ನ್ಯಾಷನಲ್ ಸ್ಟಾರ್ ಯಶ್ ಹಾಗೂ ಸ್ಯಾಂಡಲ್‌ವುಡ್ ನಟಿ ದೀಪಿಕಾ ದಾಸ್ ಕುಟುಂಬದ ಮಧ್ಯೆ ಎಲ್ಲವೂ ಸರಿಯಿಲ್ಲ ಅನ್ನೋದು ಈಗ ಬಟಾಬಯಲಾಗಿದೆ. ಈವರೆಗೆ ಯಶ್, ದೀಪಿಕಾ, ಹಾಗೂ ಯಶ್ ತಾಯಿ ಈ ಕಾಂಟ್ರವರ್ಸಿಯನ್ನ ತಳ್ಳಿಕೊಂಡೇ ಬರ್ತಾ ಇದ್ರು. ಈ ಹಿಂದಿನ ಇಂಟರ್‌ವ್ಯೂವ್‌ಗಳಲ್ಲಿ ದೀಪಿಕಾ ದಾಸ್ ಆಗ್ಲಿ ಯಶ್ ತಾಯಿ ಆಗ್ಲಿ ಅವರ ಕುಟುಂಬಗಳ ನಡುವೆ ಇರುವ ಬಿರುಕಿನ ಬಗ್ಗೆ ಅಷ್ಟಾಗಿ ಮಾತಾಡಿರ್ಲಿಲ್ಲ. ಆದ್ರೆ ಇತ್ತೀಚೆಗೆ ನಡೆದ ಮಾಧ್ಯಮದ ಸಂದರ್ಶನವೊಂದ್ರಲ್ಲಿ ಪುಷ್ಪಮ್ಮ ಫುಲ್ ಫೈರ್ ಆಗಿದ್ದಾರೆ. ಇದಿಕ್ಕೆ ಕಾರಣ ಏನು? ದೀಪಿಕಾ ದಾಸ್ ರಿಯಾಕ್ಷನ್ ಹೇಗಿತ್ತು? ಇವೆಲ್ಲವನ್ನೂ ಹೇಳ್ತೀವಿ ಅದಕ್ಕೂ ಮೊದ್ಲು ಬಾಸ್ ಟಿವಿ ಕನ್ನಡ ಚಾನಲ್‌ನ ಸಬ್‌ಸ್ಕ್ರೈಬ್ ಮಾಡಿ.

ಕನ್ನಡದ ಕಿರುತೆರೆ ನಟಿ ದೀಪಿಕಾ ದಾಸ್.. ನಾಗಿಣಿ ಸೀರಿಯಲ್ ಮೂಲಕ ಮನೆ ಮಾತಾಗಿ ಬಿಗ್‌ಬಾಸ್ ಮೂಲಕ ಪಡ್ಡೆ ಹುಡುಗರ ಕ್ರಶ್ ಆಗಿ ಸದ್ಯಕ್ಕೆ ಉದ್ಯಮಿಯೊಬ್ರನ್ನ ಮದುವೆ ಆಗಿ ತಮ್ಮ ಸಿನಿಮಾ ಹಾಗೂ ಪರ್ಸನಲ್ ಲೈಫ್ ಎರಡಲ್ಲೂ ಸಕ್ಸಸ್ ಕಂಡಿದ್ದಾರೆ. ಆದ್ರೆ ಈವರೆಗೂ ಎಲ್ಲಿಯೂ ಕೂಡ ನಾನು ಯಶ್ ತಂಗಿ ಅಂತಾ ಹೇಳಿಕೊಂಡಿಲ್ಲ. ಯಾರೆಷ್ಟೇ ಪ್ರವೋಕ್ ಮಾಡಿದ್ರೂ ಯಶ್ ಕುಟುಂಬದ ವಿರುದ್ಧವಾಗಿ ಮಾತಾಡಿರ್ಲಿಲ್ಲ. ಆದ್ರೆ ಈಗ ಎರಡೂ ಫ್ಯಾಮಿಲಿಗಳ ನಡುವೆ ಇದ್ದ ಕೋಲ್ಡ್ ವಾರ್ ಕಾಡ್ಗಿಚ್ಚಿಂತೆ ಬ್ಲಾಸ್ಟ್ ಆಗಿದೆ. ಇದಿಕ್ಕೆ ಕಾರಣ ಯಶ್ ತಾಯಿ ನೀಡಿದ ಸ್ಟೇಟ್‌ಮೆಂಟ್..
