ಬೆಂಗಳೂರು: ಇದೇ ತಿಂಗಳು ಕ್ರಿಸ್ ಮಸ್ ಸೇರಿದಂತೆ ವಿಶೇಷ ಹಬ್ಬಗಳು ಇರುವ ಹಿನ್ನೆಲೆಯಲ್ಲಿ ಸಾವಿರಕ್ಕೂ ಅಧಿಕ ವಿಶೇಷ ಬಸ್ ಗಳನ್ನು ರೋಡಿಗೆ ಇಳಿಸಲು ರಾಜ್ಯ ಸಾರಿಗೆ ಸಂಸ್ಥೆ ನಿರ್ಧರಿಸಿದೆ.

ಇಂದಿನಿಂದ ಡಿ. 28ರ ವರೆಗೆ ಬಸ್ ಗಳು ಸಂಚಾರ ನಡೆಸಲಿವೆ. ಕ್ರಿಸ್‌ಮಸ್ (Christmas) ಹಬ್ಬದ ಹಿನ್ನೆಲೆಯಲ್ಲಿ ಪ್ರಯಾಣಿಕರಿಂದ ಬಸ್ ಗಳ ಬೇಡಿಕೆ ಹೆಚ್ಚಾಗುತ್ತಿದೆ. ಈ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ 1000ಕ್ಕೂ ಅಧಿಕ ವಿಶೇಷ ಬಸ್ ಗಳು ಸಂಚರಿಸಲಿವೆ.

ಅಲ್ಲದೇ, ಡಿ.19, ಡಿ.20 ಹಾಗೂ ಡಿ.24ರಂದು ಬೆಂಗಳೂರಿನಿಂದ ಧರ್ಮಸ್ಥಳ, ಕುಕ್ಕೆ, ಶಿವಮೊಗ್ಗ, ಮಂಗಳೂರು, ಉಡುಪಿ, ಮಡಿಕೇರಿ, ಹಾಸನ, ಮೈಸೂರು, ಹುಬ್ಬಳ್ಳಿ, ಧಾರವಾಡ, ಬೆಳಗಾವಿ, ದಾವಣಗೆರೆ, ಬಳ್ಳಾರಿ, ಕಲಬುರಗಿ, ರಾಯಚೂರು, ಬೀದರ್ ಸೇರಿದಂತೆ ಹಲವು ನಗರಗಳಿಗೆ ವಿಶೇಷ ಬಸ್ ಸಂಚಾರ ನಡೆಯಲಿದೆ. ಡಿ.26 ಹಾಗೂ 28ರಂದು ಬೇರೆ ಬೇರೆ ಪ್ರದೇಶಗಳಿಂದ ಬೆಂಗಳೂರಿಗೆ ವಿಶೇಷ ಬಸ್ ಸೌಲಭ್ಯ ದೊರೆಯಲಿದೆ.

ಹಬ್ಬದ ಹಿನ್ನೆಲೆಯಲ್ಲಿ ಹೆಚ್ಚಿನ ಪ್ರಯಾಣಿಕರು ಸಂಚರಿಸುವುದರಿಂದಾಗಿ ವಿಶೇಷ ಬಸ್ ವ್ಯವಸ್ಥೆ ಮಾಡಲಾಗಿದೆ. ಆದರೆ, ದರಗಳಲ್ಲಿ ಯಾವುದೇ ಬದಲಾವಣೆ ಆಗುವುದಿಲ್ಲ. ಸಾಮಾನ್ಯ ದರಗಳೇ ಅನ್ವಯ ಆಗಲಿವೆ. ಅಲ್ಲದೇ, ಇನ್ನೂ ಹೆಚ್ಚು ಅಗತ್ಯ ಇದ್ದಲ್ಲಿ ಹೆಚ್ಚುವರಿ ಬಸ್ ಗಳನ್ನು ನಿಯೋಜಿಸಲಾಗುವುದು ಎಂದು ನಿಗಮ ಹೇಳಿದೆ.

Share.
Leave A Reply