ವಿಜಯವಾಡ: ಮದ್ಯ ಸೇವಿಸಲು 10 ರೂ. ನೀಡಲಿಲ್ಲ ಎಂಬ ಕಾರಣಕ್ಕೆ ಚಾಕುವಿನಿಂದ ಇರಿದು ಕೊಲೆ ಮಾಡಿರುವ ಘಟನೆ ನಡೆದಿದೆ.
ಈ ಭಯಾನಕ ಘಟನೆ ಆಂಧ್ರ ಪ್ರದೇಶದಲ್ಲಿ ವರದಿಯಾಗಿದೆ. ಮದ್ಯದ ಅಂಗಡಿ ಮುಂದೆ ಸರಾಯಿ ಕೊಳ್ಳಲು 10 ರೂ. ಹಣ ನೀಡುವಂತೆ ಅಪರಿಚತ ವ್ಯಕ್ತಿಯನ್ನು ಯುವಕನೊಬ್ಬ ಕೇಳಿದ್ದಾನೆ. ಆದರೆ, ಹಣ ನೀಡಲು ಆ ವ್ಯಕ್ತಿ ನಿರಾಕರಿಸಿದ್ದಾನೆ. ಇದರಿಂದ ರೊಚ್ಚಿಗೆದ್ದ ಯುವಕ ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾನೆ ಎನ್ನಲಾಗಿದೆ.
ತಾತಾಜಿ ಘಟನೆಯಲ್ಲಿ ಕೊಲೆಯಾಗಿರುವ ವ್ಯಕ್ತಿ ಎನ್ನಲಾಗಿದೆ. ಕುಡಿದ ಮತ್ತಿನಲ್ಲಿದ್ದ 17 ವರ್ಷದ ಯುವಕನೊಬ್ಬ ಮದ್ಯದ ಅಂಗಡಿಯ ಬಳಿ ಇರುವ ತಾತಾಜಿ ಎಂಬ ಅಪರಿಚಿತ ವ್ಯಕ್ತಿ ಬಳಿ ಸರಾಯಿ ಖರೀದಿಸಲು 10 ರೂ. ಕೇಳಿದ್ದಾನೆ. ಈ ವೇಳೆ ಆ ವ್ಯಕ್ತಿ ಹಣ ಕೊಡಲು ನಿರಾಕರಿಸಿದ್ದಾನೆ. ಈ ವೇಳೆ ಇಬ್ಬರ ಮಧ್ಯೆ ಗಲಾಟೆ ನಡೆದಿದೆ. ತಾತಾಜಿ ಎಂಬ ವ್ಯಕ್ತಿ ಮೊದಲು ಯುವಕನಿಗೆ ಹೊಡೆದಿದ್ದಾನೆ. ಅದೇ ಸಿಟ್ಟಿನಿಂದ ಯುವಕ ಚಾಕುವಿನಿಂದ ಇರಿದಿದ್ದಾನೆ ಎಂದು ಅಲ್ಲಿನ ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆಂದು ವರದಿಯಾಗಿದೆ.
ಈ ಕುರಿತು ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ ಎನ್ನಲಾಗಿದೆ.
