Site icon BosstvKannada

US airstrikes on Iran : ಅಮೆರಿಕಕ್ಕೆ ಖಡಕ್‌ ಎಚ್ಚರಿಕೆ ನೀಡಿದ ಖಮೇನಿ!

ಅಮೆರಿಕ ಇರಾನ್‌ ಮೇಲೆ ಭೀಕರ ದಾಳಿ (US airstrikes on Iran) ಮಾಡಿದೆ. ಈ ದಾಳಿ ಬಳಿಕ ಅಮೆರಿಕಕ್ಕೆ ಇರಾನ್‌ ಎಚ್ಚರಿಕೆ ಸಂದೇಶ ನೀಡಿದೆ. ನೀವು ಪ್ರಾರಂಭಿಸಿದ್ದೀರಿ, ಅದನ್ನು ನಾವು ಕೊನೆಗೊಳಿಸುತ್ತೇವೆ ಅಂತಾ ಖಡಕ್‌ ಸಂದೇಶ ರವಾನೆ ಮಾಡಿದೆ. ತನ್ನ ಅಣ್ವಸ್ತ್ರ ಕೇಂದ್ರಗಳ ಮೇಲೆ ಅಮೆರಿಕಾ ದಾಳಿ ಮಾಡಿ, ಖಡಕ್ ಎಚ್ಚರಿಕೆ ನೀಡಿದ ಬಳಿಕವೂ ಜಗ್ಗದ ಇರಾನ್, ಇಸ್ರೇಲ್ ಮೇಲಿನ ತನ್ನ ದಾಳಿಯನ್ನು ಮುಂದುವರೆಸಿದೆ.

ಅಮೆರಿಕ ದಾಳಿ ಬಳಿಕ ಇರಾನ್‌ನ ಮೊದಲ ಪ್ರತೀಕಾರ ಇದಾಗಿದ್ದು, ಇಸ್ರೇಲ್’ನ 10ಕ್ಕೂ ಹೆಚ್ಚು ಸ್ಥಳಗಳ ಮೇಲೆ 30ಕ್ಕೂ ಅಧಿಕ ಖಂಡಾಂತರ ಕ್ಷಿಪಣಿಗಳಿಂದ ದಾಳಿ ನಡೆಸಿದೆ. ಇಸ್ರೇಲ್‌ನ ಹೈಫಾ ನಗರ, ರಾಜಧಾನಿ ಟೆಲ್ ಅವೀವ್, ಜೆರುಸಲೆಂ ಸೇರಿದಂತೆ 10ಕ್ಕೂ ಹೆಚ್ಚು ನಗರಗಳ ಮೇಲೆ ಮಿಸೈಲ್‌ ಮಳೆ ಸುರಿಸಿದೆ.

ಇರಾನ್‌ನ ಮಿಸೈಲ್‌ಗಳು ನಗರಕ್ಕೆ ಅಪ್ಪಳಿಸುತ್ತಿದ್ದಂತೆ ಇಸ್ರೇಲ್‌ನ ಕೆಲವು ಭಾಗಗಳಲ್ಲಿ ಸೈರನ್‌ ಮೊಳಗಿದ್ದು, ನಾಗರಿಕರನ್ನ ಸುರಕ್ಷಿತ ಸ್ಥಳಗಳು ಮತ್ತು ಬಂಕರ್‌ಗಳಿಗೆ ಸ್ಥಳಾಂತರಿಸಲಾಗಿದೆ. ಮುಂದಿನ ಸೂಚನೆ ಬರುವವರೆಗೂ ಬಂಕರ್‌ಗಳಿಂದ ಹೊರಗೆ ಬರದಂತೆ ಸೂಚಿಸಲಾಗಿದೆ. ನಾಗರಿಕರನ್ನು ಗುರಿಯಾಗಿಸಿ ಇರಾನ್‌ ನಡೆಸಿದ ಈ ದಾಳಿಯಲ್ಲಿ 23ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ.

Read Also : ದಾಳಿಗೆ ಪ್ರತೀದಾಳಿ, ಇಸ್ರೇಲ್‌ ಒಳಗೆ ನುಗ್ಗಿ ಹೊಡೆದ ಇರಾನ್!

ಇನ್ನು ಇರಾನ್​ ಮೇಲಿನ ದಾಳಿ ಬೆನ್ನಲ್ಲೇ ಅಮೆರಿಕ ವಾಯುನೆಲೆಯಲ್ಲಿ ಅಲರ್ಟ್ ಆಗಿದೆ. ದೇಶವನ್ನು ಉದ್ದೇಶಿಸಿ ಅಧ್ಯಕ್ಷ ಡೊನಾಲ್ಡ್​ ಟ್ರಂಪ್ ಭಾಷಣ ಮಾಡಿದ್ದು, ಪರಮಾಣು ನೆಲೆಗಳ ಮೇಲಿನ ದಾಳಿ ಬಗ್ಗೆ ಮಾಹಿತಿ ನೀಡಿದ್ದಾರೆ.

Exit mobile version