ಬಂಗಾಳ ಕೊಲ್ಲಿಯಲ್ಲಿ ಸೃಷ್ಟಿಯಾದ ಫೆಂಗಲ್ ಚಂಡಮಾರುತ ರಾಜ್ಯಕ್ಕೂ ಕಾಲಿಟ್ಟಿದ್ದು, ಹಲವು ಜಿಲ್ಲೆಗಳಲ್ಲಿ ಭಾರೀ ಮಳೆ ಸುರಿದಿದೆ. ಚೆನ್ನೈ (Chennai), ಪುದುಚೇರಿ (Puducherry) ಅಕ್ಷರಶಃ ನಲುಗಿಹೋಗಿದೆ. ರಾಜ್ಯದಲ್ಲಿ ಇನ್ನೂ ಮುರ್ನಾಲ್ಕು ದಿನ ಭಾರೀ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಫೆಂಗಲ್ ಚಂಡಮಾರುತದ (Fengal Cyclone)ಅಬ್ಬರ ಜೋರಾಗಿದ್ದು, ಗಂಟೆಗೆ 90 ಕಿಲೋ ಮೀಟರ್ ವೇಗದಲ್ಲಿ ಬೀಸುತ್ತಿದೆ.. ಮುಂದಿನ 48 ಗಂಟೆಗಳಲ್ಲಿ ಭಾರೀ ಮಳೆಯನ್ನು ಸುರಿಸಲಿದೆ ಎಂದು ಇಲಾಖೆ ಮುನ್ಸೂಚನೆ ನೀಡಿದ್ದು, ರಾಜ್ಯದ ಹಲವು ಜಿಲ್ಲೆಗಳಲ್ಲಿ ಮುಂಜಾಗ್ರತ ಕ್ರಮವಾಗಿ ಜಿಲ್ಲಾಡಳಿತ ಶಾಲಾ-ಕಾಲೇಜ್ಗಳಿಗೆ ರಜೆ ಘೋಷಣೆ ಮಾಡಿದೆ….. ಚಾಮರಾಜನಗರ, ಚಿಕ್ಕಬಳ್ಳಾಪುರ, ಕೋಲಾರ, ಮೈಸೂರು (Mysuru) ಜಿಲ್ಲೆಗಳಲ್ಲಿ ಶಾಲಾ-ಕಾಲೇಜ್ಗೆ ರಜೆ ಘೋಷಣೆ ಮಾಡಲಾಗಿದೆ. ಮಳೆ ಜತೆ ವಿಪರೀತ ಚಳಿಯೂ ಇದೆ. ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುವ ಸಾಧ್ಯತೆ ಇರುವುದರಿಂದ ಮುಂಜಾಗೃತೆಯಾಗಿ ಶಾಲೆಗಳಿಗೆ ರಜೆ ನೀಡಲಾಗಿದೆ.

ಕಳೆದ ಎರಡು ದಿನದಿಂದ ಬೆಂಗಳೂರಲ್ಲಿ (Bengaluru) ಕೊರೆಯುವ ಚಳಿ ಜೊತೆಗೆ ಜಿಟಿ ಜಿಟಿ ಮಳೆ ಬೀಳುತ್ತಿದೆ. ಬೆಳಗ್ಗೆಯಿಂದಲೂ ಮೋಡ ಕವಿದ ವಾತಾವರಣ ಇದ್ದು, ಜಿಟಿ ಜಿಟಿ ಮಳೆಗೆ ಜನರು ಹೈರಾಣಾಗಿದ್ದಾರೆ. ಎರಡು ದಿನಗಳಿಂದ ಬೆಂಗಳೂರಿನ ವೆದರ್ ಫುಲ್ ಚೇಂಚ್ ಆಗಿದೆ. ಆದ್ರೆ ಬೆಂಗಳೂರಲ್ಲಿ ಯಾವುದೇ ಶಾಲಾ-ಕಾಲೇಜ್ಗೆ ರಜೆ ಘೋಷಣೆ ಮಾಡಿಲ್ಲ, ಆದ್ರೆ ಮುಂದಿನ 48 ಗಂಟೆಯಲ್ಲಿ ನಗರದಲ್ಲಿ ಭಾರೀ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.
