ಕಿಚ್ಚನ ಎಪಿಸೋಡ್ ಮುಗಿದ್ಮೇಲೆ ಮತ್ತೆ ಏನಾಯ್ತು?
ಬೆಂಗಳೂರು : ( Bigg Boss 11) ಬಿಗ್ ಬಾಸ್ಗೆ ಮತ್ತೆ ಶಾಕ್ ಕೊಟ್ಟ ಶೋಭಾಕ್ಕ!, ದೊಡ್ಮನೆಯಲ್ಲಿ ಮತ್ತೆ ಹೈಡ್ರಾಮಾ!, ಕಿಚ್ಚನ ಎಪಿಸೋಡ್ ಮುಗಿದ್ಮೇಲೆ ಮತ್ತೆ ಏನಾಯ್ತು?, ಮುಖ್ಯದ್ವಾರ ತೆಗೆದ ಬಳಿಕ ಉಲ್ಟಾ ಹೊಡೆದ ಶೋಭಾ ಶೆಟ್ಟಿ! ಅಷ್ಟಕ್ಕೂ ಫೈಯರ್ ರಾಣಿ ಮಾಡಿದ್ದೇನು? ದೊಡ್ಮನೆಯಲ್ಲಿ ಆಗಿದ್ದೇನು? ಅದನ್ನ ಹೇಳಿತ್ತೀವಿ ಕೇಳಿ.
ಬಿಗ್ ಬಾಸ್ ( Bigg Boss ) ಆಟವನ್ನು ಶೋಭಾ ಶೆಟ್ಟಿ ಕ್ವಿಟ್ ( Bigg Boss Elimination ) ಮಾಡಿದ್ದಾರೆ. ಸಧ್ಯ ಬಿಗ್ ಬಾಸ್ ಫ್ಯಾನ್ಸ್ ನೀಡಿದ್ದ ವೋಟ್ ಹಾಗೂ ಗೌರವವನ್ನು ಧಿಕ್ಕರಿಸಿ ಮನೆಯಿಂದ ಆಚೆ ಬರಲ್ಲು ಸಿದ್ಧರಿದರು, ಆದರೆ ಶೋಭಾ ಶೆಟ್ಟಿಗೆ ಕಿಚ್ಚ ಸುದೀಪ್ (Kiccha Sudeep ), ಬುದ್ಧಿ ಹೇಳಿ ಉಳಿಸಿಕೊಳ್ಳುವ ಪ್ರಯತ್ನ ಮಾಡಿದರು. ನಿರ್ಧಾರದಿಂದ ಹಿಂದೆ ಸರಿಯದ ಕಾರಣ, ಶೋಭಾ ಶೆಟ್ಟಿಗೆ ದೊಡ್ಮನೆಯ ಮುಖ್ಯದ್ವಾರ ಓಪನ್ ಆಗಿದೆ.

ಸಧ್ಯ ಇಷ್ಟೇಲ ಹೈಡ್ರಾಮಾ ಆದ್ಮೇಲೆ, ಕಿಚ್ಚನ ಮಾತಿಗೂ ಬೆಲೆ ಕೂಡದ ಶೋಭಾ ಮನೆಯಿಂದ ನಿಜವಾಗಲು ಆಚೆ ಬಂದರಾ? ಇಲ್ಲಕೊನೆಯ ಕ್ಷಣದಲ್ಲಿ ಬಿಗ್ ಬಾಸ್ಗೆ ಟ್ವಸ್ಟ್ ಕೊಟ್ಟರಾ?! ಎಂಬ ಮಿಲಿಯನ್ ಡಾಲರ್ ಪ್ರಶ್ನೆಗಳು ಹುಟ್ಟಿಕೊಂಡಿದೆ.
