







2024ರಲ್ಲಿ ಡಿವೋರ್ಸ್ ಪಡೆದ ಸೆಲೆಬ್ರಿಟಿಗಳು ಯಾರು..?
2024 ಇನ್ನೇನು ಕೊನೆಯ ಕ್ಷಣದಲ್ಲಿದೆ.. 2025 ಹೊಸ ವರ್ಷದ(New year) ಆಗಮನಕ್ಕೆ ಕೌಂಟ್ಡೌನ್ ಶುರುವಾಗಿದೆ.. ಮುಂಬರುವ ಹೊಸ ವರ್ಷ ಹೇಗಿರುತ್ತೋ ಗೊತ್ತಿಲ್ಲ.. ಆದ್ರೆ, ಕಳೆದು ಹೋಗುತ್ತಿರುವ 2024 ಹಲವು ಸಿಹಿ ಕಹಿ ಘಟನೆಗಳಿಗೆ ಸಾಕ್ಷಿಯಾಗಿದೆ.. ಅದ್ರಲ್ಲೂ ಕೆಲವು ಸೆಲೆಬ್ರಿಟಿಗಳ ಬಾಳಲ್ಲಿ ಬಿರುಗಾಳಿಯನ್ನೇ ಎಬ್ಬಿಸಿದೆ.. ಹತ್ತಾರು ವರ್ಷಗಳ ಸುಖವಾಗಿ ಸಂಸಾರ ಮಾಡಿದ್ದ ಜೋಡಿಗಳು ಇದೀಗ ನಾನೊಂದು ತೀರ.. ನೀನೊಂದು ತೀರ ಆಗಿದ್ದಾರೆ.. ಹಾಗಾದ್ರೆ, ಆ ಜೋಡಿಗಳು ಯಾರ್ಯಾರು..? ಯಾವ ಕಾರಣಕ್ಕೆ ಬೇರೆ ಬೇರೆ ಆದ್ರು ಅನ್ನೋದನ್ನು ಹೇಳ್ತೀವಿ ಅದಕ್ಕೂ ಮೊದಲು ಬಾಸ್ ಟಿವಿ ಕನ್ನಡ (boss tv kannada)ಚಾನೆಲ್ನ್ನ ಸಬ್ಸ್ಕ್ರೈಬ್ ಮಾಡಿ..
ದಾಂಪತ್ಯಕ್ಕೆ ʼಬಿಗ್ʼ ಬ್ರೇಕ್ ಹಾಕಿದ ಚಂದನ್-ನಿವೇದಿತಾ!
ಕನ್ನಡದ ಸೆಲೆಬ್ರಿಟಿ ಜೋಡಿ ಚಂದನ್ ಶೆಟ್ಟಿ ಮತ್ತು ನಿವೇದಿತಾ ಗೌಡ, 2020ರ ಫೆಬ್ರವರಿ 26ರಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಬಿಗ್ಬಾಸ್ (bigg boss)ಕನ್ನಡ ಸೀಸನ್ 5ರಲ್ಲಿ ಭಾಗವಹಿಸಿದ್ದ ಈ ಜೋಡಿ, ನಂತರ ಪ್ರೀತಿಸಿ ಮದುವೆಯಾಗಿದ್ದರು. 4 ವರ್ಷಗಳ ಕಾಲ ಜೀವನ ನಡೆಸಿದ್ದ ಇಬ್ಬರೂ 2024ರ ಜೂನ್ 7ರಂದು ಪರಸ್ಪರ ಒಪ್ಪಿಗೆ ಮೇರೆಗೆ ಡಿವೋರ್ಸ್ ಪಡೆದುಕೊಂಡಿದ್ದಾರೆ..
ಡಿವೋರ್ಸ್ಗೆ ಸಾಕ್ಷಿಯಾದ ಡಾ.ರಾಜ್ ಕುಟುಂಬದ ಕುಡಿ!
