Spotify ಪಾಕ್ ಮೇಲೆ ನಡೆಸಿದ ಆಪರೇಷನ್ ಸಿಂದೂರ ಕಾರ್ಯಾಚರಣೆ ಬಳಿಕ ಭಾರತದಲ್ಲಿ ಸಾಕಷ್ಟು ಬದಲಾವಣೆಯಾಗಿದೆ. ಕೇಂದ್ರ ಸರ್ಕಾರ ಪಾಕಿಸ್ತಾನದ ವಿರುದ್ಧ ಹಲವು ಕಟ್ಟುನಿಟ್ಟಿನ ಆದೇಶಗಳನ್ನ ಹೊರಡಿಸಿದೆ. ಅದರಲ್ಲಿ ಡಿಜಿಟಲ್ ತಂತ್ರಜ್ಞಾನದ ಮೇಲೂ ಕೂಡ ಸಾಕಷ್ಟು ನಿರ್ಬಂಧಗಳನ್ನ ಹೇರಲಾಗಿದೆ. ಪಹಲ್ಗಾಮ್ ಮೇಲೆ ಉಗ್ರರ ದಾಳಿ ಬೆನ್ನಲ್ಲೆ ಪಾಕ್ ನಟ ನಟಿಯರ ಸೋಷಿಯಲ್ ಮೀಡಿಯಾ ಖಾತೆಗಳನ್ನ ಭಾರತದಲ್ಲಿ ಬ್ಯಾನ್ ಮಾಡಲಾಗಿದೆ.
ಮೇ 8 ರಂದು, ಭಾರತ ಸರ್ಕಾರವು ಎಲ್ಲಾ ಒಟಿಟಿ ಪ್ಲಾಟ್‌ಫಾರ್ಮ್‌ಗಳು , ಮೀಡಿಯಾ ಸ್ಟ್ರೀಮಿಂಗ್ ಸೇವೆಗಳು ಮತ್ತು ಡಿಜಿಟಲ್ ಮಧ್ಯವರ್ತಿಗಳು ಪಾಕಿಸ್ತಾನದಿಂದ ಪ್ರಸಾರವಾಗೋ ವೆಬ್ ಸರಣಿಗಳು, ಚಲನಚಿತ್ರಗಳು, ಹಾಡುಗಳು, ಪಾಡ್‌ಕ್ಯಾಸ್ಟ್‌ಗಳು ಮತ್ತು ಇತರ ಮಾಧ್ಯಮ ವಿಷಯವನ್ನು ನಿಲ್ಲಿಸುವಂತೆ ನಿರ್ದೇಶಿಸುವ ಸಲಹೆಯನ್ನು ಕೇಂದ್ರ ಸರ್ಕಾರ ಆದೇಶಿಸಿತು. ಈ ಬೆನ್ನಲ್ಲೆ ಬಾಲಿವುಡ್‌ನಲ್ಲಿ ನಟಿಸಿದ ಪಾಕ್ ಆಕ್ಟರ್‌ಗಳು ಆಪರೇಶನ್ ಸಿಂದೂರ ಬೆನ್ನಲ್ಲೆ ಭಾರತದ ಬಗ್ಗೆ ತಮ್ಮ ನಾಲಗೆ ಹರಿಬಿಟ್ಟಿದ್ದರು. ಪಾಕಿಸ್ತಾನಿ ನಟಿ ಮಹಿರಾ ಖಾನ್ ಹಾಗೂ ಫವಾದ್ ಖಾನ್ ಪಹಲ್ಗಾಮ್ ಉಗ್ರರ ದಾಳಿ ಖಂಡಿಸಿದ್ರು..
ಇದೀಗ ಪಾಕಿಸ್ತಾನಿ ನಟರನ್ನು ಅವರ ಹಿಂದಿ ಚಲನಚಿತ್ರಗಳ ಪೋಸ್ಟರ್‌ಗಳಿಂದ ತೆಗೆದುಹಾಕಲಾಗಿದೆ. Spotify, YouTube Music ಆ್ಯಪ್‌ಗಳಲ್ಲಿನ ಹಿಂದಿ ಹಾಡಿನ ಪೋಸ್ಟರ್‌ಗಳಿಂದಲೂ ಮಹಿರಾ ಖಾನ್, ಫವಾದ್ ಖಾನ್‌ರ ಫೋಟೋ ಮತ್ತು ಹಾಡುಗಳನ್ನ ತೆಗೆದುಹಾಕಲಾಗಿದೆ.