ಇನ್ನೂ ಇದಕ್ಕೆ ಉತ್ತರ ಎಂಬತ್ತೆ, ಇದೀಗ ಬಿಗ್ ಬಾಸ್ ಒಂದು ಪ್ರೊಮೋ ( Bigg Boss Promo ) ಶೇರ್ ಮಾಡಿದ್ದು, ಅದರಲ್ಲಿ ಜಂಬದ ಕೋಳಿ ಶೋಭಾಕ್ಕ ಮತ್ತೆ ಬಿಗ್ ಬಾಸ್ಗೆ ಶಾಕ್ ಕೊಟ್ಟಿದ್ದಾರೆ. ಹೌದು… ದೊಡ್ಮನೆಯಲ್ಲಿ ಪದೆ ಪದೇ ಕಣ್ಣೀರು ಇಟ್ಟ ಶೋಭಾ ಶೆಟ್ಟಿ ಮನೆಯಲ್ಲಿ ಇರುವ ಬಗ್ಗೆ ಮಾತನಾಡಿದ್ದಾರೆ. ಒಂದು ವಾರ ಇದ್ದು ನನ್ನನ್ನು ನಾನು ಪ್ರೂಮ್ ಮಾಡಿಕೊಳ್ಳಲಿಲ್ಲ ಅಂದರೆ ಕ್ಷಮಿಸಿಕೊಳ್ಳಲ್ಲ ಎಂದು ಕಣ್ಣೀರು ಇಟ್ಟಿದ್ದಾರೆ. ಆಗ ಬಿಗ್ಬಾಸ್, ಶೋಭಾ ನೀವು ಈ ಕೂಡಲೇ ಮನೆಯ ಮುಖ್ಯದ್ವಾರದಿಂದ ಹೊರಬರಬೇಕು ಎಂದು ಖಡಕ್ ಆಜ್ಞೆ ಮಾಡಿದ್ದಾರೆ.

ಆದರೆ ಮತ್ತೆ ಕಣ್ಣೀರು ಇಡುತ್ತಲೆ ಹೊರ ಬರುವ ಶೋಭಾ, ಯಾರೆಲ್ಲ ನನಗೆ ವೋಟ್ ( Bigg Boss Voting) ಮಾಡಿದ್ದಿರೋ, ನಿಮ್ಮೆಲ್ಲರಿಗೂ ನೋವು ಕೊಡಬೇಕು ಅನ್ನೋ ಉದ್ದೇಶ ನನ್ನದಲ್ಲ. ದಯವಿಟ್ಟು ನನ್ನ ತಪ್ಪನ್ನು ಕ್ಷಮಿಸಿಬಿಡಿ. ಬಿಗ್ಬಾಸ್ ನನಗೆ ಹೋಗಬೇಕು ಅನಿಸ್ತಿಲ್ಲ ಎಂದು ಬಿಗ್ಬಾಸ್ ಮನೆಗೆ ನಮಸ್ಕಾರ ಮಾಡಿ ಕಣ್ಣೀರಿನ ಕಹಾನಿಗೆ ಸಖತ್ ಟ್ವಿಸ್ಟ್ ಕೊಟ್ಟಿದ್ದಾರೆ.
ಅದೇನೆ ಆಗಲಿ, ಸಧ್ಯ ಬಿಗ್ಬಾಸ್ ಮನೆಯಲ್ಲಿ ಶೋಭಾಕ್ಕನ ಕಣ್ಣೀರಿನ ಕಥೆ ರೋಚಕ ತಿರುವು ಸಿಕ್ಕಿದ್ದು,ಜಂಬದ ಕೋಳಿ ಶೋಭಾ ಶೆಟ್ಟಿ ಮನೆಯಲ್ಲಿ ಇರುತ್ತಾರಾ? ಅಥವಾ ಬಿಗ್ ಬಾಸ್ ಆಜ್ಞೆಯಂತೆ ಹೊರಗೆ ಹೋಗುತ್ತಾರಾ ಅಂತ ಕಾದು ನೋಡಬೇಕಿದೆ.