Site icon BosstvKannada

Israel-Iran Conflict : ದಾಳಿಗೆ ಪ್ರತೀದಾಳಿ, ಇಸ್ರೇಲ್‌ ಒಳಗೆ ನುಗ್ಗಿ ಹೊಡೆದ ಇರಾನ್!

ಇಸ್ರೇಲ್​ನ ದಾಳಿಗೆ ಪ್ರತೀಕಾರ ತೀರಿಸಿಕೊಂಡಿರುವ ಇರಾನ್ ಇಂದು ಇಸ್ರೇಲ್ ಒಳಗೆ ನುಗ್ಗಿದೆ. ಇಸ್ರೇಲ್ ರಾಜಧಾನಿ ಟೆಲ್ ಅವಿವ್​ನಲ್ಲಿ ಇರಾನ್ ಕ್ಷಿಪಣಿ ದಾಳಿ ನಡೆಸಿದ್ದು, ಇದರಲ್ಲಿ 3 ನಾಗರಿಕರು ಮೃತಪಟ್ಟಿದ್ದಾರೆ.

ಇಸ್ರೇಲ್‌ನಾದ್ಯಂತ ರಾತ್ರಿಯಿಡೀ ವಾಯುದಾಳಿ ಸೈರನ್‌ಗಳು ಮತ್ತು ಸ್ಫೋಟಗಳು ಮೊಳಗಿದವು, ಇಂದು ಬೆಳಗ್ಗೆ ನಿವಾಸಿಗಳು ಬಾಂಬ್ ಆಶ್ರಯಗಳಲ್ಲಿ ಆಶ್ರಯ ಪಡೆಯುವಂತೆ ಮಿಲಿಟರಿ ಕರೆ ನೀಡಿತು. ಇರಾನ್‌ನಿಂದ ಬಂದ ಇತ್ತೀಚಿನ ದಾಳಿಗಳಲ್ಲಿ ಡಜನ್ ಗಟ್ಟಲೆ ಕ್ಷಿಪಣಿಗಳನ್ನು ಹಾರಿಸಲಾಗಿದೆ ಎಂದು ಇಸ್ರೇಲಿ ಮಿಲಿಟರಿ ಹೇಳಿದೆ.

ಮಾರಕ ಇಸ್ರೇಲಿ ದಾಳಿಗೆ ಪ್ರತೀಕಾರವಾಗಿ ಎರಡು ಇಸ್ರೇಲಿ F-35 ಸ್ಟೆಲ್ತ್ ಫೈಟರ್ ಜೆಟ್‌ಗಳನ್ನು ಹೊಡೆದುರುಳಿಸಿರುವುದಾಗಿ ಇರಾನ್ ಹೇಳಿಕೊಂಡಿದೆ. ಈ ದಾಳಿಯಲ್ಲಿ ಹಲವಾರು ಉನ್ನತ ಇರಾನಿನ ಮಿಲಿಟರಿ ಕಮಾಂಡರ್‌ಗಳು, ಪರಮಾಣು ವಿಜ್ಞಾನಿಗಳು ಮತ್ತು ಮಹಿಳೆಯರು ಮತ್ತು ಮಕ್ಕಳು ಸೇರಿದಂತೆ ನಾಗರಿಕರು ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ. ಇರಾನ್‌ನ ವಾಯು ರಕ್ಷಣಾ ಇಲಾಖೆ ನೇರ ದಾಳಿ ನಡೆಸಿರುವುದಆಗಿ ಹೇಳಿಕೊಂಡಿದೆ.

Exit mobile version