ತಮಿಳುನಾಡು, ಪುದುಚೇರಿ, ಆಂಧ್ರದಲ್ಲಿ ಫೆಂಗಲ್ ಆರ್ಭಟ…!
ನೆರೆಯ ರಾಜ್ಯಗಳಾದ ತಮಿಳುನಾಡು, ಆಂಧ್ರ ಪ್ರದೇಶದ (Andhra Pradesh) ಕರಾವಳಿ ಭಾಗದಲ್ಲಿ ಫೆಂಗಲ್ ಅಬ್ಬರಿಸಿ ಹೈರಾಣಾಗಿಸಿದೆ… ಫೆಂಗಲ್ ಚಂಡಮಾರುತ ಆಂಧ್ರ, ತಮಿಳುನಾಡು ಕರಾವಳಿ ಜಿಲ್ಲೆಗಳಲ್ಲಿ ಅಬ್ಬರಿಸಿ ಅವಾಂತರ ಸೃಷ್ಟಿಸಿದೆ. ಅತ್ತ ಜೋರು ಮಳೆಗಾಳಿಗೆ ಜನ ಕಂಗಾಲಾಗಿದ್ರೆ, ಇತ್ತ ರಾಜ್ಯದಲ್ಲಿ ಫೆಂಗಲ್ ಸೈಲೆಂಟ್ ಎಫೆಕ್ಟ್ಗೆ ಹೈರಾಣಾಗಿದ್ದಾರೆ. ಭಾನುವಾರದ ಅಂಕಿ-ಅಂಶ ಪ್ರಕಾರ ಭಾನುವಾರ 24 ಗಂಟೆ ಅವಧಿಯಲ್ಲಿ ಪುದುಚೇರಿಯಲ್ಲಿ 46 ಸೆ.ಮೀ.ನಷ್ಟು ಮಳೆಯಾಗಿದೆ. ಅಕ್ಟೋಬರ್ 31, 2004ರಂದು ಪುದುಚೇರಿ ದಾಖಲೆಯ 21 ಸೆ.ಮೀ. ಮಳೆ ಕಂಡಿತ್ತು. ಆ ಬಳಿಕ ಈ ಪ್ರಮಾಣದಲ್ಲಿ ಮಳೆಯಾಗಿದ್ದು 3 ದಶಕದಲ್ಲಿ ಇದೇ ಮೊದಲು. ಪುದುಚೇರಿಯಲ್ಲಿ ಭಾರೀ ಅನಾಹುತ ಸಂಭವಿಸಿದೆ. ಹಲವು ಜನವಸತಿ, ವಾಣಿಜ್ಯ ಪ್ರದೇಶಗಳು ಜಲಾವೃತವಾಗಿದ್ದು, ಪರಿಹಾರ ಮತ್ತು ರಕ್ಷಣಾ ಕಾರ್ಯಾಚರಣೆಗೆ ಸೇನೆ ಕೈಜೋಡಿಸಿದ್ದು, ಪ್ರವಾಹದಲ್ಲಿ (Flood) ಸಿಲುಕಿಕೊಂಡಿದ್ದ 200ಕ್ಕೂ ಹೆಚ್ಚು ಮಂದಿಯನ್ನು ರಕ್ಷಿಸಲಾಗಿದೆ.

ಚಂಡಮಾರುತದ ಪರಿಣಾಮ ನೆರೆಯ ತಮಿಳುನಾಡು ಜಿಲ್ಲೆಯ ವಿಲ್ಲುಪುರಂ ಜಿಲ್ಲೆಯಲ್ಲೂ ಭಾರೀ ಮಳೆಯಾಗಿದ್ದು, ಮೈಲಾಂ ಪ್ರದೇಶದಲ್ಲಿ 50 ಸೆ.ಮೀ. ಮಳೆ ದಾಖಲಾಗಿದೆ. ತಮಿಳುನಾಡು ಮತ್ತು ಪುದುಚೇರಿಯಲ್ಲಿ ೧೦ ಕ್ಕೂ ಅಧಿಕ ಮಂದಿ ಸಾವಿನ್ನಪ್ಪಿರುವ ಬಗ್ಗೆ ವರದಿಯಾಗಿದ್ದು, ಸಾವಿರಾರು ಮಂದಿ ಮನೆ ಕಳೆದುಕೊಂಡು ಕಂಗಾಲಾಗಿದ್ದಾರೆ….