Spotify ನಿಂದ ಪಾಕಿಸ್ತಾನಿ ಹಾಡುಗಳನ್ನು ಸಹ ತೆಗೆದುಹಾಕಲಾಗಿದೆ. ಜನಪ್ರಿಯ ಹಾಡುಗಳಾದ ಮಾಂಡ್, ಜೋಲ್, ಫಾಸ್ಲೆ ಮತ್ತು ಇತರವುಗಳು ಕಣ್ಮರೆಯಾಗಿವೆ.

ಕಪೂರ್ ಆಂಡ್ ಸನ್ಸ್ ಸಿನಿಮಾದಲ್ಲಿ ನಟಿಸಿದ್ದ ನಟ ಫವಾದ್ ಖಾನ್ ಮತ್ತು ರಯೀಸ್‌ನಲ್ಲಿ ನಟಿಸಿದ್ದ ಮಹಿರಾ ಖಾನ್, ಇವರ ಸಿನಿಮಾಗಳ ಪೋಸ್ಟರ್ ಮೇಲಿನ ಚಿತ್ರವನ್ನ ತೆಗೆದುಹಾಕಲಾಗಿದೆ. ಶಾರುಖ್ ಖಾನ್ ಅವರ ರಯೀಸ್ ಚಿತ್ರದ ಆಲ್ಬಮ್ ಮುಖಪುಟದಲ್ಲೂ ಇದೇ ರೀತಿಯ ತಿದ್ದುಪಡಿ ಮಾಡಲಾಗಿದ್ದು, ಅಲ್ಲಿ ಮಹಿರಾ ಖಾನ್ ಅವರ ಚಿತ್ರವನ್ನು ತೆಗೆದುಹಾಕಲಾಗಿದೆ. ನವೀಕರಿಸಿದ ಪೋಸ್ಟರ್‌ನಲ್ಲಿ ಈಗ ಶಾರುಖ್ ಖಾನ್ ಒಬ್ಬಂಟಿಯಾಗಿ ಕಾಣಿಸಿಕೊಂಡಿದ್ದಾರೆ.
Also Read: Singer ಸೋನು ನಿಗಮ್‌ಗೆ ಹೈಕೋರ್ಟ್‌ನಿಂದ ಬಿಗ್ ರಿಲೀಫ್
ಫವಾದ್ ಖಾನ್, ಸಿದ್ಧಾರ್ಥ್ ಮಲ್ಹೋತ್ರಾ ಮತ್ತು ಆಲಿಯಾ ಭಟ್ ಅವರೊಂದಿಗೆ ಕಾಣಿಸಿಕೊಂಡಿದ್ದ ಕಪೂರ್ & ಸನ್ಸ್‌ನ ಬುದ್ಧು ಸಾ ಮನ್ ಹಾಡು ಪ್ರಸ್ತುತ ಭಾರತದಲ್ಲಿ ಯೂಟ್ಯೂಬ್‌ನಲ್ಲಿ ಲಭ್ಯವಿಲ್ಲ. ಸ್ಪಾಟಿಫೈ ಮತ್ತು ಯೂಟ್ಯೂಬ್ ಮ್ಯೂಸಿಕ್‌ನಲ್ಲಿನ ಸನಮ್ ತೇರಿ ಕಸಮ್ ಆಲ್ಬಮ್ ಕವರ್‌ಗಳಲ್ಲಿ ಮಾವ್ರಾ ಹೊಕೇನ್ ಅವರ ಚಿತ್ರ ಕಾಣೆಯಾಗಿತ್ತು, ಹರ್ಷವರ್ಧನ್ ರಾಣೆ ಮಾತ್ರ ಕಾಣಿಸಿಕೊಂಡಿದ್ದರು. ಇನ್ನು ಈ ಎಲ್ಲಾ ಬೆಳವಣಿಗೆ ಮಧ್ಯೆ ಬಾಲಿವುಡ್‌ನಲ್ಲಿ ಪಾಕಿಸ್ತಾನ ನಟರಿಗೆ ಯಾವುದೇ ಅವಕಾಶವಿಲ್ಲದಂತಾಗಿದೆ.