ಕನ್ನಡದ ಮೇರುನಟ ದಿವಂಗತ ಡಾ.ರಾಜ್ಕುಮಾರ್ ಕುಟುಂಬದ ಕುಡಿಯ ಬಾಳಲ್ಲಿ ವಿಚ್ಚೇದನ ಎಂಬ ಬಿರುಗಾಳಿ ಬೀಸಿದೆ.. ರಾಘವೇಂದ್ರ ರಾಜ್ಕುಮಾರ್ ಪುತ್ರ ಯುವ ರಾಜ್ಕುಮಾರ್, ತಾವು ಪ್ರೀತಿಸಿ (lovestory)ಮದುವೆಯಾಗಿದ್ದ ಶ್ರೀದೇವಿಯಿಂದ ದೂರ ಆಗಿದ್ದಾರೆ. ನಟ ಯುವ ರಾಜ್ಕುಮಾರ್ ಡಿವೋರ್ಸ್ ಸುದ್ದಿ ಈ ವರ್ಷದ ಮಧ್ಯದಲ್ಲಿ ಸಾಕಷ್ಟು ಸದ್ದು ಮಾಡಿತು. ಯುವ ರಾಜ್ಕುಮಾರ್ ಶ್ರೀದೇವಿ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದು, ಪ್ರಕರಣ ನ್ಯಾಯಾಲಯದಲ್ಲಿದೆ.
14 ವರ್ಷದ ದಾಂಪತ್ಯ ಕೊನೆಗೊಳಿಸಿದ ಸಾನಿಯಾ-ಶೋಯೆಬ್!
ಭಾರತದ ಟೆನಿಸ್ ತಾರೆ ಸಾನಿಯಾ ಮಿರ್ಜಾ ಮತ್ತು ಪಾಕಿಸ್ತಾನಿ ಕ್ರಿಕೆಟಿಗ ಶೋಯೆಬ್ ಮಲಿಕ್ ವಿವಾಹ ಆ ಸಮಯದಲ್ಲೇ ಭಾರಿ ಚರ್ಚೆಗೆ ಕಾರಣವಾಗಿತ್ತು. 2010ರಲ್ಲಿ ಮದುವೆಯಾಗಿದ್ದ ಈ ಜೋಡಿಗೆ ಒಬ್ಬ ಮಗನಿದ್ದಾನೆ.. ಚೆನ್ನಾಗಿಯೇ ಇದ್ದ ಜೋಡಿಯ ಮಧ್ಯೆ 14 ವರ್ಷಗಳ ನಂತರ ಬಿರುಕು ಕಾಣಿಸಿಕೊಂಡಿತು. ಶೋಯೆಬ್ ಈ ವರ್ಷದ ಆರಂಭದಲ್ಲಿ ಪಾಕಿಸ್ತಾನಿ ನಟಿ ಸನಾ ಜಾವೇದ್ ಜತೆ ಮತ್ತೊಂದು ಮದುವೆಯಾದ್ರು. ಆ ಸಂದರ್ಭದಲ್ಲಿ ಸಾನಿಯಾ ಮಿರ್ಜಾ ಮಾನಸಿಕವಾಗಿ ತುಂಬಾ ನೊಂದಿದ್ದರು..
29 ವರ್ಷಗಳ ಬಳಿಕ ಡಿವೋರ್ಸ್ ನೀಡಿದ ಎ.ಆರ್.ರೆಹಮಾನ್!
