2025ರ ಐಪಿಎಲ್ನ ಅಂತಿಮ ಲೀಗ್ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಹೊಸ ಇತಿಹಾಸ ಬರೆದಿದೆ. ಬರೋಬ್ಬರಿ 228 ರನ್ಗಳನ್ನು ಚೇಸ್ ಮಾಡುವ ಮೂಲಕ ಲಕ್ನೋ ಸೂಪರ್ ಜೆಂಟ್ಸ್ ವಿರುದ್ಧ ರೋಚಕ ವಾದ ಗೆಲವು ಪಡೆದಿದೆ. ಈ ಮಹತ್ವದ ಪಂದ್ಯದಲ್ಲಿ virat kohli ವರ್ಲ್ಡ್ ರೆಕಾರ್ಡ್ ಮಾಡಿದ್ದಾರೆ.
ಆರ್ಸಿಬಿಯ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ 2025ರ ಐಪಿಎಲ್ ಟ್ರೋಫಿಯಲ್ಲಿ ಅತ್ಯುತ್ತಮ ಪರ್ಫಾಮೆನ್ಸ್ನಲ್ಲಿ ಬ್ಯಾಟ್ ಬೀಸಿ ಒಂದೇ ಪಂದ್ಯದಲ್ಲಿ ಎರಡು ವಿಶ್ವದಾಖಲೆಗಳನ್ನು ಬರೆದರು. ಐಪಿಎಲ್ನ ಒಂದು ಫ್ರಾಂಚೈಸಿ ಅಂದರೆ ಆರ್‌ಸಿಬಿ ಪರವಾಗಿ 9,000 ರನ್ ಗಳಿಸಲು ಇನ್ನು 24 ರನ್‌ಗಳು ಬಾಕಿ ಇದ್ದವು. virat kohli, ಲಕ್ನೋ ಜೊತೆಗಿನ ಪಂದ್ಯದಲ್ಲಿ 54 ರನ್ಗಳಿಸೋ ಮೂಲಕ ವರ್ಲ್ಡ್ ರೆಕಾರ್ಡ್ ಮಾಡಿದರು.
ಐಪಿಎಲ್‌ನಲ್ಲಿ 2008ರಿಂದಲೂ virat kohli, ಆರ್‌ಸಿಬಿ ತಂಡದಲ್ಲಿ ಮಾತ್ರ ಬ್ಯಾಟ್ ಬೀಸಿದ್ದು, ಇದುವರೆಗಿನ 18 ಸೀಸನ್ಗಳ 270 ಇನ್ನಿಂಗ್ಸ್ಗಳಲ್ಲಿ ಒಟ್ಟು 9,030 ರನ್ ಗಳಿಸಿದಂತೆ ಆಗಿದೆ. ಈ 270 ಇನ್ನಿಂಗ್ಸ್ನಲ್ಲಿ 14 ಪಂದ್ಯಗಳಿಂದ 424 ರನ್‌ಗಳು ಚಾಂಪಿಯನ್ಸ್ ಲೀಗ್ ನದ್ದು ಆಗಿವೆ. ಚಾಂಪಿಯನ್ಸ್ ಲೀಗ್ನಲ್ಲಿ ವಿರಾಟ್ ಕೊಹ್ಲಿ ಬ್ಯಾಟಿಂಗ್ನಲ್ಲಿ ಪರಾಕ್ರಮ ಮೆರೆದಿದ್ದರು. ಆದರೆ ಇದು ಈಗ ಸ್ಥಗಿತ ಮಾಡಲಾಗಿದೆ. ಒಂದು ಫ್ರಾಂಚೈಸಿ ಪರ ಇಷ್ಟೊಂದು ರನ್ ಗಳಿಸಿರೋದು ನಿಜಕ್ಕೂ ಐಪಿಎಲ್ ಇತಿಹಾಸದಲ್ಲಿ ದೊಡ್ಡ ಸಾಧನೆಯೇ ಸರಿ.
Also Read: ಮುಂದಿನ 5 ದಿನ ರಾಜ್ಯದಲ್ಲಿ ವರುಣಾರ್ಭಟ.. ಈ 7 ಜಿಲ್ಲೆಗಳಲ್ಲಿ ರೆಡ್ ಅಲರ್ಟ್..!
ಕೊಹ್ಲಿಯ ಮತ್ತೊಂದು ರೆಕಾರ್ಡ್ ಎಂದರೆ.. ಐಪಿಎಲ್ ಇತಿಹಾಸದಲ್ಲಿ ಅತಿ ಹೆಚ್ಚು ಅರ್ಧಶತಕ ಗಳಿಸಿದ ಬ್ಯಾಟರ್ ಎನ್ನುವ ಖ್ಯಾತಿಗೆ ಕಿಂಗ್ ಕೊಹ್ಲಿ ಪಾತ್ರರಾಗಿದ್ದಾರೆ. ಆಸ್ಟ್ರೇಲಿಯಾದ ಮಾಜಿ ಬ್ಯಾಟರ್ ಡೇವಿಡ್ ವಾರ್ನರ್ ಅವರ ದಾಖಲೆಯನ್ನು ಬ್ರೇಕ್ ಮಾಡಲು ಕೇವಲ ಒಂದೇ ಒಂದು ಅರ್ಧಶತಕ ಅಗತ್ಯವಿತ್ತು. ಲಕ್ನೋ ತಂಡದ ವಿರುದ್ಧ 54 ರನ್ ಬಾರಿಸುತ್ತಿದ್ದಂತೆ ಕೊಹ್ಲಿ ಒಟ್ಟು 63 ಬಾರಿ ಫಿಫ್ಟಿ ಪ್ಲಸ್ ರನ್ಗಳನ್ನು ಬಾರಿಸಿದಂತೆ ಆಗಿದೆ. ಇದರಿಂದ ಕೊಹ್ಲಿ 63 ಬಾರಿ ಫಿಫ್ಟಿ ಪ್ಲಸ್ ರನ್ ಬಾರಿಸಿ ಆಸ್ಟ್ರೇಲಿಯಾದ ಪ್ಲೇಯರ್ ಡೇವಿಡ್ ವಾರ್ನರ್ ದಾಖಲೆಯನ್ನು ಮುರಿದಿದ್ದಾರೆ.

