ಮೈಸೂರು ಒಡೆಯರ್(Wodeyar) ಮನೆತನದ ವಿರುದ್ಧ ಸಮರ ಸಾರಿದ್ದ ಸಿಎಂ ಸಿದ್ದರಾಮಯ್ಯ ಈಗ ಗೆದ್ದು ಬೀಗಿದ್ದಾರೆ.. ಬೆಂಗಳೂರು ಅರಮನೆ (Bangalore Palace) ಆಸ್ತಿ ವಿಚಾರದಲ್ಲಿ ರಾಜ್ಯ ಸರ್ಕಾರದ ಸುಗ್ರೀವಾಜ್ಞೆಗೆ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಒಪ್ಪಿಗೆ ಸೂಚಿಸಿದ್ದಾರೆ. ಈ ಮೂಲಕ ಬೆಂಗಳೂರಿನಲ್ಲಿರುವ ಅರಮನೆಯ ನೂರಾರು ಎಕರೆ ಹಾಗೂ ಕೋಟ್ಯಂತರ ರೂಪಾಯಿ ಆದಾಯ ಸರ್ಕಾರದ ಪಾಲಾಗಿದೆ..

ರಾಜರ ವಿರೋಧದ ಮಧ್ಯೆಯೂ ಸರ್ಕಾರದ ಸುಪರ್ದಿಗೆ ಆಸ್ತಿ!
ಮೈಸೂರು ರಾಜಮನೆತನದ ವಿರೋಧದ ಮಧ್ಯೆಯೂ ಸರ್ಕಾರ ಈ ಆದೇಶ ಜಾರಿಗೆ ತರುವಲ್ಲಿ ಯಶಸ್ವಿಯಾಗಿದೆ. ರಾಜವಂಶಸ್ಥರಿಗೆ ಟಿಡಿಆರ್ ನೀಡದಿರಲು ಸರ್ಕಾರ ನಿರ್ಧರಿಸಿದೆ. ಕಳೆದ ಸಂಪುಟದಲ್ಲಿ ಟಿಡಿಆರ್ ನೀಡದಿರಲು ಸರ್ಕಾರ ತೀರ್ಮಾನಿಸಿತ್ತು. ಇದಕ್ಕೆ ಸಂಬಂಧಿಸಿದಂತೆ ಬೆಂಗಳೂರು ಅರಮನೆ (Bangalore Palace) ಭೂ ಕಬಳಿಕೆ ಮತ್ತು ನಿಯಂತ್ರಣ ಅಧ್ಯಾದೇಶ 2025ಕ್ಕೆ ರಾಜ್ಯಪಾಲರು ಅಂಕಿತ ಹಾಕಿದ್ದಾರೆ.

ಅರಮನೆಯ ಭೂಮಿ ಎಷ್ಟು ಎಕರೆ? ಆದಾಯ ಎಷ್ಟು..?
ರಾಜ್ಯ ಸರ್ಕಾರ ಬೆಂಗಳೂರು ಅರಮನೆಯ (Bangalore Palace) ಆಸ್ತಿಯ ಮೇಲೆ ಹಕ್ಕು ಸಾಧಿಸಿದೆ. ಅರಮನೆಯ ಭೂಮಿ ಮತ್ತು ಅದ್ರಿಂದ ಬರುತ್ತಿದ್ದ ಆದಾಯವನ್ನು ಸರ್ಕಾರವೇ ಬಳಸಿಕೊಳ್ಳಲಿದ್ದು, ಇದು ರಾಜಮನೆತನಕ್ಕೆ ಆಘಾತ ನೀಡಿದಂತಾಗಿದೆ.. ಇದ್ರಿಂದ ತೀವ್ರ ಆಕ್ರೋಶಗೊಂಡಿದ್ದ ರಾಜಮಾತೆ ಪ್ರಮೋದಾದೇವಿ ಸುದ್ದಿಗೋಷ್ಠಿ ನಡೆಸಿ ಸರ್ಕಾರದ ವಿರುದ್ಧ ಕಿಡಿಕಾರಿದ್ದರು.. ಇದರ ಮಧ್ಯೆಯೂ ರಾಜ್ಯಪಾಲರು ಸುಗ್ರೀವಾಜ್ಙೆಗೆ ಅಂಕಿತ ಹಾಕಿರೋದ್ರಿಂದ ಸರ್ಕಾರ ಸಂಪೂರ್ಣವಾಗಿ ಹಿಡಿತ ಸಾಧಿಸಿದೆ. ಹಾಗಾದ್ರೆ, ಅರಮನೆಯ ಆಸ್ತಿ ಎಷ್ಟು..? ಆ ಭೂಮಿಯಿಂದ ಬರುತ್ತಿದ್ದ ಆದಾಯ ಎಷ್ಟು ಅಂತಾ ಕೇಳಿದ್ರೆ ನೀವು ಶಾಕ್ ಆಗ್ತೀರಿ. ಅದನ್ನು ಹೇಳ್ತೀವಿ ಕೇಳಿ.

