Site icon BosstvKannada

ಮತ್ತೆ ಕಾಂಗ್ರೆಸ್‌ಗೆ ಸಿದ್ದು ಶಿಷ್ಯರು..? ಕಾಂಗ್ರೆಸ್‌ ಸೇರಲು ರೆಡಿಯಾದ್ರಾ STS, ಹೆಬ್ಬಾರ್?‌

STS

ಬಿಜೆಪಿಯಲ್ಲಿ ರೆಬೆಲ್‌ ಬಾವುಟ ಹಾರಿಸಿದ್ದ ಒಬ್ಬೊಬ್ಬ ನಾಯಕರಿಗೂ ಇದೀಗ ಗೇಟ್‌ಪಾಸ್‌ ನೀಡಲಾಗ್ತಿದೆ.. ಶಾಸಕ ಬಸನಗೌಡ ಯತ್ನಾಳ್‌ ಬಳಿಕ ಈಗ ಮತ್ತಿಬ್ಬರು ಶಾಸಕರನ್ನು ಪಕ್ಷದಿಂದ ಹೊರಹಾಕಲಾಗಿದೆ… ಬಿಜೆಪಿಯ ರೆಬೆಲ್‌ ಶಾಸಕರಾದ ಎಸ್.ಟಿ.ಸೋಮಶೇಖರ್‌ ಹಾಗೂ ಶಿವರಾಂ ಹೆಬ್ಬಾರ್‌ರನ್ನು ಉಚ್ಚಾಟನೆ ಮಾಡಿ ಬಿಜೆಪಿ ಶಿಸ್ತು ಸಮಿತಿ ಆದೇಶಿಸಿದೆ… ಆದ್ರೆ, ಈ ಇಬ್ಬರು ಶಾಸಕರು ಸಿಎಂ ಸಿದ್ದರಾಮಯ್ಯ ಆಪ್ತ ವಲಯದಲ್ಲೇ ಗುರುತಿಸಿಕೊಂಡಿದ್ದು, ಮುಂದಿನ ನಡೆ ಏನು ಅನ್ನೋದು ಭಾರಿ ಚರ್ಚೆಯಾಗುತ್ತಿದೆ..

ಈ ಇಬ್ಬರು ಶಾಸಕರು ಮೊದಲಿನಿಂದಲೂ ಸಿಎಂ ಸಿದ್ದರಾಮಯ್ಯ ಆಪ್ತ ವಲಯದಲ್ಲಿ ಗುರುತಿಸಿಕೊಂಡವರು.. 2019ರಲ್ಲಿ ಕಾಂಗ್ರೆಸ್‌ ತೊರೆದು ಆಪರೇಷನ್‌ ಕಮಲದ ಮೂಲಕ ಬಿಜೆಪಿ ಸೇರಿದ್ದರು.. ಸಿದ್ದರಾಮಯ್ಯ ಸೂಚನೆ ಮೇರೆಗೆ ಈ ಇಬ್ಬರು ಶಾಸಕರು ಸೇರಿ 17 ಶಾಸಕರು ಬಿಜೆಪಿ ಸೇರಿದ್ದರು ಅಂತಾ ಹೇಳಲಾಗಿತ್ತು.. ಬಿಜೆಪಿಯಲ್ಲೇ ಇದ್ದರೂ ಈ ಸೋಮಶೇಖರ್‌ ಹಾಗೂ ಶಿವರಾಂ ಹೆಬ್ಬಾರ್‌ ಇಬ್ಬರೂ ಪಕ್ಷದ ಚಟುವಟಿಕೆಯಿಂದ ಸಂಪೂರ್ಣವಾಗಿ ದೂರ ಇದ್ದರು.. ಯಾವುದೇ ರೀತಿಯ ಕಾರ್ಯಕ್ರಮ ನಡೆದರೂ ಗೈರಾಗಿದ್ದರು… ಆದ್ರೆ, ಕಾಂಗ್ರೆಸ್‌ ನಾಯಕರ ಕ್ಷೇತ್ರ ಸಂಚಾರದಲ್ಲಿ ಪಾಲ್ಗೊಂಡು ಅಚ್ಚರಿ ಮೂಡಿಸುತ್ತಿದ್ರು.. ಆದ್ರೀಗ ಇಬ್ಬರಿಗೂ ಬಿಜೆಪಿ ಹೈಕಮಾಂಡ್‌ ಶಾಕ್‌ ಕೊಟ್ಟಿದೆ..

