Site icon BosstvKannada

Gold Smuggling Case : ಗೋಲ್ಡ್ ಸ್ಮಗ್ಲಿಂಗ್ ಪ್ರಕರಣ: ನಟಿ ರನ್ಯಾ ರಾವ್‌ಗೆ ಷರತ್ತುಬದ್ಧ ಜಾಮೀನು

Gold Smuggling Case

ಗೋಲ್ಡ್ ಸ್ಮಗ್ಲಿಂಗ್ ಪ್ರಕರಣದಲ್ಲಿ (Gold Smuggling Case) ಬಂಧನಕ್ಕೆ ಒಳಗಾಗಿದ್ದ ನಟಿ ರನ್ಯಾರಾವ್‌ಗೆ (Ranya Rao) ಸದ್ಯ ಷರತ್ತು ಬದ್ಧ ಜಾಮೀನು ನೀಡಲಾಗಿದೆ. 12 ಕೋಟಿ ರೂಪಾಯಿ ಮೌಲ್ಯದ ಚಿನ್ನವನ್ನು ದುಬೈನಿಂದ ಭಾರತಕ್ಕೆ ಕಳ್ಳಸಾಗಣೆ ಮಾಡಿದ ಆರೋಪಕ್ಕೆ ಸಂಬಂಧಿಸಿದಂತೆ ಬಂಧಿತ ನಟಿ ರನ್ಯಾ ರಾವ್ ಹಾಗೂ ಪ್ರಕರಣದ 2ನೇ ಆರೋಪಿ ತರುಣ್ ಕೊಂಡರಾಜು ಅವರಿಗೆ ಆರ್ಥಿಕ ವ್ಯವಹಾರಗಳ ವಿಶೇಷ ನ್ಯಾಯಾಲಯ ಷರತ್ತುಬದ್ಧ ಜಾಮೀನು ಮಂಜೂರು ಮಾಡಿದೆ.

ಡೈರೆಕ್ಟರೇಟ್ ಆಫ್ ರೆವೆನ್ಯೂ ಇಂಟೆಲಿಜೆನ್ಸ್ (DRI) ಅಧಿಕಾರಿಗಳು 60 ದಿನಗಳೊಳಗಾಗಿ ದೋಷಾರೋಪ ಪಟ್ಟಿ (chargesheet) ಸಲ್ಲಿಸದ ಹಿನ್ನೆಲೆ, ಇಬ್ಬರು ಆರೋಪಿಗಳು ಜಾಮೀನಿಗಾಗಿ ಅರ್ಜಿ ಸಲ್ಲಿಸಿದ್ದರು. ವಿಚಾರಣೆ ನಡೆಸಿದ ಆರ್ಥಿಕ ಅಪರಾಧಗಳ ನ್ಯಾಯಾಲಯ, ಆರೋಪಿಗಳ ವಾದ ಪರಿಶೀಲಿಸಿ ಜಾಮೀನು ಮಂಜೂರು ಮಾಡಿದೆ.

ರನ್ಯಾ ರಾವ್ ಪರ ವಾದ ಮಂಡಿಸಿದ ವಕೀಲ ಗಿರೀಶ್, ತನಿಖಾ ಸಂಸ್ಥೆ 60 ದಿನದೊಳಗೆ ಚಾರ್ಜ್‌ಶೀಟ್ ಸಲ್ಲಿಸಲು ವಿಫಲವಾಗಿದೆ ಎಂಬ ಅಂಶವನ್ನು ತೀವ್ರವಾಗಿ ಒತ್ತಿ ಹೇಳಿದರು.

ಪ್ರಕರಣದ ಹಿನ್ನೆಲೆ:
2024ರ ಕೊನೆಯ ತಿಂಗಳಲ್ಲಿ ನಟಿ ರನ್ಯಾ ರಾವ್ ಹಾಗೂ ತರುಣ್ ಕೊಂಡರಾಜು 14 ಕೆ.ಜಿ ಚಿನ್ನವನ್ನು ದುಬೈನಿಂದ ಬೆಂಗಳೂರು ವಿಮಾನ ನಿಲ್ದಾಣಕ್ಕೆ ಕಳ್ಳಸಾಗಣೆ ಮಾಡಿದ ಆರೋಪದಲ್ಲಿ ಬಂಧಿತರಾಗಿದ್ದರು. ಇದರ ಮೌಲ್ಯ ಸುಮಾರು ₹12 ಕೋಟಿ ಎಂದು ಅಂದಾಜಿಸಲಾಗಿದೆ.

ಇನ್ನು ಈ ಹಿಂದೆ ಅವರು ಸಲ್ಲಿಸಿದ ಜಾಮೀನು ಅರ್ಜಿ ಹೈಕೋರ್ಟ್ ಮತ್ತು ಮ್ಯಾಜಿಸ್ಟ್ರೇಟ್ ನ್ಯಾಯಾಲಯಗಳಲ್ಲಿ ತಿರಸ್ಕೃತವಾಗಿತ್ತು.

Also Read: War 2 Teaser Out : ಬಾಲಿವುಡ್‌ನಲ್ಲಿ Jr. NTR ಖಡಕ್ ಎಂಟ್ರಿ.. ‘ವಾರ್ 2’ ಟೀಸರ್‌ ರಿಲೀಸ್‌..!

ಜಾಮೀನು ಷರತ್ತುಗಳು:

Exit mobile version