Subscribe to Updates
Get the latest creative news from FooBar about art, design and business.
Author: vikimasters
ಉತ್ತರಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ ನಡೆಯುತ್ತಿರುವ 2025ರ ಮಹಾ ಕುಂಭಮೇಳದಲ್ಲಿ (Kumbh Mela)ಕಾಲ್ತುಳಿತ ಸಂಭವಿಸಿ 15ಕ್ಕೂ ಭಕ್ತರು ಜೀವ ಕಳೆದುಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ. ಈ ಬಗ್ಗೆ ಇನ್ನೂ ಅಧಿಕೃತ ಮಾಹಿತಿ ಹೊರಬಿದ್ದಿಲ್ಲ. ಮೌನಿ ಅಮಾವಾಸ್ಯೆ ಹಿನ್ನೆಲೆಯಲ್ಲಿ ಹೆಚ್ಚಿನ ಭಕ್ತರು ಮಹಾ ಕುಂಭಮೇಳಕ್ಕೆ(Kumbh Mela) ಭೇಟಿ ನೀಡುತ್ತಿದ್ದಾರೆ. ಇದರಿಂದ ಪ್ರಯಾಗ್ರಾಜ್ನ ಸಂಗಮ್ ಪ್ರದೇಶದಲ್ಲಿ ರಾತ್ರಿ 2 ಗಂಟೆ ಸುಮಾರಿಗೆ ಏಕಾಏಕಿ ಜನರು ನುಗ್ಗಿಕೊಂಡು ಬಂದಿದ್ದರಿಂದ ಕಾಲ್ತುಳಿತ ಸಂಭವಿಸಿದೆ. ಈ ಘಟನೆಯಲ್ಲಿ ಸುಮಾರು 15ಕ್ಕೂ ಹೆಚ್ಚು ಜನರು ಜೀವ ಕಳೆದುಕೊಂಡಿದ್ದಾರೆ ಎಂದು ಹೇಳಲಾಗಿದೆ. ಇದರ ಜೊತೆಗೆ ಹಲವಾರು ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ತಕ್ಷಣ ಆಂಬ್ಯುಲೆನ್ಸ್ ಮೂಲಕ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಇನ್ನು ಹಲವಾರು ಜನರು ತಮ್ಮ ತಮ್ಮ ಸಂಬಂಧಿಗಳನ್ನು ಕಳೆದುಕೊಂಡು ದುಃಖಿಸುತ್ತಿದ್ದಾರೆ. ಜನರು ಏಕಾಏಕಿ ನುಗ್ಗಿಕೊಂಡು ಬಂದಿದ್ದರಿಂದ ತಮ್ಮವರು ನಾಪತ್ತೆ ಆಗಿದ್ದಾರೆ ಎಂದು ಕೆಲವರು ಅಳುತ್ತ ದೂರು ಹೇಳುತ್ತಿದ್ದಾರೆ. ಪೊಲೀಸರು ಈ ಬಗ್ಗೆ ಕ್ರಮ ತೆಗೆದುಕೊಂಡಿದ್ದು ಪ್ರಯಾಗ್ರಾಜ್ ಕಡೆಗೆ ತೆರಳುವ ವಾಹನಗಳನ್ನು ಕೆಲ ಸಮಯ ತಡೆದಿದ್ದಾರೆ…
