ಬಿಗ್‌ಬಾಸ್‌ ಟ್ವಿಸ್ಟ್‌ಗೆ ಸುಸ್ತಾದ ಬಿಗ್‌ ಕಿಲಾಡಿಗಳು.. ಒಂದು ಕಡೆ ಮಿಡ್ ಸೀಸನ್ ಫಿನಾಲೆಗೆ ಮುಹೂರ್ತ.. ಇನೊಂದು ಕಡೆ ಮಾಸ್‌ ಎಲಿಮಿನೇಷನ್‌ಗೆ ಟೈಮ್‌ ಬಾಂಬ್ ಫಿಕ್ಸ್‌!.. ‌ಅಷ್ಟಕ್ಕೂ ಬಿಗ್‌ಬಾಸ್‌ ಮಾಡಿರೋ ಆ ಮಾಸ್ಟರ್‌ ಪ್ಲಾನ್‌ ಏನು? ದೊಡ್ಮನೆಯಲ್ಲಿ ಉಳಿಯೋದ್ಯಾರು? ಹೋಗೋದು ಯಾರು? ವೈಲ್ಡ್ ಕಾರ್ಡ್ ಎಂಟ್ರಿಗಳ ಸುರಿಮಳೆ ಆಗುತ್ತಾ? ಎಂಬ ಕುತುಹಲಕ್ಕೆ ಕಾರಣವಾಗಿದೆ. ಬಿಗ್ ಬಾಸ್ ಕನ್ನಡ ಸೀಸನ್ 12 ಶೋ ಮೂರನೇ ವಾರಕ್ಕೆ ಕಾಲಿಟ್ಟಿದೆ. ಇದೇ ವಾರ ಸಿಸನ್‌ನ ಮೊದಲ ಫಿನಾಲೆ ಕೂಡ ನಡೆಯಲಿದೆ. ಹಾಗಾಗಿ, ಸ್ಪರ್ಧಿಗಳಿಗೆ ಸಖತ್ ಟ್ವಿಸ್ಟ್‌ಗಳು ಎದುರಾಗುವುದು ಖಚಿತ. ಸದ್ಯ ಬಿಗ್ ಬಾಸ್ ನೀಡಿರುವ ಒಂದು ಶಾಕ್‌ಗೆ 13 ಸ್ಪರ್ಧಿಗಳು ಫುಲ್‌ ದಂಗಾಗಿದ್ದಾರೆ. ಅಲ್ಲದೆ, ಜಂಟಿ – ಒಂಟಿ ಆಟಕ್ಕೆ ಬ್ರೇಕ್‌ ನೀಡಿರುವ ಬಿಗ್ ಬಾಸ್‌ ಹೊಸ ಮಾಸ್ಟರ್‌ ಪ್ಲಾನ್‌ ರೆಡಿ ಮಾಡಿದ್ದಾರೆ. ಹೌದು, ಈ ವಾರದ ನಾಮಿನೇಷನ್ ಪ್ರಕ್ರಿಯೆ ಸೈಲೆಂಟ್ ಆಗಿಯೇ ನಡೆದಿದ್ದು, ದೊಡ್ಡ ಇಂಪ್ಯಾಕ್ಟ್ ಮಾಡಿದೆ. ನಾಲ್ವರು ಫೈನಲಿಸ್ಟ್‌ಗಳನ್ನು ಹೊರತುಪಡಿಸಿ, ಮಿಕ್ಕ 13 ಸ್ಪರ್ಧಿಗಳನ್ನು ನೇರವಾಗಿ ಬಿಗ್ ಬಾಸ್ ನಾಮಿನೇಟ್ ಮಾಡಿದ್ದು, ಎಲ್ಲರ ಎದೆಯಲ್ಲಿ ಡವಡವ ಶುರುವಾಗಿದೆ.

