ಇನ್ನು ಮ್ಯಾಚ್ ವೇಳೆ ಸಿಕ್ಕಾಪಟ್ಟೆ ಆಕ್ಟಿವ್ ಆಗಿದ್ದ ರಿಷಬ್ ಪಂತ್ ಅವರು ಜಿಮ್ನಸ್ಟಿಕ್ ಕೂಡ ಮಾಡಿದ್ದರು. ಇದನ್ನು ನೋಡಿ ಅನೇಕರು ಬೆಚ್ಚಿ ಬೆರಗಾಗಿದ್ದಾರೆ. ಅಪಘಾತದ ಬಳಿಕ ರಿಷಬ್ ಪಂತ್ ಎಷ್ಟು ಜಿಮ್ ವರ್ಕೌಟ್ ಮಾಡಿದ್ದರು, ಮೆಂಟಲಿ ಗಟ್ಟಿ ಆಗಿದ್ದರು ಎನ್ನೋದಿಕ್ಕೆ ಇದೇ ಉತ್ತಮ ಉದಾಹರಣೆ.
Also Read: ಮತ್ತೆ ಕಾಂಗ್ರೆಸ್‌ಗೆ ಸಿದ್ದು ಶಿಷ್ಯರು..? ಕಾಂಗ್ರೆಸ್ ಸೇರಲು ರೆಡಿಯಾದ್ರಾ STS, ಹೆಬ್ಬಾರ್?
ಈ ಸೀಸನ್ ಐಪಿಎಲ್‌ನಲ್ಲಿ ಹೇಳಿಕೊಳ್ಳುವಂತ ಪ್ರದರ್ಶನವನ್ನ ಪಂತ್ ನೀಡಿಲ್ಲ. ಇದು ಏರಿಳಿತಗಳಿಂದ ಕೂಡಿದ ಒಂದು ಸೀಸನ್. ಮನೆಗೆ ಹೋಗಲು ಪ್ರಾಕ್ಟೀಸ್. ಎಲ್ಲಾ ಪ್ರೀತಿ ಮತ್ತು ಬೆಂಬಲಕ್ಕಾಗಿ ಎಲ್‌ಎಸ್‌ಜಿ ಕುಟುಂಬಕ್ಕೆ ಧನ್ಯವಾದಗಳು. ಶೀಘ್ರದಲ್ಲೇ ಭೇಟಿಯಾಗೋಣ ಎಂದು ರಿಷಬ್ ಪಂತ್ ಪೋಸ್ಟ್ ಮಾಡಿದ್ದಾರೆ. ಅಪಘಾತ ಮಾಡಿಕೊಂಡಿದ್ದ ರಿಷಬ್ ಪಂತ್ ಈಗ ಇಷ್ಟು ಚೆನ್ನಾಗಿ ಆಡಿದ್ದು ನೋಡಿ ಅನೇಕರು ಖುಷಿ ವ್ಯಕ್ತಪಡಿಸಿದ್ದಾರೆ. ಅನೇಕರು ಈ ಬಗ್ಗೆ ವಿಶೇಷ ಪೋಸ್ಟ್ ಹಂಚಿಕೊಳ್ಳುತ್ತಿದ್ದಾರೆ.

