ಬಿಗ್‌ಬಾಸ್‌ ಶೋ ನಡೆಯುತ್ತಿದ್ದ ಜಾಲಿವುಡ್‌ ಸ್ಟುಡಿಯೋಗೆ ಬೀಗ ಜಡಿದ ನಂತರ ಸ್ಪರ್ಧಿಗಳಿಗೆ ಇಕ್ಕಟ್ಟಿನ ಪರಿಸ್ಥಿತಿ ನಿರ್ಮಾಣವಾಗಿದೆ. ಶೋ ಶುರುವಾಗುತ್ತಾ ಇಲ್ವಾ ಅನ್ನೋ ಚಿಂತೆ ಒಂದ್ಕಡೆಯಾದ್ರೆ, ಮನೆಯವರನ್ನ ನೋಡ್ಬೇಕು ಅಂತಾ ಮತ್ತೊಂದು ಚಿಂತೆ.. ಆದ್ರೆ, ಸದ್ಯಕ್ಕಂತೂ ಇವರೆಡೂ ಅಸಾಧ್ಯವಾದುದು. ಇದರ ಮಧ್ಯೆ ರೆಸಾರ್ಟ್‌ಗೆ ಶಿಫ್ಟ್‌ ಆಗಿರುವ ಸ್ಪರ್ಧಿಗಳು, ಯಾರ ಸಂಪರ್ಕಕ್ಕೆ ಸಿಗದಂತೆ ಗೃಹ ಬಂಧನದಲ್ಲಿ ಇಟ್ಟಂತಾಗಿದೆ..

ಹೌದು.. ಬಿಗ್​​ಬಾಸ್ ಮನೆಯಲ್ಲಿದ್ದ ಎಲ್ಲ 17 ಸ್ಪರ್ಧಿಗಳನ್ನು ಸ್ಥಳಾಂತರ ಮಾಡಲಾಗಿದ್ದು, ಎಲ್ಲರನ್ನೂ ರಾಮನಗರದ ಬಳಿಕ ಈಗಲ್​​ಟನ್ ರೆಸಾರ್ಟ್​​ನಲ್ಲಿ ಇರಿಸಲಾಗಿದೆ. ಆದರೆ ರೆಸಾರ್ಟ್​​​ನಲ್ಲಿಯೂ ಸಹ ಬಿಗ್​​ಬಾಸ್ ಸ್ಪರ್ಧಿಗಳಿಗೆ ಕೆಲವು ಕಠಿಣ ನಿಯಮಗಳನ್ನು ಹೇರಲಾಗಿದ್ದು, ಅಲ್ಲಿಯೂ ಬಿಗ್​​ಬಾಸ್ ಸ್ಟೈಲ್‌ನಲ್ಲೇ ಶೋ ನಡೆಸಲಾಗುತ್ತಿದೆ. ಈಗಲ್‌ಟನ್ ರೆಸಾರ್ಟ್​​​ನಲ್ಲಿ ಸ್ಪರ್ಧಿಗಳನ್ನು ಪ್ರತ್ಯೇಕವಾಗಿ ಇರಿಸಲಾಗಿದ್ದು, 17 ಸ್ಪರ್ಧಿಗಳನ್ನು 12 ಕೋಣೆಗಳಲ್ಲಿ ಇರಿಸಲಾಗಿದೆ. ನಿನ್ನೆ ರೆಸಾರ್ಟ್​​ಗೆ ಕರೆದುಕೊಂಡು ಬಂದ ಬಳಿಕ ಸ್ಪರ್ಧಿಗಳೊಟ್ಟಿಗೆ ಬಿಗ್​​ಬಾಸ್ ಆಯೋಜಕರು ಸಭೆ ನಡೆಸಿದ್ದು, ಪರಿಸ್ಥಿತಿ ವಿವರಿಸಿದ್ದಾರೆ. ಎಲ್ಲ ಸ್ಪರ್ಧಿಗಳ ಮನೆಯವರಿಗೆ ಮಾಹಿತಿ ನೀಡಿರುವುದಾಗಿ ಸ್ಪರ್ಧಿಗಳಿಗೆ ಮಾಹಿತಿ ನೀಡಿದ್ದಾರೆ. ಅಲ್ಲದೇ, ರೆಸಾರ್ಟ್​​ನಲ್ಲಿ ಇದ್ದಾಗಲೂ ಸಹ ಕೆಲವು ನಿಯಮಗಳ ಪಾಲನೆ ಮಾಡಬೇಕೆಂದು ಸ್ಪರ್ಧಿಗಳಿಗೆ ಸೂಚಿಸಿದ್ದಾರೆ. ಟಿವಿ ವೀಕ್ಷಿಸುವಂತಿಲ್ಲ. ಮೊಬೈಲ್ ಬಳಕೆ ಇಲ್ಲ. ಬಿಗ್​​ಬಾಸ್ ಸ್ಪರ್ಧಿಗಳು ಮತ್ತು ಆಯೋಜಕರ ಹೊರತಾಗಿ ಇನ್ಯಾರೊಂದಿಗೂ ಸಂಪರ್ಕ ಇರಿಸಿಕೊಳ್ಳುವಂತಿಲ್ಲ. ರೆಸಾರ್ಟ್​​ನ ಸಿಬ್ಬಂದಿಯ ಜೊತೆಗೂ ಮಾತುಕತೆ ಆಡುವಂತಿಲ್ಲ ಅಂತೆಲ್ಲಾ ಖಡಕ್‌ ಸೂಚನೆ ನೀಡಿದ್ದು, ಸ್ಪರ್ಧಿಗಳು ಫುಲ್‌ ಶಾಕ್‌ ಆಗಿದ್ದಾರೆ.

Read Also : ಥೈರಾಯ್ಡ್‌ ಸಮಸ್ಯೆ ಇರುವವರು ಯಾವ ರೀತಿ ಪಥ್ಯ ಮಾಡಬೇಕು ಗೊತ್ತಾ?

Share.
Leave A Reply