ಕೆಜಿಎಫ್ನ ರಾಕಿ ಭಾಯ್ ಯಶ್ಗೆ(Yash)ಇಂದು ಹುಟ್ಟು ಹಬ್ಬದ ಸಂಭ್ರಮ.. ಯಶ್ ಬರ್ತ್ ಡೇ ದಿನದಂದೇ ಟಾಕ್ಸಿಕ್ ಟೀಂ ಭರ್ಜರಿ ಗಿಫ್ಟ್ ಕೊಟ್ಟಿದೆ. ಇಂದು ಬೆಳಗ್ಗೆ 10.25ಕ್ಕೆ ಟಾಕ್ಸಿಕ್(Toxic) ಗ್ಲಿಂಪ್ಸ್ ರಿಲೀಸ್ ಆಗಿದ್ದು, ಅಭಿಮಾನಿಗಳಿಗೆ ಹಬ್ಬದ ಖುಷಿ ಕೊಟ್ಟಿದೆ.. ಇನ್ನು ಇದಕ್ಕೂ ಮೊದಲು ಅಂದ್ರೆ ನಿನ್ನೆ ‘ಟಾಕ್ಸಿಕ್’ (Toxic)ಚಿತ್ರದ ಕಡೆಯಿಂದ ಅಪ್ಡೇಟ್ ಸಿಗಲಿದೆ ಅಂತಾ ನಿರ್ಮಾಣ ಸಂಸ್ಥೆ ‘ಕೆವಿಎನ್ ಪ್ರೊಡಕ್ಷನ್ಸ್’ ಅಪ್ಡೇಟ್ ಕೊಟ್ಟಿತ್ತು. ಯಶ್ ಜನ್ಮದಿನದಂದು ವಿಶೇಷ ಉಡುಗೊರೆ ಕೊಡೋದಾಗಿ ‘ಟಾಕ್ಸಿಕ್’(Toxic) ತಂಡವೂ ಘೋಷಣೆ ಮಾಡಿತ್ತು. ಪೋಸ್ಟರ್ ರಿಲೀಸ್ ಮಾಡುವ ಮೂಲಕ ಈ ಬಗ್ಗೆ ಮಾಹಿತಿ ನೀಡಲಾಗಿತ್ತು.. ಆದ್ರೀಗ ಇಂದು ಬೆಳಗ್ಗೆ ಅಂದುಕೊಂಡಂತೆ ಗ್ಲಿಂಪ್ಸ್ ರಿಲೀಸ್ ಆಗಿದೆ.. ಕ್ಯಾಬ್ರೆಯಲ್ಲಿ ಯಶ್ ಹುಡುಗಿಯರ ಜೊತೆ ಮಸ್ತಿ ಮಾಡುವ ದೃಶ್ಯಗಳು ಇದರಲ್ಲಿವೆ.. ಇದನ್ನೆಲ್ಲಾ ಕಣ್ತುಂಬಿಕೊಂಡಿರುವ ಯಶ್ ಅಭಿಮಾನಿಗಳು ಖುಷಿಯ ಅಲೆಯಲ್ಲಿ ತೇಲಾಡುತ್ತಿದ್ದಾರೆ…

ಇನ್ನು, ಟಾಕ್ಸಿಕ್ ಚಿತ್ರಕ್ಕೆ ಮಲಯಾಳಂ ನಿರ್ದೇಶಕಿ ಗೀತು ಮೋಹನ್ದಾಸ್ ನಿರ್ದೇಶನ ಮಾಡುತ್ತಿದ್ದಾರೆ. ಕೆವಿಎನ್ ಪ್ರೊಡಕ್ಷನ್ಸ್(KVN Productions) ಮೂಲಕ ವೆಂಕಟ್ ನಾರಾಯಣ್ ಈ ಚಿತ್ರ ನಿರ್ಮಾಣ ಮಾಡುತ್ತಿದ್ದಾರೆ. ಬಿಗ್ ಬಜೆಟ್ನಲ್ಲಿ ಮೂಡಿ ಬರುತ್ತಿರುವ ಈ ಸಿನಿಮಾದಲ್ಲಿ ಹಿಂದಿಯ ಕಿಯಾರಾ ಅಡ್ವಾಣಿ, ತಮಿಳಿನ ನಯನತಾರಾ ನಟಿಸುತ್ತಿದ್ದಾರೆ. ಈ ಸಿನಿಮಾ ವರ್ಷಾಂತ್ಯಕ್ಕೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ರಿಲೀಸ್ ಆಗಲಿದೆ.