ಕಾಲಿವುಡ್ ನಟ ವಿಶಾಲ್ (Vishal) ಫ್ಯಾನ್ಸ್‌ಗೆ ಗುಡ್ ನ್ಯೂಸ್ ಕೊಟ್ಟಿದ್ದಾರೆ. ‘ಯೋಗಿದ’ ಚಿತ್ರದ ನಟಿ ಸಾಯಿ ಧನ್ಶಿಕಾ (Sai Dhanshika) ಜೊತೆ ಹಸೆಮಣೆ (Wedding) ಏರಲು ಸಜ್ಜಾಗಿದ್ದಾರೆ. ಈ ಮದುವೆ ಬಗ್ಗೆ ಅಧಿಕೃತವಾಗಿ ಧನ್ಶಿಕಾ, ವಿಶಾಲ್ ಇಬ್ಬರೂ ಅನೌನ್ಸ್ ಮಾಡಿದ್ದಾರೆ. ಆಗಸ್ಟ್‌ನಲ್ಲಿ ಮದುವೆ ಆಗೋದಾಗಿ ಸಿಹಿಸುದ್ದಿ ಕೊಟ್ಟಿದ್ದಾರೆ. ಈ ಬಗ್ಗೆ ಇಬ್ಬರೂ ಮಾಹಿತಿಯನ್ನ ಘೋಷಣೆ ಮಾಡಿದ್ದು, ಇದೇ ಆಗಸ್ಟ್ 29, 2025ರಂದು ಹಸೆಮಣೆ ಏರಲಿದ್ದಾರೆ.
ಚೆನ್ನೈನಲ್ಲಿ ನಡೆದ ‘ಯೋಗಿದ’ ಚಿತ್ರದ ಪ್ರೆಸ್ ಮೀಟ್‌ನಲ್ಲಿ ಮಾತನಾಡಿದ ವಿಶಾಲ್, “ನಾನು ಧನ್ಶಿಕಾ ಜೊತೆ ಮದುವೆಯಾಗುತ್ತಿರುವುದು ನಿಶ್ಚಿತ. ಅವರ ತಂದೆಯವರ ಆಶೀರ್ವಾದವೂ ನಮಗೆ ಇದೆ. ಅವರು ಮದುವೆಯ ನಂತರವೂ ನಟನೆಯ ಕ್ಷೇತ್ರದಲ್ಲಿ ಮುಂದುವರಿಯಲಿದ್ದಾರೆ,” ಎಂದು ಅಭಿಮಾನಿಗಳೊಂದಿಗೆ ಸಿಹಿ ಸುದ್ದಿ ಹಂಚಿಕೊಂಡರು.

ಧನ್ಶಿಕಾ ಕೂಡ ಈ ವಿಷಯದ ಬಗ್ಗೆ ಸ್ಪಷ್ಟಪಡಿಸಿ, “ನಾವು ಮದುವೆಯ ವಿಷಯವನ್ನು ಇನ್ನೂ ಕೆಲವು ದಿನ ರಹಸ್ಯವಾಗಿಡಲು ಇಚ್ಛಿಸಿದ್ದೆವು. ಆದರೆ ಸೋಶಿಯಲ್ ಮೀಡಿಯಾದಲ್ಲಿ ಬೆಳಗ್ಗೆಯಿಂದಲೇ ಸುದ್ದಿ ವೈರಲ್ ಆಗುತ್ತಿರುವ ಹಿನ್ನೆಲೆಯಲ್ಲಿ ಈಗಲೇ ಅಧಿಕೃತ ಘೋಷಣೆ ಮಾಡಬೇಕಾಯಿತು,” ಎಂದಿದ್ದಾರೆ.
Also Read: Gold Smuggling Case : ಗೋಲ್ಡ್ ಸ್ಮಗ್ಲಿಂಗ್ ಪ್ರಕರಣ: ನಟಿ ರನ್ಯಾ ರಾವ್‌ಗೆ ಷರತ್ತುಬದ್ಧ ಜಾಮೀನು
“ನಮ್ಮ ಸ್ನೇಹಕ್ಕೆ ಈಗ 15 ವರ್ಷಗಳ ಇತಿಹಾಸವಿದೆ. ನಾವು ಆಗಸ್ಟ್ 15ರಂದು ನಡಿಗರ್ ಸಂಘದ ಕಟ್ಟಡದ ಉದ್ಘಾಟನೆಗೆ ಸಿದ್ಧತೆ ಮಾಡಿದ್ದೇವೆ. ಅದಾದ ನಂತರ ಆಗಸ್ಟ್ 29ರಂದು ನಮ್ಮ ಮದುವೆ ನಡೆಯಲಿದೆ.”
ಚಿತ್ರರಂಗದ ನಡುವೆಯೇ ಬೆಳೆದ ಬಾಂಧವ್ಯ:
ವಿಶಾಲ್ ಮತ್ತು ಧನ್ಶಿಕಾಗೆ ಚಿತ್ರದ ಮೂಲಕ ಪರಿಚಯವಾಗಿದ್ದು, ಈ ಬಾಂಧವ್ಯ ಹತ್ತಿರದ ಸ್ನೇಹವಾಗಿ ಬೆಳೆದಿದೆ. 15 ವರ್ಷಗಳ ಸ್ನೇಹ ಇದೀಗ ವೈವಾಹಿಕ ಜೀವನಕ್ಕೆ ದಾರಿ ಮಾಡಿಕೊಟ್ಟಿದ್ದು, ಈ ಜೋಡಿಗೆ ಚಿತ್ರರಂಗದಿಂದ ಹಾಗೂ ಅಭಿಮಾನಿಗಳಿಂದ ಭರಪೂರ ಶುಭಾಶಯಗಳು ಹರಿದುಬರುತ್ತಿವೆ.