ಇಂಟರ್‌ವ್ಯೂ ಒಂದ್ರಲ್ಲಿ ಆಂಕರ್ ಕೇಳಿದ ಪ್ರಶ್ನೆಗೆ ಪುಷ್ಪಮ್ಮ ಗರಂ ಆಗಿದ್ದಾರೆ. ಪುಷ್ಪ ಅವ್ರು ಇನ್ನೊಂದು ಸಿನಿಮಾ ಮಾಡಲು ಮುಂದಾಗಿದ್ದಾರೆ. ಅದ್ರ ಹೀರೋಯಿನ್ ದೀಪಿಕಾ ದಾಸ್ ಅಂತೆ.. ಹೌದಾ ಅಂತಾ ಆಂಕರ್ ಪ್ರಶ್ನೆ ಕೇಳಿದ್ದಾರೆ. ಇಷ್ಟಕ್ಕೇ ರೊಚ್ಚಿಗೆದ್ದ ಪುಷ್ಪಮ್ಮ, ಅವ್ರಿಗೂ ನಮಿಗೂ ಆಗೋದೇ ಇಲ್ಲ. ಅವ್ಳು ಯಾವ ದೊಡ್ ಹೀರೋಯಿನ್ ಅಂತಾ ಅವಳ ಜೊತೆ ಸಿನಿಮಾ ಮಾಡ್ಲಿ? ಯಾವ ಸಿನಿಮಾದಲ್ಲಿ ಸಾಧನೆ ಮಾಡಿದ್ದಾಳೆ? ಅವ್ರು ನಮ್ಗೆ ಸಂಬಂಧ ಆದ್ರೂ ದೂರದಲ್ಲೇ ಇಟ್ಟಿರ್ತೀವಿ. ಅವ್ರ ಬಗ್ಗೆ ಕೇಳಬೇಡಿ ನನ್ ಮಗ ನಂಗೆ ಬೈತಾನೆ ಎಂದಿದ್ದಾರೆ..
ಇನ್ನು, ಇದು ಇಲ್ಲಿಗೇ ಮುಗೀಲಿಲ್ಲ… ಇಷ್ಟು ದಿನ ಸೈಲೆಂಟ್ ಆಗಿದ್ದ ದೀಪಿಕಾ ದಾಸ್ ಈಗ ತಿರುಗಿಬಿದ್ದಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಪುಷ್ಪಮ್ಮನಿಗೆ ಸಖತ್ ಕ್ಲಾಸ್ ತೆಗೆದುೊಂಡಿದ್ದಾರೆ. ಹೊಸ ಕಲಾವಿದರನ್ನ ಬೆಳೆಸೋ ಜನರು ಕಲಾವಿದರಿಗೆ ಬೆಲೆ ಕೊಡೋದನ್ನ ಕಲಿತಿರಬೇಕು. ನಾನು ಯಾರ ಹೆಸರು ಹೇಳಿಕೊಂಡು ಮುಂದೆ ಬಂದಿಲ್ಲ. ಕೆಲವರಿಗೆ ಬೆಲೆ ಕೊಟ್ಟ ಮಾತ್ರಕ್ಕೆ ಭಯ ಇದೆ ಅಂತಾ ಅಲ್ಲ. ಅದು ಅಮ್ಮ ಆದ್ರೂ ಸರಿ, ದೊಡ್ಡಮ್ಮ ಆದ್ರೂ ಸರಿ ಪುಷ್ಪಮ್ಮ ಆದ್ರೂ ಸರಿ.. ನಾನು ದೊಡ್ಡ ನಟಿ ಅಲ್ಲದಿದ್ರೂ, ಸಾಧನೆ ಮಾಡದಿದ್ರೂ ನನ್ ಬಗ್ಗೆ ಹೀನಾಯವಾಗಿ ಮಾತಾಡೋ ಯೋಗ್ಯತೆ ಯಾರಿಗೂ ಇಲ್ಲ ಅಂತಾ ಪೋಸ್ಟ್ ಹಾಕಿದ್ದು, ಇದು ಸೋಷಿಯಲ್ ಮೀಡಿಯಾದಲ್ಲಿ ಭಾರಿ ಸೆನ್ಸೇಷನ್ ಸೃಷ್ಟಿಸಿದೆ..
ಇನ್ನು, ದೀಪಿಕಾ ದಾಸ್ ಪೋಸ್ಟ್ ಬಗ್ಗೆಯೂ ಪುಷ್ಪಮ್ಮ ರಿಯಾಕ್ಟ್ ಮಾಡಿದ್ದು, ಆಕೆ ಇನ್ನೂ ಚಿಕ್ಕ ಹುಡುಗಿ. ಹೀಗಾಗಿ ಈ ವಿಷ್ಯದ ಬಗ್ಗೆ ನಾನು ಈಗ್ಲೇ ರಿಯಾಕ್ಟ್ ಮಾಡೋದಿಲ್ಲ ಎಂದಿದ್ದಾರೆ. ಯಶ್ ತಾಯಿ ಹಾಗೂ ದೀಪಿಕಾ ದಾಸ್ ತಾಯಿ ಇಬ್ಬರು ಸ್ವಂತ ಅಕ್ಕ ತಂಗಿ.. ಚೀಟಿ ವ್ಯವಹಾರದ ವಿಷಯವಾಗಿ ಎರಡೂ ಫ್ಯಾಮಿಲಿಗಳ ಮಧ್ಯೆ ಬಿರುಕು ಮೂಡಿದ್ದು, ಅದು ಈವರೆಗೂ ಮುಂದುವರೆದಿದೆ ಅಂತಾ ಹೇಳಲಾಗ್ತಿದೆ. ಮುಂದೇನಾಗುತ್ತೋ ಕಾದು ನೋಡ್ಬೇಕು.
Read Also : ಸಿನಿಮಾ ಶ್ರೀವಲ್ಲಿಯ ಫಸ್ಟ್ ಹಾರರ್ ಮೂವೀ ಟೀಸರ್ ಔಟ್!