ಮದ್ದೂರಿನಲ್ಲಿ ನಡೆದ ಕಲ್ಲು ತೂರಾಟ ಪ್ರಕರಣ ಈಗ ರಾಜಕೀಯ ತಿರುವು ಪಡೆದುಕೊಂಡಿದೆ. ಹೊತ್ತಿ ಉರಿಯುತ್ತಿರುವ ಮದ್ದೂರು ಗದ್ದಲಕ್ಕೆ ಶಾಸಕ ಸಂಗಮೇಶ್ ಹೇಳಿಕೆ ತುಪ್ಪ ಸುರಿದಂತಾಗಿದೆ. ಮುಂದಿನ ಜನ್ಮದಲ್ಲಿ ಮುಸ್ಮಿಂ ಆಗಿ ಹುಟ್ಟಬೇಕು ಅಂತಾ ಹೇಳಿಕೆ ನೀಡಿರೋ ಶಾಸಕ ಸಂಗಮೇಶ್ ಅವರಿಗೆ ಪ್ರತಿಪಕ್ಷ ನಾಯಕರು ಸಿಕ್ಕಾಪಟ್ಟೆ ಕೌಂಟರ್ ಕೊಡ್ತಿದ್ದಾರೆ. ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಶಾಸಕ ಸಂಗಮೇಶ್ ಹೇಳಿಕೆಗೆ, ಮುಂದಿನ ಜನ್ಮ ಯಾಕೆ ಈಗಲೇ ಹೋಗಿ ಹಾರ ಹಾಕಿ ಕಳಿಸ್ತೇವೆ ಅಂತಾ ತಿರುಗೇಟು ಕೊಟ್ಟಿದ್ರು.
ಈಗ ಶಾಸಕ ಸಂಗಮೇಶ್ ಹೇಳಿಕೆಗೆ ವಿಧಾನಪರಿಷತ್ ವಿಪಕ್ಷ ನಾಯಕ ಚಲುವಾದಿ ನಾರಾಯಣಸ್ವಾಮಿ ಕಿಡಿಕಾರಿದ್ದಾರೆ. ಮುಂದಿನ ಜನ್ಮ ಯಾಕೆ ವೇಟ್ ಮಾಡ್ತಿರಿ. ಈಗಲೇ ಹೋಗಿ ಮುಸ್ಲಿಂ ಆಗಿ.. ಅಂತಾ ಕೌಂಟರ್ ನೀಡಿದ್ದಾರೆ.
ಬೆಂಗಳೂರಿನಲ್ಲಿ ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣ ಸ್ವಾಮಿ ಸುದ್ದಿಗಾರರೊಂದಿಗೆ ಮಾತನಾಡಿ, ಮದ್ದೂರಿನಲ್ಲಿ ಸರ್ಕಾರದ ಓಲೈಕೆ ನೀತಿಯಿಂದ ಕಲ್ಲು ತೂರಾಟ ನಡೆದಿದೆ. ಸರ್ಕಾರ ಹಿಂದೂ ವಿರೋಧಿ ಆಗಿ ನಡೆದುಕೊಳ್ತಿದೆ. ಕಾಂಗ್ರೆಸ್ ತನ್ನ ಓಟ್ ಬ್ಯಾಂಕ್ ಹಿಡಿದಿಟ್ಟುಕೊಳ್ಳುವ ಸಲುವಾಗಿ ಹಿಂದೂಗಳಿಗೆ ತೊಂದರೆ ಮಾಡ್ತಿದೆ. ಸರ್ಕಾರ ಒಂದೇ ಕಡೆ ವಾಲಿದ್ದು, ಇಂಥ ಘಟನೆಗಳಿಗೆ ದಾರಿಯಾಗಿದೆ. ಕಿಡಿಗೇಡಿಗಳು ಕಲ್ಲು ತೂರಿದ್ದಾರೆ. ಗಣಪತಿ ಹಬ್ಬವನ್ನೂ ನಮ್ಮೂರಲ್ಲೇ ಮಾಡಲು ಬಿಡಲ್ಲ ಅಂದ್ರೆ ಹೇಗೆ, ಮದ್ದೂರು ಘಟನೆ ಆದ ಮೇಲೂ ಚಿತ್ರದುರ್ಗದಲ್ಲೂ ನಿರ್ಬಂಧ ಹಾಕಿದ್ದಾರೆ. ಕಾಂಗ್ರೆಸ್ ನ ಓಲೈಕೆ ರಾಜಕೀಯ ಎಲ್ಲಕ್ಕೂ ಕಾರಣ ಅಂತಾ ಆಕ್ರೋಶ ವ್ಯಕ್ತಪಡಿಸಿದರು.
ಬಿಕೆ ಸಂಗಮೇಶ್ ಹೇಳಿಕೆ ವಿಚಾರ
ಸಂಗಮೇಶ್ ಅವರು ಈ ಜನ್ಮದಲ್ಲಿ ಹಿಂದೂ ಆಗಿ ಹುಟ್ಟಿದ್ದಾರೆ. ಮೊದಲು ಹಿಂದೂ ಧರ್ಮದ ಋಣ ತೀರಿಸಲಿ. ಆ ಮೇಲೆ ಮುಸ್ಲಿಂ ಆಗಿ ಹುಟ್ಟೋ ಮಾತಾಡಲಿ. ಮುಂದಿನ ಜನ್ಮ ಯಾಕೆ ವೇಟ್ ಮಾಡ್ತಿರಿ. ಈ ಜನ್ಮದಲ್ಲೇ ಈಗಲೇ ಹೋಗಿ ಮುಸ್ಲಿಂ ಆಗಿ ಯಾರು ತಡೆದಿದ್ರು? ಅಂತಾ ಶಾಸಕ ಸಂಗಮೇಶ್ ಹೇಳಿಕೆಗೆ ತಿರುಗೇಟು ನೀಡಿದ್ದಾರೆ. ಇದೆಲ್ಲ ಅವರ ಓಲೈಕೆ, ದ್ವಂದ್ವ ಮಾತುಗಳಷ್ಟೇ, ಮುಸ್ಲಿಮರೇ ಅವರ ಮಾತು ನಂಬಲ್ಲ, ಅವರ ಮಾತಲ್ಲಿ ಸತ್ಯ ಇಲ್ಲ ಎಂದರು.
Read Also : ಮದ್ದೂರಿನಲ್ಲಿ ಕಲ್ಲು ತೂರಾಟ ನೋಡಿದರೆ ಹಿಂದೂಗಳಿಗೆ ಭದ್ರತೆ ಇಲ್ಲ : ಶೋಭಾ ಕರಂದ್ಲಾಜೆ