3ನೇ ವಾರದ ಫಿನಾಲೆಯಲ್ಲಿ ಮಾಸ್ ಎಲಿಮೀನೇಷನ್‌ ನಡೆಯಲಿದ್ದು, 13 ಸ್ಪರ್ಧಿಗಳು ನಾಮಿನೇಟ್ ಆಗಿರುವುದರಿಂದ ಇದರಲ್ಲಿ ಎಷ್ಟು ಮಂದಿಗೆ ಗೇಟ್ ಪಾಸ್ ಸಿಗಲಿದೆಯೋ ಗೊತ್ತಿಲ್ಲ! ಆದ್ರೆ ಬಿಗ್‌ಬಾಸ್‌ ಮನೆಯಲ್ಲಿ ವೈಲ್ಡ್ ಕಾರ್ಡ್ ಎಂಟ್ರಿಗಳ ಸುರಿಮಳೆ ಆಗೋದು ಪಕ್ಕಾ ಎನ್ನಲಾಗಿದೆ. ಇನ್ನು ಈ ಹಿಂದೆ ಕಿಚ್ಚ ಸುದೀಪ್‌ ಕೂಡ ವೈಲ್ಡ್ ಕಾರ್ಡ್ ಎಂಟ್ರಿಗಳ ಬಗ್ಗೆ ಬಿಗ್‌ ಸ್ಪರ್ಧಿಗಳಿಗೆ ಹೇಳಿದ್ರು. ಅರ್ಧ ಜನರ ರಿಪ್ಲೇಸ್‌ಗೆ ಟೈಮ್‌ ಫಿಕ್ಸ್‌ ಆಗಿದೆ. ಹಿಂದೆ ನಡೆದ 11 ಸೀಸನ್‌ ಒಂದು ಲೆಕ್ಕ. ಈ 12ನೇ ಸೀಸನ್‌ ಒಂದು ಲೆಕ್ಕ. ಬಿಗ್‌ಬಾಸ್‌ ಮನೆಯಲ್ಲಿ ಯಾವಾಗ ಯಾರು ಬೇಕಾದ್ರೂ ಮನೆಯಿಂದ ಔಟ್‌ ಆಗಬಹುದು ಎಂದು ಟ್ವಿಸ್ಟ್‌ ಕೊಟ್ಟಿದ್ರು. ಅದು ಇಷ್ಟು ಬೇಗ ಬರುತ್ತೆ ಎಂದು ಯಾರು ಅಂದ್ಕೊಡಿರಲಿಲ್ಲ. ಸದ್ಯ 17 ಸ್ಪರ್ಧಿಗಳಲ್ಲಿ ನಾಲ್ವರು ಫೈನಲಿಸ್ಟ್‌ ಆಗಿದ್ದು, ಉಳಿದವರು ಈಗ ರಾಜರೂ ಅಲ್ಲ, ಅಸುರರೂ ಅಲ್ಲ, ಜಂಟಿಯೂ ಅಲ್ಲ, ಒಂಟಿಯೂ ಅಲ್ಲ. ತಮ್ಮ ವ್ಯಕ್ತಿತ್ವ ಏನು ಎಂದು ಸ್ಪರ್ಧಿಗಳು ಈಗ ತೋರಿಸಬೇಕಿದೆ. ಹೀಗಾಗಿ ಯಾರು ಮನೆಯಿಂದ ಹೊರಗಡೆ ಹೋಗ್ತಾರೆ ಎಂದು ಕಾದು ನೋಡಬೇಕಿದೆ. ಜೊತೆಗೆ ಈ ಬಾರಿ ಮಿಡ್ ಸೀಸನ್ ಗೆದ್ದ ಸ್ಪರ್ಧಿಗೆ ಊಹೆ ಮಾಡಲಾಗದ ಬಹುಮಾನ ನೀಡಲಾಗುತ್ತದೆ ಎಂಬ ಸುದ್ದಿ ಬಿಗ್‌ಬಾಸ್‌ ಅಡ್ಡದಿಂದ ಬಂದಿದೆ.

Read Also : RSS ಶಿಭಿರದಲ್ಲಿ ಲೈಂಗಿಕ ಕಿರುಕುಳ..? : ತಪ್ಪಿತಸ್ಥರ ವಿರುದ್ಧ ಸಿಡಿದೆದ್ದ ಪ್ರಿಯಾಂಕಾ ಗಾಂಧಿ

Share.
Leave A Reply