ಹೇಗಿದ್ದೀಯಾ ಕಂದಾ.. ನಾನು ಜೊತೆಗಿಲ್ಲ ಅಂತಾ ಬೇಜಾರಾಗಿದ್ದೀಯಾ..? ಎಷ್ಟು ಚೆನ್ನಾಗಿ ಕಾಣ್ತೀಯ ನೋಡು.. ನಿನ್ನ ಮೇಲೆ ಯಾರ ದೃಷ್ಟಿನೂ ಬೀಳದೇ ಇರಲಿ.. ಯಾವುದಕ್ಕೂ ತಲೆಕೆಡಿಸಿಕೊಳ್ಬೇಡ ಮಗಾ.. ನಾನು ನಿನ್ನ ಬೆನ್ನ ಹಿಂದೆಯೇ ಇರ್ತೀನಿ. ಹೀಗೆ ನಗುತ್ತಾ.. ನಗಿಸ್ತಾ ಖುಷಿಯಾಗಿರುವ ಕಂದ ಅಂತಾ ಬಿಗ್‌ಬಾಸ್ ಪರದೆ ಮೇಲೆ ಮನಮಿಡಿಯುವ ಹಾಡು ಕೇಳಿ ಬಂತು.. ಅಷ್ಟೇ.. ಅಭಿನಯ ಚಕ್ರವರ್ತಿ ಸುದೀಪ್ ಕಣ್ಣಾಲಿಗಳು ಒದ್ದೆಯಾಗಿದ್ದವು. ಸುದೀಪ್ ಮಗಳು ಸಾನ್ವಿ ಕಣ್ಣಲ್ಲಿ ನೀರು ಜಿನುಗಿತ್ತು.. ನೆರೆದಿದ್ದ ಪ್ರೇಕ್ಷಕರ ಹೃದಯ ಕಲಕಿದಂತಾಗಿತ್ತು.. ನಿಜ.. ಬಿಗ್‌ಬಾಸ್ ಸೀಸನ್ 11 ಗ್ರಾಂಡ್ ಫಿನಾಲೆ (Bigg boss season 11 grand finale) ಎಲ್ಲರ ಹೃದಯ ಸ್ಪರ್ಶಿಸಿದೆ.. ಆ ಮನ ಮಿಡಿಯುವ ಕ್ಷಣಗಳು ಎಲ್ಲರನ್ನೂ ಒಂದು ಕ್ಷಣ ಮಂತ್ರಮುಗ್ದರನ್ನಾಗಿಸಿತ್ತು.. ಯಾಕಂದ್ರೆ, ಬಾರದೂರಿಗೆ ಪಯಣಿಸಿರುವ ಕಿಚ್ಚನ ಪ್ರೀತಿಯ ತಾಯಿ, ಮತ್ತೆ ಮರಳಿ ಬಂದಂತ್ತಿತ್ತು.. ಪುಟ್ಟ ಬಾಲಕನೊಬ್ಬ ವೇದಿಕೆ ಮೇಲೆ ಅಮ್ಮಾ ಅಮ್ಮಾ ಅಂತಾ ಹಾಡು ಹಾಡುತ್ತಿದ್ರೆ, ದಿಢೀರ್ ಪ್ರತ್ಯಕ್ಷವಾದ ಅಮ್ಮ ನಾನಿದ್ದೀನಿ ಮಗನೇ ಹೆದರಬೇಡ…
ಇಂಡಿಯನ್ ಪ್ರೀಮಿಯರ್ ಲೀಗ್ 2025ರ ಆವೃತ್ತಿಗೆ ಇನ್ನು ಎರಡು ತಿಂಗಳು ಬಾಕಿ ಇದ್ದು, ಎಲ್ಲಾ ತಂಡಗಳು ಈಗಾಗಲೇ ಸಿದ್ಧತೆ ಆರಂಭಿಸಿವೆ. ಐಪಿಎಲ್ (IPL)ಆರಂಭವಾಗುವ ಮುನ್ನ ಚಾಂಪಿಯನ್ಸ್ ಟ್ರೋಫಿ, ಮಹಿಳಾ ಪ್ರೀಮಿಯರ್ ಲೀಗ್ ಕೂಡ ನಡೆಯುವುದರಿಂದ ಇನ್ನು