ದೀಪಾವಳಿಗೆ ಧಮಾಕ ಮಾಡಲು ಬರ್ತಿದೆ ರಶ್ಮಿಕಾ ಮಂದಣ್ಣ ಅಭಿನಯದ ಹಾರರ್-ಕಾಮಿಡಿ-ಥ್ರಿಲ್ಲರ್ ಜಾನರ್‌ನ ಥಮಾ. ಸ್ಯಾಂಡಲ್‌ವುಡ್ ಬೆಡಗಿ ಟಾಲಿವುಡ್ ಜಿಗಿದು ಪುಪ್ಪದಲ್ಲಿ ಶ್ರೀವಲ್ಲಿ ಮೂಲಕ ನ್ಯಾಷನಲ್ ಕ್ರಶ್ ಆಗಿ ಮಿಂಚಿ, ಬಾಲಿವುಡ್‌ನಲ್ಲಿ ಆನಿಮಲ್ ಮೂಲಕ ಹಿಟ್ ಹಿರೋಯಿನ್ ಆಗಿ, ಬಾಲಿವುಡ್‌ನಲ್ಲೂ ಹಿಟ್ ಸಿನಿಮಾಗಳನ್ನೆ ನೀಡಿರೋ ನಟಿ ಈಗ ಹಾರರ್ ಮೂವೀ ಮೂಲಕ ತೆರೆ ಮೇಲೆ ಬರಲು ಸಜ್ಜಾಗಿದ್ದಾರೆ. ರೋಮ್ಯಾಂಟಿಕ್ ಮೂವಿಗಳಲ್ಲಿ ಕಾಣಿಸಿಕೊಂಡ ಶ್ರೀವಲ್ಲಿ ಮೊದಲ ಬಾರಿಗೆ, ಹಾರರ್ ಸಿನಿಮಾದಲ್ಲಿ ಬಣ್ಣ ಹಚ್ಚಿದ್ದಾರೆ. ಥಮಾದಲ್ಲಿ ರಶ್ಮಿಕಾ ಮಂದಣ್ಣ, ಡಿಫರೆಂಟ್ ಲುಕ್ ಮೂಲಕ ಕಾಣಿಸಿಕೊಂಡಿದ್ದಾರೆ.
ಥಮ ಚಿತ್ರದ ಫಸ್ಟ್ ಲುಕ್ ಟೀಸರ್ ರಿಲೀಸ್ ಆಗಿದೆ. ಕೇವಲ ಸೌತ್‌ನಲ್ಲಷ್ಟೇ ಅಲ್ಲದೇ ಭಾರತೀಯ ಚಿತ್ರರಂಗದಲ್ಲಿ ನಟಿ ರಶ್ಮಿಕಾ ಮಂದಣ್ಣ ಗ್ಲಾಮರಸ್ ಪಾತ್ರಗಳ ಮೂಲಕ ಅಭಿಮಾನಿಗಳ ಮನಸ್ಸನ್ನ ಕದ್ದಿದ್ದಾರೆ. ಇದೀಗ `ಥಮ’ ಸಿನಿಮಾದ ಮೂಲಕ ಬೆಚ್ಚಿ ಬೀಳಿಸೋಕೆ ಹೊಸ ಪ್ರಯೋಗ ಮಾಡಿದ್ದಾರೆ.

ಇದೇ ವರ್ಷ ದೀಪಾವಳಿಗೆ ಸಿನಿಮಾ ತೆರೆಗೆ ಬರಲಿದ್ದು, ಸಿನಿಮಾದ ಟೀಸರ್ ರಿಲೀಸ್ ಆಗಿದೆ. ರಶ್ಮಿಕಾ ವಿಭಿನ್ನವಾಗಿ ಕಾಣಿಸಿಕೊಂಡಿರುವ ಈ ಸಿನಿಮಾದಲ್ಲಿ ಅತಿದೊಡ್ಡ ತಾರಾಗಣವಿದೆ. ಆಯುಷ್ಮಾನ್ ಖುರಾನಾ, ರಶ್ಮಿಕಾ ಮಂದಣ್ಣ, ಪರೇಶ್ ರಾವಲ್, ನವಾಜುದ್ದೀನ್ ಸಿದ್ದಿಕ್ ಸೇರಿದಂತೆ ಮುಂತಾದವರು ಚಿತ್ರದ ತಾರಾಗಣದಲ್ಲಿದ್ದಾರೆ.
ಪುಷ್ಪದಲ್ಲಿ ಶ್ರೀವಲ್ಲಿಯಾಗಿ ಮಿಂಚಿದ್ದ ರಶ್ಮಿಕಾ ಈಗ ತಾಡಾಕಾ ಅನ್ನೋ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದು, ತಮ್ಮ ವಿಭಿನ್ನ ಪ್ರಯತ್ನದಿಂದ ಮತ್ತಷ್ಟು ಗಮನ ಸೆಳೆಯುತ್ತಿದ್ದಾರೆ.
Read Also : ಕನ್ನಡಿಗರನ್ನ ಕೆಣಕಿ, ಹಗಲು ದರೋಡೆಗೆ ಇಳಿದ ‘ಕೂಲಿ’.. ತಮಿಳು ಕಣ್ಣಿಗೆ ಬೆಣ್ಣೆ, ಕನ್ನಡ ಕಣ್ಣಿಗೆ ಸುಣ್ಣ..!