3 ಸಾವಿರ ಕೋಟಿ ಮೌಲ್ಯ, 472 ಎಕರೆ ಭೂಮಿ!
ಯೆಸ್.. ಯಾವುದೇ ದೊಡ್ಡ ದೊಡ್ಡ ಕಾರ್ಯಕ್ರಮಗಳು ನಡೆದ್ರೂ ಬೆಂಗಳೂರಿನ ಅರಮನೆ ಮೈದಾನದಲ್ಲೇ ನಡೆಯುತ್ತವೆ.. ಪ್ಯಾಲೇಸ್ ಗ್ರೌಂಡ್ ವಿಶಾಲವಾಗಿ, ಸಾರಿಗೆ ಸೌಲಭ್ಯ ಹೊಂದಿದ ಕಾರಣದಿಂದಾಗಿ ಅದ್ಧೂರಿ ಕಾರ್ಯಕ್ರಮಗಳು ಇಲ್ಲೇ ಜರುಗುತ್ತವೆ. ಈ ಕಾರ್ಯಕ್ರಮಗಳಿಂದಾಗಿ ವರ್ಷಕ್ಕೆ ನೂರಾರು ಕೋಟಿ ರೂಪಾಯಿ ಆದಾಯ ಬರುತ್ತದೆ ಅನ್ನೋ ಮಾಹಿತಿ ಇದೆ.. ಪ್ಯಾಲೇಸ್ನ ಗ್ರೌಂಡ್ನ ಭೂಮಿ ಒಟ್ಟು 472 ಎಕರೆ ಇದೆ.. ಇಂತಹ ಭೂಮಿಯನ್ನು ಈಗ ರಾಜಮನೆತನದಿಂದ ರಾಜ್ಯ ಸರ್ಕಾರ ತನ್ನ ವಶಕ್ಕೆ ಪಡೆದಿದೆ..
ರಾಜಮನೆತನ ಮತ್ತು ರಾಜ್ಯ ಸರ್ಕಾರದ ನಡುವೆ ಏನಿದು ಕಿತ್ತಾಟ?