ನಾಲ್ಕು ತಿಂಗಳು ಕ್ರಿಕೆಟ್ ಅಭಿಮಾನಿಗಳಿಗೆ ಮನರಂಜನೆಯ ರಸದೌತಣ ಸಿಗಲಿದೆ. ಐಪಿಎಲ್ ಎಂದರೆ ಅಲ್ಲಿ ಪರಸ್ಪರ ಕಾಲೆಳೆಯುವುದು, ಜಗಳ ಸಾಮಾನ್ಯ ಎನ್ನುವಂತಾಗಿದೆ. ವಿವಿಧ ತಂಡಗಳ ಅಭಿಮಾನಿಗಳು ಸಾಮಾಜಿಕ ಮಾಧ್ಯಮಗಳಲ್ಲಿ ಕಿತ್ತಾಡಿಕೊಳ್ಳುವುದು, ಟ್ರೋಲ್ ಮಾಡುವುದು ಮಾಮೂಲು. ಆದರೆ ಕೆಲವೊಮ್ಮೆ ಕ್ರಿಕೆಟಿಗರು ಕೂಡ ಎದುರಾಳಿ ತಂಡವನ್ನು ಟ್ರೋಲ್ ಮಾಡುವುದನ್ನು ನೋಡಬಹುದು. ಈಗ ದೆಹಲಿ ಸ್ಟಾರ್ ಆಟಗಾರ ಕೂಡ ಆರ್‌ಸಿಬಿಯನ್ನು ಟ್ರೋಲ್ ಮಾಡಿದ್ದಾರೆ. ಕುಲದೀಪ್(Kuldeep) ಯಾದವ್ ಕಳೆದ ವರ್ಷದ ಅಕ್ಟೋಬರ್ ತಿಂಗಳಿನಿಂದ ಭಾರತ ತಂಡಕ್ಕಾಗಿ ಆಡಿಲ್ಲ. ಗಾಯಗೊಂಡಿದ್ದ ಅವರು ಚೇತರಿಸಿಕೊಳ್ಳುತ್ತಿದ್ದಾರೆ, ಕ್ರಿಕೆಟ್‌ನಿಂದ ಹೊರುಗುಳಿದಿದ್ದರು ಕುಲದೀಪ್ ಯಾದವ್ ಫುಟ್‌ಬಾಲ್ ಪಂದ್ಯಗಳ ನೇರಪ್ರಸಾರದಲ್ಲಿ ಭಾಗವಹಿಸಿದ್ದಾರೆ. ಈ ಸಮಯದಲ್ಲಿ ಅವರು ಆರ್ ಸಿಬಿ ಅಭಿಮಾನಿಗೆ ನೀಡಿರುವ ಪ್ರತಿಕ್ರಿಯೆ ವೈರಲ್ ಆಗಿದೆ. ಟಾಕ್ ಫುಟ್‌ಬಾಲ್ ಎನ್ನುವ…
ಬಿಗ್‌ಬಾಸ್ ವಿನ್ನರ್ ಹನುಮಂತ (Hanumantu)ಗೆದ್ದ ಹಣದಲ್ಲಿ ಮಾಡುವ ಕೆಲಸ ಇದೇ ಅಂತೆ…! ಕನ್ನಡದ ಅತಿ ದೊಡ್ಡ ರಿಯಾಲಿಟಿ ಷೋ ಬಿಗ್ ಬಾಸ್ ಸೀಸನ್ 11 (Bigg boss season 11)ಮುಕ್ತಾಯಗೊಂಡಿದೆ. ಆರಂಭದಿಂದಲೂ ಒಂದಿಲ್ಲೊಂದು ಕಾರಣಕ್ಕೆ ಸುದ್ದಿ ಮಾಡುತ್ತಿದ್ದ ಬಿಗ್ ಬಾಸ್ ಸೀಸನ್ 11ರ (Bigg boss season 11) ಕಪ್ ಗೆಲ್ಲುವವರು ಯಾರು ಎಂಬ ಕುತೂಹಲ ತೀವ್ರವಾಗಿತ್ತು. ಇದೀಗ ಆ ಕುತೂಹಲ ತಣಿದಿದ್ದು ತೀವ್ರ ಸ್ಪರ್ಧೆಯಿದ್ದ ಆಟದಲ್ಲಿ ಹಳ್ಳಿ ಹೈದ ಹನುಮಂತ ಬಿಗ್ ಬಾಸ್ ಗೆದ್ದು ಇತಿಹಾಸ ಸೃಷ್ಠಿಸಿದ್ದಾರೆ. ಈ ಮೊದಲು ಕೂಡ ಕೆಲವು ರಿಯಾಲಿಟಿ ಶೋಗಳಲ್ಲಿ ಭಾಗವಹಿಸಿದ್ದ ಹನುಮಂತ (Hanumantu)ತಮ್ಮ ಹಳ್ಳಿ ಸೊಗಡು ತುಂಬಿದ ಭಾಷೆ ಮತ್ತು ವಿಶಿಷ್ಟ ಮ್ಯಾನರಿಸಂ ಮೂಲಕ ಕನ್ನಡ ಪ್ರೇಕ್ಷಕರ ಮನ ಗೆದ್ದಿದ್ದರು. ಈ ಸಲ ಬಿಗ್ ಬಾಸ್ ಸೀಸನ್ 11ರಲ್ಲೂ ಹನುಮಂತ ಗೆಲ್ಲಬಹುದು ಎನ್ನುವ ಅನುಮಾನವನ್ನು ಹುಟ್ಟುಹಾಕಿದ್ದರು. ಅದೇ ರೀತಿ ಭಾನುವಾರ ನಡೆದ ಫಿನಾಲೆಯಲ್ಲಿ ಹನುಮಂತ ಬಿಗ್ ಬಾಸ್ ಸೀಸನ್ 11ರ ವಿಜಯಿಯಾಗಿ ಹೊರಹೊಮ್ಮಿದ್ದಾರೆ.…
ಬಿಗ್ ಬಾಸ್ ಕನ್ನಡ ಸೀಸನ್ 11 ರ ಗ್ರ್ಯಾಂಡ್ ಫಿನಾಲೆ (Bigg boss kannada season 11 grand finale) ಮುಕ್ತಾಯವಾಗಿದೆ. ಹನುಮಂತನನ್ನು(Hanumanta) ವಿನ್ನರ್ ಎಂದು ಘೋಷಣೆ ಮಾಡಿ ಆಗಿದೆ. ಬಿಗ್ ಬಾಸ್ ಕನ್ನಡ ಸೀಸನ್ ಶುರುವಾಗಿ 4ನೇ ವಾರಕ್ಕ ಹನುಮಂತ (Hanumanta) ಮನೆಯೊಳಗೆ ಎಂಟ್ರಿ ಕೊಟ್ಟರು. ಈಗ ಹೊಸ ದಾಖಲೆಗಳನ್ನು ಬರೆದು ವಿನ್ನರ್ ಆಗಿದ್ದಾರೆ. ಬಿಗ್ ಬಾಸ್ ಇತಿಹಾದಲ್ಲಿ ಇದೇ ಮೊಟ್ಟ ಮೊದಲ ಬಾರಿಗೆ ವೈಲ್ಡ್ ಕಾರ್ಡ್ ಎಂಟ್ರಿ ಪಡೆದು ಫಿನಾಲೆ ತಲುಪಿದ್ದು ಇಬ್ಬರೇ ಸ್ಪರ್ಧಿಗಳು. ಒಂದು ರಜತ್ ಮತ್ತೊಂದು ಹನುಮಂತ(Hanumanta). ಅದರಲ್ಲಿ ಹನುಮಂತ ವಿನ್ನರ್ ಕೂಡ ಆಗಿದ್ದು ಬಿಗ್ ಬಾಸ್ ಕನ್ನಡ ವಿನ್ ಆದ ಮೊದಲ ವೈಲ್ಡ್ ಕಾರ್ಡ್ ಸ್ಪರ್ಧಿ ಎಂಬ ದಾಖಲೆ ಬರೆದರು. ಜೊತೆಗೆ 5 ಕೋಟಿಗೂ ಅಧಿಕ ವೋಡ್ ಪಡೆದು ಮತ್ತೊಂದು ದಾಖಲೆ ಸೃಷ್ಟಿಸಿದರು. ಹನುಮಂತ ಬಿಗ್ ಬಾಸ್ ವಿನ್ನರ್ ಆಗ್ತಿದ್ದಂತೆ ಅವರ ಫ್ಯಾನ್ಸ್ ಸಂತಸದಲ್ಲಿ ಸಂಭ್ರಮಿಸಿದ್ದಾರೆ. ಬಿಗ್ ಬಾಸ್ ಬಹುಮಾನ ಮೊತ್ತವಾಗಿ ಬರೋಬ್ಬರಿ 50…
