ತೂಕ ಕಡಿಮೆ ಮಾಡ್ಕೋಬೇಕು ಅನ್ಕೊಂಡಿದ್ರೆ ಮೊದ್ಲು ವೈಟ್ ರೈಸ್ ಸೇವನೆಯನ್ನ ಕಡಿಮೆ ಮಾಡ್ಬೇಕು. ಯಾಕಂದ್ರೆ ಇದ್ರಲ್ಲಿ ಸಕ್ಕರೆ ಅಂಶ ಜಾಸ್ತಿ ಇರುತ್ತೆ ಹೀಗಾಗಿ ತೂಕ ಕಡಿಮೆ ಆಗೋದಿಲ್ಲ. ಅದ್ರ ಬದಲಾಗಿ ಈ ಐದು ವೆರೈಟಿಯ ಅಕ್ಕಿಯನ್ನ ಟ್ರೈ Results ಮಾಡಿ.
ಮೊದಲ್ನೇದಾಗಿ, ಬ್ರೌನ್ ರೈಸ್ ಅಥವಾ ಕಂದು ಅಕ್ಕಿ. ಬ್ರೌನ್ ರೈಸ್‌ನಲ್ಲಿ ವಿಟಮಿನ್ ಬಿ, ಫೈಬರ್ ಮತ್ತೆ ಮಿನರಲ್ಸ್ ಜಾಸ್ತಿ ಇವೆ. ಇದರಲ್ಲಿರೋ ಫೈಬರ್ ಹೊಟ್ಟೆನ ತುಂಬಿಸಿ ಇಡುತ್ತೆ ಹೀಗಾಗಿ ಬೇಗ ಹಸಿವಾಗೋದಿಲ್ಲ. ಇದರಿಂದ ಜಾಸ್ತಿ ತಿನ್ನೋಕೆ ಆಗಲ್ಲ. ಇದ್ರಿಂದ ವೇಟ್‌ಲಾಸ್‌ಗೆ ಹೆಲ್ಪ್ ಆಗುತ್ತೆ.

ಬಾಸ್ಮತಿ ಅಕ್ಕಿ. ಬಾಸ್ಮತಿ ಅಕ್ಕಿಯಲ್ಲಿ ಗ್ಲೈಸೆಮಿಕ್ ಇಂಡೆಕ್ಸ್ ಕಡಿಮೆ ಇರುತ್ತೆ. ಮುಖ್ಯವಾಗಿ ಈ ರೈಸ್‌ಅನ್ನ ಎಣ್ಣೆ ಅಥವಾ ತುಪ್ಪ ಬಳಸದೇ ಮಾಡಿದ್ರೆ ತೂಕನ ಈಸಿಯಾಗಿ ಇಳಿಸಬಹುದು. ನೆಕ್ಸ್ಟ್ ಬರುವಂತದ್ದು ಕುಚಲಕ್ಕಿ. ಇದನ್ನ ಕೆಂಪಕ್ಕಿ, ಮಟ್ಟಾ ರೈಸ್ ಈ ರೀತಿ ಹಲವು ಹೆಸರುಗಳಿಂದ ಕರೆಯಲಾಗುತ್ತೆ. ಇದರಲ್ಲಿ ಫೈಬರ್ ತುಂಬಾ ಜಾಸ್ತಿ ಇದೆ, ಹೀಗಾಗಿ ಇದು ತೂಕ ಇಳಿಸೋಕೆ ಬಹಳ ಒಳ್ಳೇದು.
Also Read: ಪದ್ಮಭೂಷಣ ಸ್ವೀಕರಿಸಿದ ನಟ Anantnag..!
ರೆಡ್ ರೈಸ್. ತುಂಬಾ ಜನ ರೆಡ್ ರೈಸ್ ಹಾಗೂ ಕುಚಲಕ್ಕಿ ಎರಡೂ ಒಂದೇ ಅನ್ಕೊಂಡಿದ್ದಾರೆ. ಆದ್ರೆ ಇವೆರಡೂ ಬೇರೆ ರೀತಿಯ ಅಕ್ಕಿಗಳು. ಇದು ಕೂಡ ಫೈಬರ್‌ನಿಂದ ಸಮೃದ್ಧವಾಗಿದೆ. ಆದ್ರೆ ಬೇರೆ ಅಕ್ಕಿಗಳಂತೆ ಇದನ್ನ ಅನ್ನ ಮಾಡಿ ತಿನ್ನೋದಕ್ಕೆ ಅಷ್ಟು ಚನ್ನಾಗಿರೋದಿಲ್ಲ ಹಾಗೂ ಬೇಯಿಸೋದಿಕ್ಕೂ ಬಹಳ ಸಮಯ ಹಿಡಿಯುತ್ತೆ. ಹೀಗಾಗಿ ದೋಸೆ ಇಡ್ಲಿಗಳಲ್ಲಿ ಇದನ್ನ ಬಳಸಬಹುದು.
ಇನ್ನು ಇದೇ ರೀತಿ ಕಪ್ಪು ಅಕ್ಕಿ ಕೂಡ. ಇದ್ರಲ್ಲಿ ಫೈಬರ್ ಜಾಸ್ತಿ ಇರೋದ್ರಿಂದ ತೂಕ ಇಳಿಸೋಕೆ ಸಹಾಯ ಮಾಡುತ್ತೆ. ಈ ರೈಸ್ ಡೈಜೆಶನ್ ಇಂಪ್ರೂವ್ ಮಾಡುತ್ತೆ. ಇದರಲ್ಲಿರೋ ಆಂಟಿ ಆಕ್ಸಿಡೆಂಟ್ಸ್ ತೂಕನ ಕಂಟ್ರೋಲ್ ಮಾಡೋದರ ಜೊತೆಗೆ ಆರೋಗ್ಯನ ಕಾಪಾಡುತ್ತೆ. ಇದನ್ನ ಕೂಡ ನೀವು ದೋಸೆ, ಇಡ್ಲಿ ಈ ರೀತಿಯಾಗಿ ಸೇವಿಸಬಹುದು.