ಇನ್ನು, ಇತ್ತೀಚೆಗಷ್ಟೇ ಬಿಜೆಪಿ ಕೋರ್‌ ಕಮಿಟಿ ಸಭೆಗೂ ಎಸ್.ಟಿ.ಸೋಮಶೇಖರ್‌ ಹಾಗೂ ಶಿವರಾಮ್ ಹೆಬ್ಬಾರ್‌ ಗೈರಾಗಿದ್ದರು.. ಆದ್ರೆ, ಡಿಸಿಎಂ ಡಿ.ಕೆ.ಶಿವಕುಮಾರ್‌ ನೇತೃತ್ವದಲ್ಲಿ ನಡೆದ ಸಿಟಿ ರೌಂಡ್ಸ್‌ನಲ್ಲಿ ಎಸ್.ಟಿ.ಸೋಮಶೇಖರ್‌ ಕಾಣಿಸಿಕೊಂಡಿದ್ದರು.. ಈ ಎಲ್ಲಾ ಬೆಳವಣಿಗೆ ಗಮನಿಸಿದ ಬಿಜೆಪಿ ನಾಯಕರು, ಇಬ್ಬರನ್ನೂ ಉಚ್ಚಾಟಿಸಬೇಕು ಅಂತಾ ಒತ್ತಾಯಿಸಿದ್ದರು.. ಪಕ್ಷ ವಿರೋಧಿ ಚಟುವಟಿಕೆ ಕಾರಣ ನೋಟಿಸ್ ಕೂಡ ನೀಡಲಾಗಿತ್ತು.. ಆದ್ರೆ ಉತ್ತರಕ್ಕೆ ತೃಪ್ತಿ ಆಗದ ಕೇಂದ್ರ ಶಿಸ್ತು ಸಮಿತಿ ಅಧಿಕೃತವಾಗಿ ಇಬ್ಬರು ಶಾಸಕರನ್ನು 6 ವರ್ಷಗಳ ಕಾಲ ಉಚ್ಚಾಟನೆ ಮಾಡಿ ಆದೇಶಿಸಿದೆ.. ಹೀಗಾಗಿ, ಈ ಇಬ್ಬರು ಶಾಸಕರ ಮುಂದಿನ ನಡೆ ಏನು ಅನ್ನೋದು ಭಾರಿ ಕುತೂಹಲ ಕೆರಳಿಸಿದೆ..

ಮತ್ತೊಂದ್ಕಡೆ, ಎಸ್.ಟಿ.ಸೋಮಶೇಖರ್‌ ಹಾಗೂ ಶಿವರಾಮ್‌ ಬಿಜೆಪಿಯಿಂದ ಉಚ್ಚಾಟನೆ ಮಾಡಲಿ ಅಂತಲೇ ಕಾಂಗ್ರೆಸ್‌ ನಾಯಕರ ಜೊತೆ ಗುರುತಿಸಿಕೊಳ್ತಿದ್ರು ಅಂತಾ ಚರ್ಚೆಯಾಗುತ್ತಿದೆ.. ಹೇಳಿ ಕೇಳಿ ಇಬ್ಬರೂ ಶಾಸಕರು ಸಿಎಂ ಸಿದ್ದರಾಮಯ್ಯ ಆಪ್ತ ವಲಯದಲ್ಲಿ ಗುರುತಿಸಿಕೊಂಡವರು.. ಈಗ ಬಿಜೆಪಿಯಿಂದ ಉಚ್ಚಾಟನೆಯನ್ನೂ ಮಾಡಲಾಗಿದೆ.. 6 ವರ್ಷಗಳ ಕಾಲ ಬಿಜೆಪಿಯಲ್ಲಿ ಏನೂ ಮಾಡುವಂತಿಲ್ಲ..