ಭಾರತೀಯ ಕ್ರಿಕೆಟ್ ದಂತಕಥೆ ವೀರೇಂದ್ರ ಸೆಹ್ವಾಗ್ (Virender Sehwag) ಮತ್ತು ಅವರ ಪತ್ನಿ ಆರತಿ ಅಹ್ಲಾವತ್ 20 ವರ್ಷಗಳ ದಾಂಪತ್ಯ ಮುರಿದು ಬೀಳಲಿದೆ ಎಂಬ ಸುದ್ದಿ ವೈರಲ್ ಆಗಿದೆ… ಎರಡು ದಶಕಗಳ ದಾಂಪತ್ಯವನ್ನ ಕೊನೆಗೊಳಿಸಲು ಇಬ್ಬರೂ ನಿರ್ಧರಿಸಿದ್ದಾರಂತೆ. ಸೆಹ್ವಾಗ್ ಹಾಗೂ ಆರತಿ ನಡುವೆ 2000ರ ಆರಂಭದಲ್ಲಿ ಪ್ರೇಮ ಕಥೆ ಶುರುವಾಗಿತ್ತು. ಅದ್ಧೂರಿ ವಿವಾಹದೊಂದಿಗೆ ಲವ್‌ಸ್ಟೋರಿಗೆ ಮದುವೆಯ ಮುದ್ರೆ ಹಾಕಿದ್ದರು. ಕುಟುಂಬದ ಆಪ್ತ ಮೂಲಗಳ ಪ್ರಕಾರ, ಈಗಾಗಲೇ ಹಲವು ತಿಂಗಳುಗಳಿಂದ ಇಬ್ಬರೂ ಬೇರೆ ಬೇರೆಯಾಗಿ ವಾಸ ಮಾಡುತ್ತಿದ್ದಾರಂತೆ. ಶೀಘ್ರದಲ್ಲಿಯೇ ಇಬ್ಬರ ವಿಚ್ಛೇದನ ಖಚಿತವಾಗಬಹುದು ಎನ್ನಲಾಗಿದೆ. ದಂಪತಿಗೆ ಇಬ್ಬರು ಗಂಡು ಮಕ್ಕಳಿದ್ದಾರೆ. 2007ರಲ್ಲಿ ಹಿರಿಯ ಪುತ್ರ ಆರ್ಯವೀರ್ ಜನಿಸಿದ್ದರೆ, 2010ರಲ್ಲಿ 2ನೇ ಪುತ್ರ ವೇದಾಂತ್ ಜನಿಸಿದ್ದ. ದೀರ್ಘ ಅವಧಿಯ ಕಾಲ ಜೊತೆಯಾಗಿಯೇ ಸಂಸಾರ ಮಾಡಿದ್ದರೂ, ಇತ್ತೀಚಿನ ಬೆಳವಣಿಗಳು ಇವರಿಬ್ಬರ ನಡುವಿನ ಅಂತರ ದೊಡ್ಡ ಮಟ್ಟದಲ್ಲಿ ಹೆಚ್ಚಾಗಿದೆಯಂತೆ. ಕಳೆದ ವರ್ಷದ ದೀಪಾವಳಿ ಸಂಭ್ರಮದಲ್ಲೂ ವೀರೇಂದ್ರ ಸೆಹ್ವಾಗ್ (Virender Sehwag) ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡ ಫೋಟೋದಲ್ಲಿ ಅವರ…
