Site icon BosstvKannada

ಮದ್ದೂರಿನಲ್ಲಿ ಕಲ್ಲು ತೂರಾಟ ನೋಡಿದರೆ ಹಿಂದೂಗಳಿಗೆ ಭದ್ರತೆ ಇಲ್ಲ : ಶೋಭಾ ಕರಂದ್ಲಾಜೆ

ಮದ್ದೂರು ಗಲಭೆ ವಿಚಾರವಾಗಿ ಮಾತನಾಡಿದ ಅವರು, ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಪೂರ್ಣ ಹದಗೆಟ್ಟಿದೆ. ಎಲ್ಲ ಜನರ ಮಾನ ಪ್ರಾಣ ಕಾಪಾಡಬೇಕಿದ್ದ ಸರ್ಕಾರ ಏಕ ಪ್ರಕಾರವಾಗಿ ನಡೆಯುತ್ತಿದೆ. ಮದ್ದೂರಿನಲ್ಲಿ ಕಲ್ಲು ತೂರಾಟ ನಡೆಸಿದವರನ್ನು ಕೂಡಲೇ ಬಂಧಿಸಿಬೇಕು ಎಂದು ಆಗ್ರಹಿಸಿದರು.

ಕಳೆದ ವರ್ಷ ಗಣೇಶ ಉತ್ಸವದಲ್ಲಿ ಹಲವು ಗಲಭೆ ನಡೆದಿದ್ದವು. ಈ ಹಿನ್ನಲೆ ಈ ವರ್ಷ ಮುಕ್ತವಾಗಿ ಹಬ್ಬ ಆಚರಿಸಲು ಅವಕಾಶ ಕೇಳಿದ್ದೇವು. ಅದಾಗ್ಯೂ ಸರ್ಕಾರ ಸಾಕಷ್ಟು ನಿರ್ಬಂಧಗಳನ್ನು ವಿಧಿಸಿತ್ತು. ಮದ್ದೂರಿನಲ್ಲಿ ಕಲ್ಲು ತೂರಾಟ ಆಗಿರುವುದು ನೋಡಿದರೆ ಹಿಂದೂಗಳಿಗೆ ಭದ್ರತೆ ಇಲ್ಲದಂತಾಗಿದೆ ಎಂದು ಕಿಡಿಕಾರಿದರು.

ಗಣೇಶ ಮೆರವಣಿಗೆ ಎಲ್ಲಿ ಹೋಗಬೇಕು ಎಂದು ಪೊಲೀಸರು ನಿರ್ಧಾರ ಮಾಡುತ್ತಾರೆ. ಅವರೇ ನಿರ್ಧಾರ ಮಾಡಿದ ಮೇಲೆ ಗಲಭೆ ಹೇಗೆ ಆಯ್ತು? ಮಸೀದಿಯಲ್ಲಿ ಅಷ್ಟು ದೊಡ್ಡ ಪ್ರಮಾಣದ ಕಲ್ಲು ಸಂಗ್ರಹಕ್ಕೆ ಅವಕಾಶ ಹೇಗೆ ಸಿಕ್ತು? ಕಲ್ಲು ತೂರಾಟ ಮಾಡಿದವರನ್ನು ಕೂಡಲೇ ಬಂಧಿಸಬೇಕಿತ್ತು ಯಾಕೆ ಈವರೆಗೂ ಬಂಧಿಸಿಲ್ಲ ಎಂದು ಪ್ರಶ್ನಿಸಿದರು.

Read Also : ಮದ್ದೂರಿನಲ್ಲಿ ಕಲ್ಲು ತೂರಾಟ ನೋಡಿದರೆ ಹಿಂದೂಗಳಿಗೆ ಭದ್ರತೆ ಇಲ್ಲ : ಶೋಭಾ ಕರಂದ್ಲಾಜೆ

Exit mobile version