ಸಂಗೀತ ಮಾಂತ್ರಿಕ ಎ.ಆರ್.ರೆಹಮಾನ್ ಮತ್ತು ಸೈರಾ ಬಾನು ಕೂಡ ಇತ್ತೀಚೆಗಷ್ಟೇ ದೂರ ದೂರ ಆಗಿದ್ದಾರೆ. 1995 ರಲ್ಲಿ ವಿವಾಹವಾಗಿದ್ದ ಈ ದಂಪತಿಗೆ ಖತೀಜಾ, ರಹೀಮಾ ಮತ್ತು ಅಮೀನ್ ಎಂಬ ಮೂವರು ಮಕ್ಕಳಿದ್ದಾರೆ.. ಆದ್ರೆ, ಬರೋಬ್ಬರಿ 29 ವರ್ಷಗಳ ಬಳಿಕ ಎಆರ್ ರೆಹಮಾನ್ ದಂಪತಿ ವಿಚ್ಛೇದನ ಪಡೆದು ದೂರವಾಗಿದ್ದಾರೆ. ಸೈರಾ ಬಾನು ಹಾಗೂ ಎಆರ್ ರೆಹಮಾನ್ ತಮ್ಮ ಸೋಶಿಯಲ್ ಮೀಡಿಯಾದಲ್ಲಿ ವಿಚ್ಛೇದನ ಘೋಷಿಸಿದ್ರು..
4 ವರ್ಷಕ್ಕೆ ದೂರ ದೂರ ಆದ ಪಾಂಡ್ಯ, ನತಾಶಾ..!
ಕ್ರಿಕೆಟಿಗ ಹಾರ್ದಿಕ್ ಪಾಂಡ್ಯ ಮತ್ತು ನಟಿ ನತಾಶಾ ಸ್ಟಾಂಕೋವಿಕ್ ವಿಚ್ಛೇದನದ ಬಗ್ಗೆ ವದಂತಿಗಳು ಈ ವರ್ಷದ ಐಪಿಎಲ್ ಸಮಯದಿಂದಲೂ ಹರಿದಾಡಿತ್ತು. ಬಳಿಕ ಜೂನ್ನಲ್ಲಿ ನಡೆದ ಟಿ20 ವಿಶ್ವಕಪ್ ವೇಳೆ ಈ ವದಂತಿಗಳಿಗೆ ತಾತ್ಕಾಲಿಕ ಬ್ರೇಕ್ ಬಿದ್ದಿತ್ತು. ಆದರೆ ವಿಶ್ವಕಪ್ ಬಳಿಕ ಇಬ್ಬರು ವಿಚ್ಛೇದನ ಘೋಷಿಸಿದ್ರು. ಕೆಲವು ವರ್ಷಗಳ ಕಾಲ ಡೇಟಿಂಗ್ ಮಾಡಿದ ನಂತ್ರ 2020ರಲ್ಲಿ ಇಬ್ಬರೂ ವಿವಾಹವಾಗಿದ್ರು. ಅದೇ ವರ್ಷದಲ್ಲಿ ಮಗ ಅಗಸ್ತ್ಯನಿಗೆ ನತಾಶಾ ಜನ್ಮ ನೀಡಿದ್ರು. ಮದುವೆಯಾದ 4 ವರ್ಷಕ್ಕೆ ಈ ಜೋಡಿ ದಾಂಪತ್ಯ ಕೊನೆಗೊಳಿಸಿ ದೂರವಾದ್ರು. ಇದೇ ಹೊತ್ತಲ್ಲಿ ವಿಶ್ವಕಪ್ ಗೆದ್ದ ಖುಷಿಯಲ್ಲಿ ಹಾರ್ದಿಕ್ ಪಾಂಡ್ಯ ಕಣ್ಣೀರಿಟ್ಟ ಫೋಟೋಗಳು ಭಾರಿ ಸಂಚಲನ ಸೃಷ್ಟಿಸಿದ್ದವು..
20 ವರ್ಷದ ದಾಂಪತ್ಯಕ್ಕೆ ಬ್ರೇಕ್ ಹಾಕಿದ ಐಶ್ವರ್ಯ-ಧನುಷ್!
ಇನ್ನು, ತಮಿಳು ನಟ ಧನುಷ್ ಹಾಗೂ ಸೂಪರ್ ಸ್ಟಾರ್ ರಜನಿಕಾಂತ್ ಪುತ್ರಿ ಐಶ್ವರ್ಯಾ 2004ರಲ್ಲಿ ಪ್ರೀತಿಸಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ರು. ಈ ಜೋಡಿಗೆ ಯಾತ್ರಾ ಹಾಗೂ ಲಿಂಗ ಎಂಬ ಇಬ್ಬರು ಗಂಡು ಮಕ್ಕಳಿದ್ದಾರೆ. 2022ರಲ್ಲಿ ಪರಸ್ಪರ ಬೇರೆಯಾಗಲು ನಿರ್ಧರಿಸಿದ್ದ ಧನುಷ್ & ಐಶ್ವರ್ಯಾ, ಕೋರ್ಟ್ ಮೆಟ್ಟಿಲೇರಿದ್ದರು. 2024ರಲ್ಲಿ ಕೋರ್ಟ್ ಅಧಿಕೃತವಾಗಿ ಡಿವೋರ್ಸ್ ನೀಡಿದ್ದು, 20 ವರ್ಷಗಳ ದಾಂಪತ್ಯ ಜೀವನಕ್ಕೆ ಫುಲ್ ಸ್ಟಾಪ್ ಇಟ್ಟಿದ್ದಾರೆ..
ತಮಿಳಿನ ಮತ್ತೊಂದು ಸೂಪರ್ ಜೋಡಿ ದೂರ ದೂರ!
ತಮಿಳು ಸಿನಿಮಾ ಇಂಡಸ್ಟ್ರಿಯ ಖ್ಯಾತ ನಟ ಜಯಂ ರವಿ ಹಾಗೂ ಅವರ ಪತ್ನಿ ಆರತಿ ಇತ್ತೀಚೆಗಷ್ಟೇ ಬೇರೆಯಾಗಿದ್ದಾರೆ. ಈ ದಂಪತಿಗೆ ಇಬ್ಬರು ಮಕ್ಕಳಿದ್ದು, ತಮ್ಮ 15 ವರ್ಷದ ದಾಂಪತ್ಯಕ್ಕೆ ಕೊನೆ ಹಾಡಿದ್ದಾರೆ. ಆದರೆ, ಅವರ ಪತ್ನಿ ತಮ್ಮನ್ನು ಕೇಳದೇ ಈ ನಿರ್ಧಾರ ಮಾಡಿದ್ದಾರೆಂದು ಆರೋಪಿಸುತ್ತಿದ್ದು, ಭಾರಿ ವಿವಾದಕ್ಕೆ ಕಾರಣವಾಗಿದೆ…
ಇದಿಷ್ಟೇ ಅಲ್ಲ.. ಇನ್ನೂ ಹಲವು ಸ್ಟಾರ್ಗಳ ಬಾಳಲ್ಲಿ ವಿಚ್ಛೇದನದ ಹೊಗೆಯಾಡ್ತಿದೆ.. ಅದ್ರಲ್ಲೂ ಮಾಜಿ ವಿಶ್ವಸುಂದರಿ ಕರಾವಳಿ ಬೆಡಗಿ ಐಶ್ವರ್ಯಾ ರೈ ಹಾಗೂ ಅಭಿಷೇಕ್ ಬಚ್ಚನ್ ಮಧ್ಯೆ ಡಿವೋರ್ಸ್ ಸುದ್ದಿ ಹರಿದಾಡುತ್ತಲೇ ಇದೆ.. ದಳಪತಿ ವಿಜಯ್ ಹಾಗೂ ಸಂಗೀತಾ ದಾಂಪತ್ಯದಲ್ಲೂ ವೈಮನಸು ಉಂಟಾಗಿದೆ ಎನ್ನಲಾಗ್ತಿದೆ.. ಆದ್ರೆ, ಮುಂದೇನಾಗುತ್ತೋ ಕಾದು ನೋಡ್ಬೇಕಿದೆ.