ಇಂತಹ ಬೆಳವಣಿಗೆ ನಡೆಯೋದಕ್ಕೆ ಒಂದು ಕಾರಣವಿದೆ. 1996 ರಲ್ಲಿ ಬೆಂಗಳೂರು ಪ್ಯಾಲೇಸ್ ವ್ಯಾಪ್ತಿಯ 472 ಎಕರೆ ಭೂಮಿಯನ್ನ ಸರ್ಕಾರ ವಶಕ್ಕೆ ಪಡೆಯಲು 11 ಕೋಟಿ ರೂಪಾಯಿ ನಿಗದಿಪಡಿಸಿತ್ತು. ಆಗಿನ ಕಾಲದಲ್ಲಿ ಒಂದು ಎಕರೆಗೆ 2.30 ಲಕ್ಷ ರೂಪಾಯಿಯಂತೆ ದರ ನಿಗದಿ ಮಾಡಲಾಗಿತ್ತು. ಆದರೆ ರಾಜಮನೆತನ ಇದನ್ನ ಪ್ರಶ್ನಿಸಿ ಕೋರ್ಟ್ ಮೆಟ್ಟಿಲೇರಿತ್ತು. ಇಂದಿನ ಮಾರುಕಟ್ಟೆ ದರ ಎಕರೆಗೆ 200 ಕೋಟಿ ರೂಪಾಯಿ ಆಗುತ್ತದೆ. ರಸ್ತೆ ಅಗಲಿಕರಣಕ್ಕೆ ಬೇಕಾದ 15 ಎಕರೆ 36 ಗುಂಟೆ ಜಾಗವನ್ನೇ ವಶಕ್ಕೆ ಪಡೆಯುವುದಾದರೆ ಎಕರೆಗೆ 200 ಕೋಟಿ ಬೆಲೆ ಆಗುತ್ತದೆ. ಇದರ ಒಟ್ಟು ಮೌಲ್ಯ 3 ಸಾವಿರ ಕೋಟಿ ರೂಪಾಯಿ ಆಗಲಿದೆ. ರಾಜ್ಯ ಸರ್ಕಾರ ಅರಮನೆಯ ಭೂಮಿಯನ್ನು ವಶಕ್ಕೆ ಪಡೆಯುವುದಾದರೆ ಟಿಡಿಆರ್ ಕೊಡಲು ಸಾಧ್ಯವಿಲ್ಲ. ಹಾಗಾಗಿ ಸುಗ್ರೀವಾಜ್ಞೆ ಮೂಲಕ ಜಾಗವನ್ನ ವಶಕ್ಕೆ ಪಡೆಯುವ ಮುಕ್ತ ಅವಕಾಶವನ್ನು ಸರ್ಕಾರ ಬಳಸಿಕೊಂಡಿದೆ..
ರಾಜ್ಯ ಸರ್ಕಾರದ ವಿರುದ್ಧ ಸಿಡಿದೆದ್ದಿದ್ದ ರಾಜಮಾತೆ..!
ಇನ್ನು, ರಾಜ್ಯ ಸರ್ಕಾರದ ನಿರ್ಣಯದ ವಿರುದ್ಧ ರಾಜಮಾತೆ ಪ್ರಮೋದಾದೇವಿ ತೀವ್ರ ಆಕ್ರೋಶ ಹೊರಹಾಕಿದ್ರು.. ಅರಮನೆ ಮೈದಾನದ ಭೂಮಿ ಬಳಕೆಗೆ 3 ಸಾವಿರ ಕೋಟಿ ರೂಪಾಯಿ ಟಿಡಿಆರ್ ಕೊಡುವುದನ್ನು ತಪ್ಪಿಸಲು ಸರ್ಕಾರ ಸುಗ್ರೀವಾಜ್ಞೆ ಹೊರಡಿಸಿದೆ ಅಂತಾ ಪ್ರಮೋದಾದೇವಿ ಒಡೆಯರ್ ಆರೋಪಿಸಿದ್ದರು. ಬೆಂಗಳೂರು ಅರಮನೆ (Bangalore Palace) ಜಾಗ ನಮ್ಮದೇ, ಸುಗ್ರೀವಾಜ್ಞೆ ವಿರುದ್ಧ ಕಾನೂನು ಹೋರಾಟ ಮಾಡುತ್ತೇವೆ ಅಂತಾ ಹೇಳಿದ್ದಾರೆ.
ಸದ್ಯ ಬೆಂಗಳೂರು ಅರಮನೆಯ ಭೂಮಿ ಬಳಕೆ ಮತ್ತು ನಿಯಂತ್ರಿಸುವ ಅಧಿಕಾರವನ್ನು ಸರ್ಕಾರ ತನ್ನದಾಗಿಸಿಕೊಂಡಿದೆ. ಇದ್ರ ವಿರುದ್ಧ ಕಾನೂನು ಹೋರಾಟ ಮಾಡೋದಾಗಿ ರಾಜಮನೆತನ ಹೇಳಿದೆ. ಮುಂದೇನಾಗುತ್ತೋ ಕಾದು ನೋಡ್ಬೇಕು.