ಕನಸಿನ ಹುಡುಗನ ಬಗ್ಗೆ ಅನುಷಾ ರೈ ಶಾಕಿಂಗ್ ಹೇಳಿಕೆ
ಕೊನೆಗೂ ಮದುವೆ ಬಗ್ಗೆ ಬಾಯ್ಬಿಟ್ಟ ಬಿಗ್ ಬಾಸ್ ಬ್ಯೂಟಿ! ಧರ್ಮನ ಜೊತೆ ಲವ್ ಗಾಸಿಫ್ಗೆ ಬಿಗ್ ಬಾಸ್ ರಾಣಿ ಹೇಳಿದ್ದೆನು?, ಅನುಷಾ ಮದುವೆ ಹಾಗೂ ಹುಡಗ ಕಥೆ ಏನು? ಅಷ್ಟಕ್ಕೂ ಬಿಗ್ ಬಾಸ್ ಬ್ಯೂಟಿಯ ಡ್ರೀಮ್ ಬಾಯ್ ಕಹಾನಿಯ ಕಂಪ್ಲೇಟ್ ಕಥೆ ಹೇಳ್ತೀವಿ .
ಬಿಗ್ ಬಾಸ್ ಮನೆಯ ಚಂದುಳ್ಳಿ ಬ್ಯೂಟಿ ಯಾರು ಅಂದರೇ ಅದು ಒನ್ ಅಂಡ್ ಒನ್ಲಿ ಬಿಗ್ ಬಾಸ್ ಬ್ಯೂಟಿ ಕ್ವೀನ್ ಅನುಷಾ ರೈ ( Anusha rai), ಬಿಗ್ ಬಾಸ್ (Bigg Boss Kannada) ಮನೆಯಲ್ಲಿ ಸತತ 50 ದಿನಗಳ ಕಾಲ ತಮ್ಮ ಕ್ಯೂಟ್ ಆಟ ಹಾಗೂ ಧರ್ಮನ ಜೊತಗಿನ ಲವ್ ಗಾಸಿಪ್ಯಿಂದ ಧೂಳ್ ಎಬ್ಬಸಿದರು, ಸಧ್ಯ ದೊಡ್ಮನೆಯಿಂದ ಬಂದು ಮೂರು ವಾರಗಳು ಕಳೆಯುತ್ತಿದರು ಇವರ ಹವಾ ಮಾತ್ರ ಕಮ್ಮಿ ಆಗಿಲ್ಲ. ಜೊತೆಗೆ ಅನುಷಾ ರೈ ತಮ್ಮ ಲವ್ ಗಾಸಿಪ್ , ಮದುವೆ ಹಾಗೂ ಫ್ಯೂಚರ್ ಪ್ಲಾನ್ ಬಗ್ಗೆ ಅಭಿಮಾನಿಗಳು ಕೇಳುತ್ತಿದ ಮಿಲಿಯನ್ ಡಾಲರ್ ಪ್ರಶ್ನೆಗಳಿಗೆ ಬಿಗ್ ಬಾಸ್ ರಾಣಿ ಶಾಕಿಂಗ್ ಹೇಳಿಕೆ ನೀಡಿದ್ದಾರೆ.

ಹೌದು….. ದೊಡ್ಮನೆಯಲ್ಲಿ ಬಿಗ್ಬಾಸ್ ಬ್ಯೂಟಿ ಧರ್ಮನ ( dharama Keerthiraj) ಜೊತೆ ಲವ್ ಗಾಸಿಪ್ನಲ್ಲಿ ಬಿದ್ದಿದ, ಅನುಷಾ ರೈ, ಈಗ ತನ್ನ ಡ್ರೀಮ್ ಬಾಯ್ ಬಗ್ಗೆ ತುಟಿ ಬಿಚ್ಚಿದು, ಈಗ ಸಖತ್ ವೈರಲ್ ಹಾಗಿದೆ. ಸಂದರ್ಶನ ಒಂದರಲ್ಲಿ ಮಾತನಾಡಿದ ಅವರು, ನನ್ನ ಮದುವೆಯಾಗುವ ಹುಡುಗ ನನ್ನನ್ನು ತುಂಬಾ ಚೆನ್ನಾಗಿ ನೋಡಿಕೊಳ್ಳಬೇಕು. ನಮ್ಮ ಮಧ್ಯ ಹೊಂದಾಣಿಕೆ ಇರಬೇಕು. ನನಗೆ ನಾನು ಹೋಗುವ ಮನೆ ತುಂಬಾ ಶ್ರೀಮಂತರಾಗಿರಬೇಕು. ಎಲ್ಲವೂ ಅನುಕೂಲ ಇದ್ದು ಸೆಟೆಲ್ ಆಗಿರಬೇಕು ಎನ್ನುವುದೆಲ್ಲಾ ಇಲ್ಲ. ಆದರೆ ನನ್ನನ್ನು ತುಂಬಾ ಚೆನ್ನಾಗಿ ಅರ್ಥ ಮಾಡಿಕೊಂಡಿರಬೇಕು.
