BosstvKannada

ಹೊಸ ಪಕ್ಷಕ್ಕೆ ಯತ್ನಾಳ್‌ ನಾಂದಿ..? : ಪ್ರತಾಪ್ ಸಿಂಹ ಹೇಳೋದೇನು?

ಬಿಜೆಪಿ ನಾಯಕರ ವಿರುದ್ಧದ ಹೇಳಿಕೆ ನೀಡಿದ ಆರೋಪ ಹಿನ್ನೆಲೆಯಲ್ಲಿ ಉಚ್ಚಾಟನೆಗೊಂಡಿರುವ ಬಸನಗೌಡ ಪಾಟೀಲ್‌ ಯತ್ನಾಳ್‌ ಈಗ ಹೊಸ ಪಕ್ಷ ಕಟ್ಟುವ ಆಲೋಚನೆ ಮಾಡಿದ್ದಾರೆ ಅನ್ನೋ ಸದ್ದು ತೀವ್ರಗೊಂಡಿದೆ. ಈ ಕುರಿತಾಗಿ ಮಾತನಾಡಿರುವ ಯತ್ನಾಳ್‌, ಪ್ರತಾಪ್ ಸಿಂಹ ಜೊತೆ ಸೇರಿ ಹೊಸ ಪಕ್ಷಕ್ಕೆ ನಾಂದಿ ಹಾಡ್ತೇನೆ ಎಂಬ ಹೇಳಿಕೆ ನೀಡಿದ್ರು. ಪ್ರತಾಪ್ ಸಿಂಹ ಸಹ ಲೋಕಸಭೆ ಚುನಾವಣೆಯಲ್ಲಿ ಪಕ್ಷದಿಂದ ಟಿಕೆಟ್ ವಂಚಿತರಾಗಿದ್ದು, ಈ ಕುರಿತಾಗಿ ಫೆಸ್‌ಬುಕ್‌ನಲ್ಲೂ ಪ್ರತಾಪ್‌ ಸಿಂಹ ಬೇಸರ ವ್ಯಕ್ತಪಡಿಸಿದ್ದರು. ಇಂತಹ ಸಮಯದಲ್ಲಿ ಯತ್ನಾಳ್‌ರ ಈ ಹೇಳಿಕೆಯಿಂದ ರಾಜ್ಯ ರಾಜಕಾರಣದಲ್ಲಿ ಹೊಸ ಅಲೆಗೆ ಕಾರಣವಾಗಿತ್ತು. ಹಾಗೂ ರಾಜ್ಯ ಬಿಜೆಪಿ ಇಬ್ಭಾಗವಾಗುತ್ತಾ ಎಂಬ ಮಾತುಗಳು ಸಹ ಕೇಳಿ ಬರ್ತಿವೆ. ಆದರೆ ಯತ್ನಾಳ್‌ರ ಈ ಹೇಳಿಕೆ ಬಗ್ಗೆ ಪ್ರತಿಕ್ರಿಯೆ ನೀಡಿರುವ ಪ್ರತಾಪ್ ಸಿಂಹ, ಈ ಎಲ್ಲಾ ಪ್ರಶ್ನೆಗಳಿಗೆ ಉತ್ತರ ನೀಡಿದ್ದಾರೆ.

ಮಾಜಿ ಸಂಸದ ಪ್ರತಾಪ್ ಸಿಂಹ ಜತೆ ಸೇರಿ ಹೊಸ ಪಕ್ಷ ಕಟ್ಟುತ್ತೇನೆ ಎಂದು ಯತ್ನಾಳ್ ಹೇಳಿದ್ದು, ಈ ವಿಚಾರವಾಗಿ ಮಾತನಾಡಿ ಪ್ರತಾಪ್ ಸಿಂಹ, ನನ್ನ ತಂದೆ ಜನಸಂಘದ ದೀಪದ ಚಿಹ್ನೆಯಿಂದ ಗೆದ್ದವರು. ಬಿಬಿ ಶಿವಪ್ಪ ಜತೆ ಇದ್ದವರು, ನಮ್ಮ ಕೌಟುಂಬಿಕ ನಿಷ್ಠೆ ಸಂಘಕ್ಕೆ, ಬಿಜೆಪಿಗೆ ಮಾತ್ರ. ನಾನು ಮೂಲತಃ ಪತ್ರಕರ್ತ, ಪಕ್ಷ ಬಿಟ್ಟು ಹೋಗಲ್ಲ. ನಾನು ಅಧಿಕಾರ ಇರಲಿ ಅಥವಾ ಇಲ್ಲದಿರಲಿ ಪಕ್ಷ ಬಿಡಲ್ಲ. ಯತ್ನಾಳ್ ಜತೆ ಸೇರಿ ಹೊಸ ಪಕ್ಷ ಕಟ್ಟೋ ಯೋಚನೆ ಇಲ್ಲ. ಬಿಜೆಪಿ ಪಕ್ಷದಲ್ಲೇ ಸಾಮಾನ್ಯ ಕಾರ್ಯಕರ್ತನಾಗಿರ್ತೇನೆ ಹಾಗೂ ಯತ್ನಾಳ್ ಅವರಿಗೂ ಇದನ್ನೇ ಹೇಳಿದ್ದೇನೆ ಎಂದು ಪ್ರತಾಪ್ ಸಿಂಹ ಸ್ಪಷ್ಟನೆ ನೀಡಿದ್ದಾರೆ. ಇದರಿಂದಾಗಿ ಯತ್ನಾಳ್‌ ಜೊತೆ ಕೈ ಜೋಡಿಸುವ ನಾಯಕರು ಯಾರು ಅನ್ನೋದು ಭಾರಿ ಕುತೂಹಲ ಕೆರಳಿಸಿದೆ.

Read Also : ಕನ್ನಡಿಗನ ಕಮಾಲ್‌, ಟೈಟಾನ್ಸ್‌ಗೆ ಆಘಾತ! : ಸತತ 4ನೇ ಗೆಲುವಿನೊಂದಿಗೆ ಘರ್ಜಿಸಿದ ಬೆಂಗಳೂರು ಬುಲ್ಸ್‌!

Exit mobile version