Also Read: ವಿಶ್ವ ದಾಖಲೆಯಲ್ಲಿ virat kohli ಕಿಂಗ್‌.. ಏನೇನು ದಾಖಲೆ?

ಹೀಗಾಗಿ, ಈ ಇಬ್ಬರು ಶಾಸಕರ ನಡೆ ಈಗ ಕಾಂಗ್ರೆಸ್‌ ಕಡೆ ಸಾಗಿದೆ ಅಂತಾ ಹೇಳಲಾಗ್ತಿದೆ.. ಇನ್ನೊಂದು ವಿಚಾರ ಅಂದ್ರೆ ಸದ್ಯಕ್ಕೆ ಇವರು ಕಾಂಗ್ರೆಸ್‌ಗೆ ಹೋಗಲ್ಲ.. ಶಾಸಕರಾಗಿಯೇ ತಟಸ್ಥರಾಗಿ ಉಳಿದು ಕಾಂಗ್ರೆಸ್‌ಗೆ ಬಾಹ್ಯ ಬೆಂಬಲ ನೀಡಬಹುದು. ಇವರ ಶಾಸಕ ಅವಧಿಕ ಇನ್ನೂ 3 ವರ್ಷ ಇದೆ ಅಲ್ಲಿವರೆಗೂ ಸುಮ್ಮನೆ ಇದ್ದು ನಂತರ ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್‌ನಿಂದ ಸ್ಪರ್ಧಿಸಬಹುದಾಗಿದೆ.

ಇಲ್ಲದಿದ್ರೆ ಈಗಲೇ ಚುನಾವಣೆಗೆ ಹೋಗಬೇಕು ಅಂದ್ರೆ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ, ಸ್ವತಂತ್ರವಾಗಿ ನಿಂತು ಗೆದ್ದು, ಕಾಂಗ್ರೆಸ್‌ಗೆ ಪುನಃ ಸೇರಲು ಅವಕಾಶ ಇದೆ.. ಸದ್ಯ ಇಬ್ಬರು ಕಾದು ನೋಡುವ ತಂತ್ರಕ್ಕೆ ಮೊರೆ ಹೋಗಿದ್ದು, ಮುಂದಿನ ದಿನಗಳಲ್ಲಿ ನಮ್ಮ ನಿರ್ಧಾರ ತಿಳಿಸುತ್ತೇವೆ ಅಂತಾ ಹೇಳಿದ್ದಾರೆ..

ಒಟ್ನಲ್ಲಿ, ಬಿಜೆಪಿಯಲ್ಲಿ ಮತ್ತೊಂದು ಹಂತದ ಉಚ್ಚಾಟನೆ ಪರ್ವ ಘಟಿಸಿದ್ದು, ಈಗ ಪಕ್ಷದಿಂದ ಹೊರಬಿದ್ದಿರುವ ಈ ಇಬ್ಬರು ಶಾಸಕರು ಶೀಘ್ರದಲ್ಲೇ ಕಾಂಗ್ರೆಸ್‌ ಸೇರ್ತಾರೆ ಅಂತಾ ಹೇಳಲಾಗ್ತಿದೆ.. ಮತ್ತೊಂದೆಡೆ ಬಿಜೆಪಿ ನಾಯಕರು ಈ ಇಬ್ಬರು ಶಾಸಕರನ್ನು ಅನರ್ಹಗೊಳಿಸುವಂತೆ ಸ್ಪೀಕರ್‌ಗೆ ಮನವಿ ಸಲ್ಲಿಸಲು ಚಿಂತನೆ ನಡೆಸಿದ್ದಾರಂತೆ. ಆದ್ರೆ, ಮುಂದೇನಾಗುತ್ತೆ ಅನ್ನೋದು ಕಾಲವೇ ಉತ್ತರಿಸಬೇಕಿದೆ.

Exit mobile version