ಇದನ್ನು ಓದಿ : Bigg Boss 11 – Shobha Shetty -ಬಿಗ್ ಬಾಸ್ನಲ್ಲಿ ಮತ್ತೆ ಹೈಡ್ರಾಮಾ! ಉಲ್ಟಾ ಹೊಡೆದ ಶೋಭಾಶೆಟ್ಟಿ!
ಹಾಗೇ ನಾನು ಮಾಡುವ ಕೆಲಸಗಳಿಗೆ ನನ್ನ ಬೆನ್ನ ಹಿಂದೆ ನಿಂತು ನಿನ್ನ ಕೈಯಲ್ಲಿ ಆಗುತ್ತದೆ. ನೀನು ಮಾಡು ಎಂದು ಬೆಂಬಲ ಕೊಡಬೇಕು. ಜೊತೆಗೆ ನನ್ನ ಮತ್ತು ನಮ್ಮ ಕುಟುಂಬವನ್ನು ತುಂಬಾ ಗೌರವದಿಂದ ನೋಡಬೇಕು. ಆ ರೀತಿ ಇರುವ ವ್ಯಕ್ತಿ ನನ್ನ ಜೀವನಕ್ಕೆ ಸಿಗಬೇಕು ಎಂದು ಅನುಷಾ ಹೇಳಿದರು.

ಇನ್ನು ಬರೀ ದುಡ್ಡೇ ಜೀವನ ಅಲ್ಲ. ನಮ್ಮ ವ್ಯಕ್ತಿತ್ವಗಳ ನಡುವೆ ಒಂದು ಹೊಂದಾಣಿಕೆ ಇರುಬೇಕು. ಯಾರು ಏನೇ ಅಂದರೂ ಅಲ್ಲಿ ನಂಬಂದೇ ನನ್ನ ಹತ್ತಿರ ಬಂದು ಸ್ಪಷ್ಟತೆ ತೆಗೆದುಕೊಳ್ಳಬೇಕು. ಒಟ್ಟಾರೆಯಾಗಿ ನನ್ನ ಜೊತೆ ಒಳ್ಳೆಯ ಹೊಂದಾಣಿಕೆ ಇರಬೇಕು ಎಂದು ನಟಿ ಅನುಷಾ ರೈ ತಾವು ಮದುವೆಯಾಗುವ ಡ್ರೀಮ್ ಬಾಯ್ ಬಗ್ಗೆ ಗುಣಗಾನ ಮಾಡಿದ್ದಾರೆ.
ಅದೇನೆ ಆಗಲಿ, ಚಂದುಳ್ಳಿ ಅನುಷಾ ರೈ ಸಧ್ಯ ಕನಸಿನ ಹುಡುಗನ ಬಗ್ಗೆ ಹೇಳಿದ ಮಾತು ಕೇಳಿಸಿಕೊಂಡಿರೊ ಅಭಿಮಾನಿಗಳು, ನಿಮ್ ಬಿಗ್ ಬಾಸ್ ( Bigg Boss House) ಹೀರೊ ಧರ್ಮನಲ್ಲೂ ಈ ಗುಣ ಇದ್ಯಲ್ಲ ಮೇಡಂ ಅಂತ ಅನುಷಾ ರೈ ಕಾಲೆಳೆದಿದ್ದಾರೆ.