ರಾಜಕೀಯದಲ್ಲಿ ಯಾವ ಕ್ಷಣದಲ್ಲಿ ಏನ್ ಆಗುತ್ತೆ ಅಂತಾ ಹೇಳಲಿಕ್ಕೆ ಆಗೋದಿಲ್ಲ.. ಇದಕ್ಕೆ ಸಾಕ್ಷ್ಯ ಉದಾಹರಣೆಯೇ ಸಹಕಾರ ಸಚಿವರಾಗಿದ್ದ ಕೆಎನ್ ರಾಜಣ್ಣ ಅವರು.. ತಮ್ಮ ಮಾತಿನ ಮೇಲೆ ನಿಗಾ ಇಲ್ಲದೇ ತಮ್ಮ ಸರ್ಕಾರದ ವಿರುದ್ಧ ನೀಡಿದ್ದ ಹೇಳಿಕೆ ಅವರಿಗೆ ಈಗ ಮುಳುವಾಗಿದ್ದು, ಸಚಿವ ಸ್ಥಾನವನ್ನ ಕಸಿದಿದೆ.
ಕಾಂಗ್ರೆಸ್ ಸರ್ಕಾರದ ಸಂಪುಟದಲ್ಲಿ ಸಹಕಾರ ಸಚಿವರಾಗಿದ್ದ ಕೆಎನ್ ರಾಜಣ್ಣ ಸಚಿವ ಸ್ಥಾನದಿಂದ ವಜಾಗೊಳಿಸಲಾಗಿದೆ. ಈ ಹಿನ್ನಲೆ ರಾಜಣ್ಣರನ್ನ ಬಿಜೆಪಿ ಗಾಳ ಹಾಕಲು ಪ್ರಯತ್ನಿಸುತ್ತಿದೆ. ರಾಜಣ್ಣ ಪುತ್ರ ಎಮ್‌ಎಲ್‌ಸಿ ರಾಜೇಂದ್ರರನ್ನ ಶ್ರೀ ರಾಮುಲು ಭೇಟಿಯಾಗಿ ಬಿಜೆಪಿ ಪಕ್ಷಕ್ಕೆ ಸೇರ್ಪಡೆಯಾಗುವಂತೆ ಆಹ್ವಾನಿಸಿದ್ದಾರೆ ಅನ್ನೋ ಮಾತು ರಾಜಕೀಯ ವಲಯದಲ್ಲಿ ಹರಿದಾಡ್ತಿದೆ.
ಸಚಿವ ಸತೀಶ್ ಜಾರಕಿಹೊಳಿ ಅವರೊಂದಿಗೆ ಕಾಂಗ್ರೆಸ್ ಶಾಸಕರ ತಂಡ ರಾಜಣ್ಣ ಅವರನ್ನು ಅವರ ನಿವಾಸದಲ್ಲಿ ಭೇಟಿಯಾಗಿ ಚರ್ಚೆ ನಡೆಸಿ ನಂತರ ಈ ಬೆಳವಣಿಗೆ ನಡೆದಿದೆ. ಇಡೀ ಸಮುದಾಯ ಮತ್ತು ಅದರ ನಾಯಕರು ನಿಮ್ಮೊಂದಿಗಿದ್ದಾರೆ, ಬಿಜೆಪಿಗೆ ಬನ್ನಿ ನೀವು ಮತ್ತು ನಿಮ್ಮ ಮಗ ಬಿಜೆಪಿಗೆ ಬನ್ನಿ. ನಾನು, ಶಿವನಗೌಡ ನಾಯಕ, ರಾಜುಗೌಡ ಮತ್ತು ನಮ್ಮ ಎಲ್ಲಾ ನಾಯಕರು, ನಾವು ನಿಮ್ಮನ್ನು ಪಕ್ಷಕ್ಕೆ ಸ್ವಾಗತಿಸುತ್ತೇವೆ ಮತ್ತು ಪಕ್ಷದಲ್ಲಿ ನಮಗಿಂತ ಹೆಚ್ಚಿನ ಗೌರವ ಸಿಗಲೂ ಇದೆ ಎಂದು ಶ್ರೀರಾಮುಲು ಭರವಸೆ ನೀಡಿದ್ದಾರೆ.
Read Also : ಅಶ್ವತ್ಥ ನಾರಾಯಣ ಮಾತಿಗೆ ಡಿಕೆಶಿ ರೋಷಾವೇಶ.. ಏಕವಚನದಲ್ಲೇ ವಾಕ್ಸಮರ, ಸದನದಲ್ಲಿ ಗದ್ದಲ!
ಸತ್ಯವನ್ನು ಹೇಳಿದ್ದಕ್ಕಾಗಿ ರಾಜಣ್ಣ ಅರನ್ನು ಅವಮಾನಿಸಿ ಸಚಿವ ಸ್ಥಾನದಿಂದ ವಜಾಗೊಳಿಸಲಾಗಿದೆ ಎಂದು ರಾಮುಲು ಕಿಡಿ ಕಾರಿದ್ದಾರೆ. ಈ ನಡುವೆ ಕಾಂಗ್ರೆಸ್ ಶಾಸಕರಾದ ರಘುಮೂರ್ತಿ, ಬಸವಂತಪ್ಪ, ಅನಿಲ್ ಚಿಕ್ಕಮಧು ಮತ್ತು ಇತರರು ಸತೀಶ್ ಜಾರಕಿಹೊಳಿ ಅವರೊಂದಿಗೆ ರಾಜಣ್ಣ ಅವರನ್ನು ಭೇಟಿ ಮಾಡಿ ಚರ್ಚೆ ನಡೆಸಿದರು.

