
ಪ್ರೊ ಕಬಡ್ಡಿಯಲ್ಲಿ ಬೆಂಗಳೂರಿನ ಗೂಳಿಗಳ ಸದ್ದು ಜೋರಾಗಿದೆ. ಕೋಚ್ ಬಿ.ಸಿ ರಮೇಶ್ ನೇತೃತ್ವದ ಯುವ ಆಟಗಾರರ ಬೆಂಗಳೂರು ಬುಲ್ಸ್ ಸತತ ನಾಲ್ಕನೇ ಪಂದ್ಯವನ್ನು ಗೆದ್ದು ಬೀಗಿದ್ದು, ಅದರಲ್ಲಿ ವೀರ ಕನ್ನಡಿಗ ಗಣೇಶ್ ಆಟಕ್ಕೆ ಎಲ್ಲರೂ ಫಿದಾ ಆಗಿದ್ದಾರೆ. ಮೊದಲಾವಧಿಯ ಆಟದಲ್ಲಿ ಉಭಯ ತಂಡಗಳು ಜಿದ್ದಾಜಿದ್ದಿನ ಆಟವನ್ನು ಪ್ರದರ್ಶಿಸಿದವು. ಈ ವೇಳೆ ಬುಲ್ಸ್ ಆರಂಭದಲ್ಲಿ ಅಂಕಗಳಿಕೆಯಲ್ಲಿ ಮುನ್ನಡೆ ಸಾಧಿಸಿದೆ. ಆದ್ರೆ 2ನೇ ಅವಧಿಯಲ್ಲಿ ಉಭಯ ತಂಡಗಳು ಸಮಬಲದಿಂದ ಅಬ್ಬರಿಸಿದ್ದು, ಕ್ಲೈಮ್ಯಾಕ್ಸ್ ಹಂತದಲ್ಲಿ ಟೈಟಾನ್ಸ್ ವಿರುದ್ಧ ವೀರ ಕನ್ನಡಿಗ ಗಣೇಶ್ ಮ್ಯಾಜಿಕ್ ರೆಡ್ ಮೂಲಕ ತಂಡದ ಗೆಲುವಿಗೆ ಸಾಕ್ಷಿಯದ್ರು. ಕೊನೆಯ ಕ್ಷಣದಲ್ಲಿ ಅಮೋಘ ಪ್ರದರ್ಶನ ನೀಡಿದ ಕನ್ನಡಿಗ ಗಣೇಶ ಹನಮಂತಗೋಲ್ ಅವರ ಭರ್ಜರಿ ರೈಡ್‌ನ ಪರಿಣಾಮ 12ನೇ ಆವೃತ್ತಿಯ ಪ್ರೋ ಕಬಡ್ಡಿ ಲೀಗ್‌ನ 34ನೇ ಪಂದ್ಯದಲ್ಲಿ ಬೆಂಗಳೂರು ಬುಲ್ಸ್, ತೆಲುಗು ಟೈಟಾನ್ಸ್ ತಂಡವನ್ನು ಮಣಿಸಿದೆ.
ಇನ್ನು ಕೊನೆಯ ಕ್ಷಣದವರೆಗೂ ರೋಚಕತೆ ಹುಟ್ಟಿಸಿದ್ದ ಪಂದ್ಯದಲ್ಲಿ ಬುಲ್ಸ್ ಭರ್ಜರಿ ಪ್ರದರ್ಶನ ನೀಡಿ ಜಯ ಸಾಧಿಸಿತು. ಈ ಮೂಲಕ ಬೆಂಗಳೂರು ಬುಲ್ಸ್ ಅಡಿದ 7 ಪಂದ್ಯಗಳಲ್ಲಿ 4 ಜಯ, 3 ಸೋಲು ಕಂಡಿದ್ದು, 8 ಅಂಕಗಳೊಂದಿಗೆ ಅಂಕ ಪಟ್ಟಿಯಲ್ಲಿ ನಾಲ್ಕನೇ ಭರ್ಜರಿ ಜಯ ದಾಖಲಿಸಿದೆ. ಇನ್ನು ಕೋಚ್ ಬಿ.ಸಿ ರಮೇಶ್ ಮಾಸ್ಟರ್ ಪ್ಲಾನ್‌ನಿಂದ ಯುವ ಆಟಗಾರರನ್ನೇ ಹೊಂದಿರುವ ಬುಲ್ಸ್ ತಂಡ ಪ್ರೋ ಕಬಡ್ಡಿಯಲ್ಲಿ ಹೊಸ ದಾಖಲೆ ಬರೆಯಲು ಸಿದ್ಧವಾಗಿದ್ದು, ಅದರಲ್ಲಿ ಕನ್ನಡಿಗರಾದ ಗಣೇಶ್ ಹನಮಂತಗೋಲ್, ಸತ್ಯಪ್ಪ ಮಟ್ಟಿ ಹಾಗೂ ಗಗನ್ ಗೌಡ ತಂಡದ ಸ್ಟಾರ್ ಆಟಗಾರಾಗಿ ಸತತ ಗೆಲುವಿಗೆ ಸಾಕ್ಷಿಯಾಗಿದ್ದಾರೆ.
Read Also : ಇಂದಿರಾ ಗಾಂಧಿ ತಂದ ಸೆಕ್ಯುಲರ್ ಪದವೇ ಕಾರಣ : ಪಿಐಎಲ್ ವಜಾ ಆಗಿದ್ದಕ್ಕೆ ಸಿಂಹ ಬೇಸರ