ಮುಂಗಾರಿನ ಅಧಿವೇಶನದಲ್ಲಿ ಆಡಳಿತಾರೂಢ ಸರ್ಕಾರ ಹಾಗೂ ವಿರೋಧ ಪಕ್ಷಗಳ ನಡುವೆ ವಾಕ್ಸಮರ ಭಾರೀ ಜೋರಾಗಿದೆ. ಆಡಳಿತಾರೂಢ ಕಾಂಗ್ರೆಸ್ ಪಕ್ಷದ ವಿರುದ್ಧ ವಿರೋಧ ಪಕ್ಷದ ನಾಯಕರು ಕಲಾಪದಲ್ಲಿ ಮುಗಿಬಿದ್ದಿದ್ದಾರೆ. ಅಶ್ವತ್ಥ ನಾರಾಯಣ ಹಾಗೂ ಡಿಕೆ ಶಿವಕುಮಾರ್ ಮಾತಿನ ವರಸೆ ಜೋರಾಗಿದ್ದು, ಕಲಾಪದಲ್ಲಿ ಡಿಕೆಶಿ ಅಶ್ವತ್ಥ ನಾರಾಯಣ ವಿರುದ್ಧ ಏಕವಚನದಲ್ಲೇ ಅಬ್ಬರಿಸಿದ್ದಾರೆ.
ಸದನದಲ್ಲಿ ಅಶ್ವತ್ಥ ನಾರಾಯಣ ಹಾಗೂ ಡಿಕೆಶಿ ನಡುವೆ ಏಕವಚನದಲ್ಲಿ ಟಾಕ್ ವಾರ್‌ಯೇ ನಡೆದಿದೆ. ಅಶ್ವತ್ಥ ನಾರಾಯಣ ಮಾತಿಗೆ ಡಿಕೆ ಶಿವಕುಮಾರ್ ಕಿಡಿಕಾರಿದ್ದಾರೆ. ಕಲಾಪದಲ್ಲಿ ಅವರು ಬೈದಾಡಿದ್ದು ಅವರಿಗೇ ಕೇಳಿಸಿಲಿಕ್ಕಿಲ್ಲ, ಇನ್ನು ನಮಗೆಲ್ಲಿ ಅರ್ಥವಾಗುವಂತೆ ಕೇಳಿಸೀತು? ನಿಮಗೆ ಒಂದು ರೂಪಾಯಿಯ ನೈತಿಕತೆ ಇಲ್ಲ, ಭ್ರಷ್ಟಾಚಾರದ ಪಿತಾಮಹ ನೀನು, ಇತಿಹಾಸದ ಅತ್ಯಂತ ಭ್ರಷ್ಟ ಸರ್ಕಾರ ಇದು ಅಂತಾ ಅಶ್ವತ್ಥ ನಾರಾಯಣ ಡಿಕೆಶಿಗೆ ಹೇಳಿದ್ದಾರೆ.
ಸದನದಲ್ಲಿ ಕೃಷಿ ಸಚಿವ ಚಲುವರಾಯಸ್ವಾಮಿ ಮಾತನಾಡ್ತಿದ್ದಾಗ ಏಕಾಏಕಿ ಎದ್ದು ನಿಂತ ಅಶ್ವತ್ಥ ನಾರಾಯಣ ಆಡಳಿತ ಪಕ್ಷದ ಸದಸ್ಯರನ್ನು ಕೆರಳುವಂತೆ ಮಾತನಾಡಿದರು ವಾಗ್ದಾದ ನಡೆಯುತ್ತಿರುವಾಗ ಡಿಸಿಎಂ ಡಿ ಕೆ ಶಿವಕುಮಾರ್ ಸದನಕ್ಕೆ ಆಗಮಿಸಿದರು. ಇಂಧನ ಇಲಾಖೆ ಸಚಿವ ಕೆ ಜೆ ಜಾರ್ಜ್ ಎದ್ದು ನಿಂತು ಮಾತನಾಡಿದರು. “ಕೃಷಿ ಸಚಿವರಿಗೆ ಉತ್ತರ ಕೊಡಲು ಧಮ್ಮು ಇಲ್ವಾ? ಕೆ ಜೆ ಜಾರ್ಜ್ ಅವರೇ ನಿಮಗೆ ಕೃಷಿ ಬಗ್ಗೆ ಏನು ಗೊತ್ತು? ನಿಮ್ಮ ಇಲಾಖೆ ಬಗ್ಗೆ ಮೊದಲು ತಿಳಿದುಕೊಂಡು ಮಾತನಾಡಿ. ನೀವು ಅಸಮರ್ಥರು, ನಿಮಗೆ ಯೋಗ್ಯತೆ ಇದೆಯಾ?” ಎಂದು ಏರುಧ್ವನಿಯಲ್ಲಿ ಅಶ್ವತ್ಥ ನಾರಾಯಣ ಹೇಳಿದರು.
ಡಿ ಕೆ ಶಿವಕುಮಾರ್ ಜಾರ್ಜ್ ಬೆಂಬಲಕ್ಕೆ ನಿಂತು, ಜನರು ಜಾರ್ಜ್ ಅವರನ್ನು ಆಯ್ಕೆ ಮಾಡಿದ್ದಾರೆ. ನೀನು ಅಸಮರ್ಥ, ನೀನು ಭ್ರಷ್ಟಾಚಾರದ ಪೀತಾಮಹ, ನೀನು ಅಯೋಗ್ಯ’ ಎಂದು ತಿರುಗೇಟು ನೀಡಿದರು. ಅಲ್ಲಿಗೆ ಅಶ್ವತ್ಥ ನಾರಾಯಣ ಸಹ ಭ್ರಷ್ಟಾಚಾರ ಎಂದರೆ ಡಿ ಕೆ ಶಿವಕುಮಾರ್” ಎಂದು ಪ್ರತ್ಯುತ್ತರ ನೀಡಿದರು. ಹೀಗೆ ಡಿಕೆ ಮತ್ತು ಅಶ್ವತ್ಥ ನಡುವೆ ಮಾತಿನ ವಾಕ್ಸಮರ ಮುಂದುವರಿದು ಸಭಾಧ್ಯಕ್ಷರು ಸದನವನ್ನು ಐದು ನಿಮಿಷ ಮುಂದೂಡಿದರು.