ಇಂದು ನಡೆಯಲಿರುವ ಭಾರತ ಮತ್ತು ಇಂಗ್ಲೆಂಡ್ India-England)ನಡುವಿನ ಮೊದಲ ಟಿ-ಟ್ವೆಂಟಿ ಪಂದ್ಯಕ್ಕೆ ಎರಡೂ ತಂಡಗಳು ರೆಡಿಯಾಗಿವೆ. 5 ಮ್ಯಾಚ್‌ಗಳ ಈ ಸರಣಿಯಲ್ಲಿ ಇಂಗ್ಲೆಂಡ್ ತಂಡವನ್ನು ಬಗ್ಗು ಬಡಿಯಲು ಸೂರ್ಯಕುಮಾರ್ ಯಾದವ್(Suryakumar Yadav) ನೇತೃತ್ವದ ಟೀಮ್ ಇಂಡಿಯಾ(Team India) ಯುವ ಪಡೆ ತಯಾರಿ ಮಾಡಿಕೊಂಡಿದೆ. ಕೋಲ್ಕತ್ತದ ಈಡನ್ ಗಾರ್ಡನ್‌ನಲ್ಲಿ ನಡೆಯೋ ಈ ಮ್ಯಾಚ್‌ಗೆ ಆಡುವ 11 ಆಟಗಾರರ ಹೆಸರನ್ನು ಇಂಗ್ಲೆಂಡ್ ಈಗಾಗಲೇ ಫೈನಲ್ ಮಾಡಿದೆ. ಅದರಲ್ಲಿ ಮೂವರು ಆರ್‌ಸಿಬಿ ಆಟಗಾರರೇ ಇದ್ದು ಆರ್‌ಸಿಬಿ(RCB) ಅಭಿಮಾನಿಗಳಂತೂ ಇವರ ಆಟ ನೋಡೋಕೆ ಕಾಯ್ತಿದ್ದಾರೆ ಈಗಾಗಲೇ ಶ್ರೀಲಂಕಾ, ದಕ್ಷಿಣ ಆಫ್ರಿಕಾ ಸೇರಿ ಹಲವು ಟೂರ್ನಮೆಂಟ್‌ಗಳನ್ನು ಗೆದ್ದು ಟೀಮ್ ಇಂಡಿಯಾ (Team India) ಜೋಶ್‌ನಲ್ಲಿದೆ. ಕ್ಯಾಪ್ಟನ್ ಸೂರ್ಯಕುಮಾರ್ ಯಾದವ್(Suryakumar Yadav) ಮಾತ್ರವಲ್ಲದೆ ಹಾರ್ದಿಕ್ ಪಾಂಡ್ಯಾ, ಸಂಜು ಸ್ಯಾಮ್ಸನ್, ತಿಲಕ್ ವರ್ಮಾ, ಅಭಿಶೇಕ್ ಶರ್ಮಾ, ಅಕ್ಷರ್ ಪಟೇಲ್, ಅರ್ಶದೀಪ್ ಸಿಂಗ್ ಹೀಗೆ ಎಲ್ಲ ಆಟಗಾರರು ಭರ್ಜರಿ ಫಾರ್ಮ್‌ನಲ್ಲಿದ್ದಾರೆ. ಯುವ ಆಟಗಾರರ ಪರ್ಫಾರ್ಮೆನ್ಸ್ ಮೇಲೆ ಕೋಚ್ ಗಂಭೀರ್ ಕಣ್ಣಿಟ್ಟು ಮಾರ್ಗದರ್ಶನ ಮಾಡ್ತಿದ್ದಾರೆ.…
ದೊಡ್ಮನೆಯಲ್ಲಿ ಅಸಮಾಧಾನಕ್ಕೆ ಕಾರಣವೇನು? ದೊಡ್ಮನೆ ಸ್ಪರ್ಧಿಗೆ ಮಹಾ ಮೋಸ!, ಬಿಗ್‌ಬಾಸ್ ಮೇಲೆ ಶಾಕಿಂಗ್ ಆರೋಪ!, ಬಿಗ್‌ಬಾಸ್ ವಿರುದ್ಧ ಅಭಿಮಾನಿಗಳು ಗರಂ ಆಗಿದ್ದೇಕೆ? ಅಷ್ಟಕ್ಕೂ ಬಿಗ್‌ಬಾಸ್ ಆಟ ಮೋಸನಾ? ಅದನ್ನ ಹೇಳ್ತೀವಿ. ಬಿಗ್ ಬಾಸ್ ಕನ್ನಡ ಸೀಸನ್ 11 ಕೊನೆಯ ವಾರಕ್ಕೆ ಕಾಲಿಟ್ಟಿದೆ. ಮನೆಯೊಳಗೆ ಕಾಲಿಟ್ಟ ಇಪ್ಪತ್ತು ಜನರ ಪೈಕಿ ಕೇವಲ ಆರು ಸ್ಪರ್ಧಿಗಳು ಮೂರು ತಿಂಗಳ ಪಯಣವನ್ನು