Site icon BosstvKannada

War 2 Teaser Out : ಬಾಲಿವುಡ್‌ನಲ್ಲಿ Jr. NTR ಖಡಕ್ ಎಂಟ್ರಿ.. ‘ವಾರ್ 2’ ಟೀಸರ್‌ ರಿಲೀಸ್‌..!

Jr. NTR

ತೆಲುಗಿನ ಸ್ಟಾರ್ ನಟ ಜ್ಯೂ.ಎನ್‌ಟಿಆರ್ (Jr. NTR) ಇಂದು ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ಅವರ ಹುಟ್ಟುಹಬ್ಬದ ಪ್ರಯುಕ್ತ ಬಹು ನಿರೀಕ್ಷಿತ ಬಿಗ್ ಬಜೆಟ್ ಆ್ಯಕ್ಷನ್ ಚಿತ್ರ ‘ವಾರ್ 2’ (War 2) ಟೀಸರ್ ಬಿಡುಗಡೆಗೊಂಡಿದೆ. ಯಶ್ ರಾಜ್ ಫಿಲ್ಮ್ಸ್ ಬ್ಯಾನರ್‌ನಲ್ಲಿ ನಿರ್ಮಾಣವಾಗುತ್ತಿರುವ ಈ ಚಿತ್ರದಲ್ಲಿ, ಜ್ಯೂ.ಎನ್‌ಟಿಆರ್ ಖಡಕ್ ವಿಲನ್ ಪಾತ್ರದಲ್ಲಿ ಬಾಲಿವುಡ್‌ಗೆ ಭರ್ಜರಿ ಎಂಟ್ರಿ ಕೊಟ್ಟಿದ್ದಾರೆ.

ಟೀಸರ್‌ನಲ್ಲಿ ಹೃತಿಕ್ ರೋಷನ್ (Hrithik Roshan) ಅವರನ್ನು ತೀವ್ರ ಪೈಪೋಟಿಗೆ ಎಳೆದ ತಾರಕ್, ಡೈಲಾಗ್ ಡೆಲಿವರಿ ಹಾಗೂ ಆ್ಯಕ್ಷನ್ ಲುಕ್‌ನಿಂದ ಅಭಿಮಾನಿಗಳ ಮನಗೆದ್ದಿದ್ದಾರೆ. ಸಖತ್‌ ಡೈಲಾಗ್‌ನಿಂದ ತಾರಕ್ ಎಂಟ್ರಿ ನೀಡಿದ್ದು, ಫ್ಯಾನ್ಸ್‌ ಖುಷ್‌ ಆಗದ್ದಾರೆ.

Also Read: Heavy Rain in Udupi :ಉಡುಪಿಯಲ್ಲಿ ಭಾರೀ ಮಳೆ – ಅಂಗಡಿಗಳಿಗೆ ನುಗ್ಗಿದ ಕೆಸರು ನೀರು

ಹೃತಿಕ್ ಮತ್ತು ಜ್ಯೂ.ಎನ್‌ಟಿಆರ್ ನಡುವೆ ಬೋಲ್‌ಡ್ ಆ್ಯಕ್ಷನ್ ಜುಗಲ್‌ಬಂದಿ ಗಮನ ಸೆಳೆಯುವಂತೆ ಮೂಡಿಬಂದಿದೆ. ಶೂಟಿಂಗ್ ದೃಶ್ಯಗಳು, ಹೈ ಓಕ್ಟೇನ್ ಸ್ಟಂಟ್ ಸೀಕ್ವೆನ್ಸ್‌ಗಳು ಹಾಗೂ ಥ್ರಿಲ್ಲಿಂಗ್ ಬಿಲ್ಡ್-ಅಪ್ ಟೀಸರ್‌ನಲ್ಲಿಯೇ ಸ್ಫೋಟಗೊಂಡಿವೆ. ಇದರಿಂದಾಗಿ ಚಿತ್ರಕ್ಕೆ ಅಭಿಮಾನಿಗಳಿಂದ ಭರ್ಜರಿ ರೆಸ್ಪಾನ್ಸ್‌ ಸಿಕ್ಕಿದೆ.

ಈ ಚಿತ್ರದಲ್ಲಿ ಕಿಯಾರಾ ಅಡ್ವಾಣಿ (Kiara Advani) ನಾಯಕಿಯಾಗಿ ಮಿಂಚಿದ್ದು, ರಾ ಏಜೆಂಟ್ ಪಾತ್ರದಲ್ಲಿ ಹೃತಿಕ್ ಅವರೊಂದಿಗೆ ಜೋಡಿಯಾಗಿದ್ದಾರೆ.. War 2 ಸಿನಿಮಾ ಶೂಟಿಂಗ್ 150 ದಿನಗಳ ಕಾಲ 6 ದೇಶಗಳಲ್ಲಿ ನಡೆಯಿದ್ದು, ತಾಂತ್ರಿಕವಾಗಿ ಶ್ರೀಮಂತ ಹಾಗೂ ಭವ್ಯ ಚಿತ್ರೀಕರಣ ಹೊಂದಿದೆ. ಈ ಬೃಹತ್ ಪ್ರಾಜೆಕ್ಟ್‌ ಅನ್ನು ಬ್ರಹ್ಮಾಸ್ತ್ರ ಖ್ಯಾತಿಯ ನಿರ್ದೇಶಕ ಅಯಾನ್ ಮುಖರ್ಜಿ ನಿರ್ದೇಶಿಸುತ್ತಿದ್ದು, ಸಿನಿಮಾ ಪ್ರತಿ ಹಂತದಲ್ಲೂ ಭಾರೀ ನಿರೀಕ್ಷೆ ಹುಟ್ಟಿಸಿದೆ.

War 2 ಸಿನಿಮಾ ಆಗಸ್ಟ್ 14, 2025ರಂದು ತೆಲುಗು, ತಮಿಳು ಮತ್ತು ಹಿಂದಿ ಭಾಷೆಗಳಲ್ಲಿ ವಿಶ್ವದಾದ್ಯಾಂತ ರಿಲೀಸ್ ಆಗಲಿದೆ.

Exit mobile version