

ರಾಕಿಂಗ್ ಸ್ಟಾರ್ ಯಶ್(Rocking star Yash) ಬರ್ತ್ಡೇಗೆ ಇನ್ನು ಒಂದೇ ದಿನ ಬಾಕಿ. ಈ ಹೊತ್ತಲ್ಲಿ ರಾಕಿಭಾಯ್ ಅಭಿಮಾನಿಗಳಿಗೆ ಕೊನೆಗೂ ಸಿಹಿ ಸುದ್ದಿ ಕೊಟ್ಟಿದ್ದಾರೆ. ರಾಕಿಂಗ್ ಸ್ಟಾರ್ ಯಶ್ ಜನವರಿ 8ಕ್ಕೆ ಬರ್ತ್ಡೇ ಆಚರಿಸಿಕೊಳ್ಳಲಿದ್ದಾರೆ. ಈ ಹಿನ್ನೆಲೆಯಲ್ಲಿ ಯಶ್ ಹುಟ್ಟು ಹಬ್ಬಕ್ಕೆ ಟಾಕ್ಸಿಕ್(Toxic) ಚಿತ್ರದ ಪೋಸ್ಟರ್(Poster)ರಿಲೀಸ್ ಆಗಲಿದೆ ಅನ್ನೋ ಮಾಹಿತಿ ಹೊರ ಬಿದ್ದಿದೆ.. ಟಾಕ್ಸಿಕ್ ಟೀಂ ಅಪ್ಡೇಟ್ ಬಗ್ಗೆ ಮಾಹಿತಿ ಕೊಟ್ಟ ಯಶ್, ಜನವರಿ 8ರಂದು 10.25ಕ್ಕೆ ಟಾಕ್ಸಿಕ್(Toxic) ಚಿತ್ರದ ನ್ಯೂ ಪೋಸ್ಟರ್ ಲಾಂಚ್ ಮಾಡೋದಾಗಿ ಹೇಳಿದ್ದಾರೆ. ಆಶ್ಚರ್ಯಗಳು ಬಾಗಿಲು ತಟ್ಟುವುದಿಲ್ಲ, ವಯಲೆಂಟ್ ಆಗಿ ರಿಲೀಸ್ ಆಗ್ತವೆ ಎಂದು ಕೆವಿಎನ್ ಪೋಸ್ಟ್ ಮಾಡಿದೆ. ವಿಂಟೇಜ್ ಕಾರ್, ಬಿಳಿ tuxedo ಜಾಕೆಟ್, ತಲೆ ಮೇಲೆ ಹ್ಯಾಟ್, ಬಾಯಲ್ಲಿ ಸಿಗಾರ್ ಇಟ್ಟುಕೊಂಡಿರುವ ಯಶ್ ಮ್ಯಾನರಿಸಂ ಬಗ್ಗೆ ಪೋಸ್ಟರ್ ಹೈಲೈಟ್ ಆಗಿದ್ದು, ಅಭಿಮಾನಿಗಳಲ್ಲಿ ಭಾರಿ ನಿರೀಕ್ಷೆ ಹುಟ್ಟು ಹಾಕಿದೆ… ಕಳೆದ ವರ್ಷ ಮುಹೂರ್ತ ಮಾಡಿ ಶೂಟಿಂಗ್ ಗೆ ಚಾಲನೆ ಕೊಟ್ಟಿದ್ದ ಟಾಕ್ಸಿಕ್ ಟೀಂ, ಇಷ್ಟು ದಿನ ಯಾವುದೇ ಸುಳಿವು ಬಿಟ್ಟು ಕೊಡದೆ ಅಧಿಕೃತವಾಗಿ ಯಶ್ ಹುಟ್ಟುಹಬ್ಬಕ್ಕೆ ಬಿಗ್ ಅಪ್ಡೇಟ್ ಕೊಡಲಿದೆ.. ಗೀತು ಮೋಹನ್ ದಾಸ್(Geetu Mohandas) ನಿರ್ದೇಶನ, ಕೆವಿಎನ್ ನಿರ್ಮಾಣದಲ್ಲಿ ಈ ಸಿನಿಮಾ ಮೂಡಿ ಬರುತ್ತಿದೆ..