ಯಶಸ್ವಿಯಾಗಿ ಮುಗಿಸಿ ಫಿನಾಲೆ ವಾರಕ್ಕೆ ಕಾಲಿಟ್ಟಿದ್ದಾರೆ. ರಜತ್, ತ್ರಿವಿಕ್ರಮ್, ಉಗ್ರಂ ಮಂಜು, ಹನುಮಂತ, ಮೋಕ್ಷಿತಾ ಪೈ ಹಾಗೂ ಭವ್ಯ ಗೌಡ ಬಿಗ್ ಬಾಸ್ ಕನ್ನಡ ಸೀಸನ್ 11ರ ಫಿನಾಲೆ ತಲುಪಿದ ಖುಷಿಯಲ್ಲಿದ್ದಾರೆ. ಬಿಗ್ ಬಾಸ್ ಕನ್ನಡ ಸೀಸನ್ 11ರ ಗ್ರ್ಯಾಂಡ್ ಫಿನಾಲೆ ಹೊತ್ತಲ್ಲೇ ಇದೀಗ ಪ್ರೇಕ್ಷಕರಿಗೆ ಬಿಗ್ ಬಾಸ್ ಮೇಲೆ ಅಸಮಾಧಾನ-ಅನುಮಾನ ಎರಡೂ ಮೂಡಿದೆ. ಮೊದಲಿನಿಂದಲೂ ಸ್ಕ್ರಿಪ್ಟೆಡ್ ಎನ್ನುವ ಆರೋಪ ಹೊತ್ತಿದ್ದ ಬಿಗ್ ಬಾಸ್ ಈ ಸೀಸನ್‌ನಲ್ಲಿ ಅದನ್ನು ಸಾಬೀತು ಪಡಿಸಿದಂತಿದೆ. ಈ ಬಾರಿ ಬಿಗ್ ಬಾಸ್ ತಂಡ ಪಕ್ಷಪಾತ ಮಾಡಿದೆ. ಬಿಗ್…
ಡೊನಾಲ್ಡ್ ಟ್ರಂಪ್(Donald Trump) ಈಗ ಅಮೆರಿಕದ 47ನೇ ಅಧ್ಯಕ್ಷ.. 2ನೇ ಬಾರಿಗೆ ಅಮೆರಿಕದ ಅಧಿಪತಿಯಾಗಿರುವ ಟ್ರಂಪ್, ಚರಿತ್ರೆಯೇ ಒಂದು ರೋಚಕ ಕಥೆ.. ಟ್ರಂಪ್ ಬೆಳೆದು ಬಂದ ದಾರಿ ಇತಿಹಾಸದ ಪುಟದಲ್ಲಿ ಅಚ್ಚಳಿಯದಂತೆ ಉಳಿಯುವಂತಿದೆ. ಕೈತುಂಬಾ ಹಣ, ಲೆಕ್ಕವಿಲ್ಲದಷ್ಟು ಚಿನ್ನಾಭರಣ.. ಭವ್ಯ ಬಂಗಲೆಗಳು.. ಸಾಕಷ್ಟು ಕಂಪನಿಗಳು.. ಅಬ್ಬಬ್ಬಾ.. ಟ್ರಂಪ್ ಸಾಮ್ರಾಜ್ಯ ನಿರೀಕ್ಷೆಗೂ ನಿಲುಕದ್ದು.. ಇಂತಹ ಐಷಾರಾಮಿ ಜೀವನದ ಮಧ್ಯೆ ಟ್ರಂಪ್ ಹೆಚ್ಚೆಚ್ಚು ಸುದ್ದಿಯಾಗಿದ್ದು ಸುರ ಸುಂದರಿಯರ ಸಾಂಗತ್ಯದ ವಿಚಾರಕ್ಕೆ.. ನಿಜ.. ಸುಖದ ಸುಪ್ಪತ್ತಿಗೆಯಲ್ಲೇ ಬೆಳೆದ ಡೊನಾಲ್ಡ್ ಟ್ರಂಪ್(Donald Trump) ಈಗ ಅಮೆರಿಕದ ಅಧ್ಯಕ್ಷ.. ವೈಟ್ ಹೌಸ್‌ನ ಅಧಿಪತಿ.. ಎರಡನೇ ಬಾರಿಗೆ ಟ್ರಂಪ್, ಅಮೆರಿಕದ ಅಧ್ಯಕ್ಷರಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ. ಇದ್ರ ಜತೆ ಜತೆಗೆ ಅವರ ವೈಯಕ್ತಿಕ ವಿಚಾರಗಳು ಭಾರಿ ಸದ್ದು ಮಾಡುತ್ತಿವೆ.. ಅದರಲ್ಲೂ ಟ್ರಂಪ್‌ಗೆ ಇದ್ದ ಹೆಂಗಸರ ನಂಟಿನ ವಿಚಾರವೇ ಭಾರಿ ಹಲ್‌ಚಲ್ ಎಬ್ಬಿಸಿದೆ.. ಹಾಗಾದ್ರೆ, ಟ್ರಂಪ್‌ಗೆ ಇದ್ದ ಹೆಂಗಸರ ಹುಚ್ಚು ಎಂಥಾದ್ದು? ಮೂರು ಮೂರು ಮದುವೆಯ ಹಿಂದನ ರಹಸ್ಯವೇನು? ಪರಮಸುಂದರಿ ಮೆಲಾನಿಯಾ ಸಿಕ್ಕಿದ್ದು…
ಹನುಮಂತು (Hanumantu) ಆಟಕ್ಕೆ ಬಿಗ್‌ಬಾಸ್ ಮಂದಿ ಫುಲ್ ಶಾಕ್! ಹನುಮಂತು ದಡ್ಡ ಅಲ್ಲ ಪಕ್ಕಾ ಬುದ್ಧಿವಂತ!, ದೋಸ್ತಿಗೆ ಬ್ರೇಕ್, ಹುನುಮಂತು ಮೈಂಡ್ ಗೇಮ್‌ಗೆ ಎಲ್ಲಾ ಶಾಕ್.. ಶಾಕ್!, ಟ್ರೋಫಿ ಗೆಲ್ಲೋಕೆ ದೋಸ್ತಿನೇ ಬಲಿ ಕೊಟ್ಟ ಹನುಮಂತು! ಅಷ್ಟಕ್ಕೂ ಧನರಾಜ್ ಔಟ್ ಆಗಿದ್ದು ಯಾಕೆ? ಹನುಮಂತನ್ನ ಗೇಮ್ ಪ್ಲ್ಯಾನ್ ಏನು ಅಂತ ಹೇಳ್ತೀವಿ? ಬಿಗ್‌ಬಾಸ್ ಫಿನಾಲೆಗೆ (Bigg boss Finale)ಇನ್ನೊಂದು ವಾರ ಬಾಕಿ ಇದ್ದು, ಈಗಾಗ್ಲೇ ಡಬಲ್ ಎಲಿಮಿನೇಷನ್ (Elimination)ನಡೆದಿದೆ. ಸೋಷಿಯಲ್ ಮೀಡಿಯಾ ಮೂಲಕ ಜನಪ್ರಿಯತೆ ಪಡೆದಿದ್ದ ಧನರಾಜ್ಗೆ ಬಿಗ್ ಬಾಸ್ ಬಾಗಿಲು ತೆರೆದ ಬಳಿಕ ನೇಮು-ಫೇಮು ಕೂಡ ಹೆಚ್ಚಾಗಿತ್ತು. ಯೂಟ್ಯೂಬರ್ ಆಗಿದ್ದ ಧನರಾಜ್ಗೆ ಅಪಾರ ಫ್ಯಾನ್ ಫಾಲೋವರ್ಸ್ ಕೂಡ ಇದ್ದಾರೆ. ತನ್ನ ಕಾಮಿಡಿಯಿಂದಲೇ ಪ್ರೇಕ್ಷಕರನ್ನ ರಂಜಿಸಿದ್ದ ಧನರಾಜ್ ಬಿಗ್ ಬಾಸ್ ಜರ್ನಿ ಮುಗಿದಿದೆ. ಮಿಡ್ ಎಲಿಮಿನೇಷನ್ ವೀಕ್ ನಲ್ಲಿ ಸಖತ್ ಜೋಶ್ನಿಂದಲೇ ಧನರಾಜ್ ಆಟವಾಡಿದ್ರು. ಆದ್ರೆ ಮೋಸದಾಟ ಕ್ಯಾಮೆರಾದಲ್ಲಿ ಸೆರೆಯಾಗಿತ್ತು. ಕಿಚ್ಚನ ಮುಂದೆ ಭಾವುಕರಾದ ಧನರಾಜ್ ಮಾಡಿದ ತಪ್ಪಿಗೆ ಕ್ಷಮೆ ಕೂಡ…