ಡೊನಾಲ್ಡ್ ಟ್ರಂಪ್(Donald Trump) ಈಗ ಅಮೆರಿಕದ 47ನೇ ಅಧ್ಯಕ್ಷ.. 2ನೇ ಬಾರಿಗೆ ಅಮೆರಿಕದ ಅಧಿಪತಿಯಾಗಿರುವ ಟ್ರಂಪ್, ಚರಿತ್ರೆಯೇ ಒಂದು ರೋಚಕ ಕಥೆ.. ಟ್ರಂಪ್ ಬೆಳೆದು ಬಂದ ದಾರಿ ಇತಿಹಾಸದ ಪುಟದಲ್ಲಿ ಅಚ್ಚಳಿಯದಂತೆ ಉಳಿಯುವಂತಿದೆ. ಕೈತುಂಬಾ ಹಣ, ಲೆಕ್ಕವಿಲ್ಲದಷ್ಟು ಚಿನ್ನಾಭರಣ.. ಭವ್ಯ ಬಂಗಲೆಗಳು.. ಸಾಕಷ್ಟು ಕಂಪನಿಗಳು.. ಅಬ್ಬಬ್ಬಾ.. ಟ್ರಂಪ್ ಸಾಮ್ರಾಜ್ಯ ನಿರೀಕ್ಷೆಗೂ ನಿಲುಕದ್ದು.. ಇಂತಹ ಐಷಾರಾಮಿ ಜೀವನದ ಮಧ್ಯೆ ಟ್ರಂಪ್ ಹೆಚ್ಚೆಚ್ಚು ಸುದ್ದಿಯಾಗಿದ್ದು ಸುರ ಸುಂದರಿಯರ ಸಾಂಗತ್ಯದ ವಿಚಾರಕ್ಕೆ..
ನಿಜ.. ಸುಖದ ಸುಪ್ಪತ್ತಿಗೆಯಲ್ಲೇ ಬೆಳೆದ ಡೊನಾಲ್ಡ್ ಟ್ರಂಪ್(Donald Trump) ಈಗ ಅಮೆರಿಕದ ಅಧ್ಯಕ್ಷ.. ವೈಟ್ ಹೌಸ್ನ ಅಧಿಪತಿ.. ಎರಡನೇ ಬಾರಿಗೆ ಟ್ರಂಪ್, ಅಮೆರಿಕದ ಅಧ್ಯಕ್ಷರಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ. ಇದ್ರ ಜತೆ ಜತೆಗೆ ಅವರ ವೈಯಕ್ತಿಕ ವಿಚಾರಗಳು ಭಾರಿ ಸದ್ದು ಮಾಡುತ್ತಿವೆ.. ಅದರಲ್ಲೂ ಟ್ರಂಪ್ಗೆ ಇದ್ದ ಹೆಂಗಸರ ನಂಟಿನ ವಿಚಾರವೇ ಭಾರಿ ಹಲ್ಚಲ್ ಎಬ್ಬಿಸಿದೆ.. ಹಾಗಾದ್ರೆ, ಟ್ರಂಪ್ಗೆ ಇದ್ದ ಹೆಂಗಸರ ಹುಚ್ಚು ಎಂಥಾದ್ದು? ಮೂರು ಮೂರು ಮದುವೆಯ ಹಿಂದನ ರಹಸ್ಯವೇನು? ಪರಮಸುಂದರಿ ಮೆಲಾನಿಯಾ ಸಿಕ್ಕಿದ್ದು ಯಾವಾಗ ಅನ್ನೋದು ಹೇಳ್ತೀವಿ ಮುಂದೆ ಓದಿ..

ಹುಟ್ಟಿನಿಂದಲೇ ಆಗರ್ಭ ಶ್ರೀಮಂತ ಟ್ರಂಪ್..!
ಡೊನಾಲ್ಡ್ ಟ್ರಂಪ್(Donald Trump) ಜನಿಸಿದ್ದು ಜೂನ್ 14, 1946ರಂದು.. ಟ್ರಂಪ್ ತಾತನ ಕಾಲದಿಂದಲೇ ಆಗರ್ಭ ಶ್ರೀಮಂತರು.. ಅಮೆರಿಕದ ಮಾಧ್ಯಮಗಳ ವರದಿ ಪ್ರಕಾರ, ಹುಟ್ಟುತ್ತಲೇ ಶ್ರೀಮಂತರಾಗಿದ್ದ ಟ್ರಂಪ್ಗೆ 8 ವರ್ಷ ತುಂಬುವ ವೇಳೆಗೆ ಅವರ ಖಾತೆಯಲ್ಲಿ ತಂದೆ ಹಣ ತುಂಬಿಸಿ ಮಿಲಿಯನೇರ್ ಆಗಿಸಿದ್ದರಂತೆ.. ಇಷ್ಟೆಲ್ಲಾ ಇದ್ದ ಟ್ರಂಪ್ಗೆ ಹೆಂಗಸರ ಸಾಂಗತ್ಯ ಅಂದ್ರೆ ವಿಪರೀತ ಹುಚ್ಚು.. ಯೌವನದಿಂದ ಮುಪ್ಪಿನವರೆಗೂ ಟ್ರಂಪ್ ಜೀವನದ ಡೈರಿಯಲ್ಲಿ ಬಂದು ಹೋದ ಮಹಿಳೆಯರ ಸಂಖ್ಯೆ ಲೆಕ್ಕಕ್ಕೇ ಸಿಗದು.. ಟ್ರಂಪ್ರ ರಸಿಕತೆಯ ಜೀವನದ ಸಂಪೂರ್ಣ ಚರಿತ್ರೆ ಒಂದು ರಸವತ್ತಾದ ಕಥೆ..
ಸುಂದರಿಯರು ಸೇರುವ ತಾಣದಲ್ಲೇ ಟ್ರಂಪ್ಗೆ ಮೊದಲ ಲವ್!
ಹೌದು.. ಟ್ರಂಪ್ಗೆ ಮೊದಲ ಲವ್ ಶುರುವಾಗಿದ್ದು ನ್ಯೂಯಾರ್ಕ್ನಲ್ಲಿ.. ಅದು ನ್ಯೂಯಾರ್ಕ್ನ ಮ್ಯಾಕ್ಸ್ವೆಲ್ ಪ್ಲಮ್ ಬಾರ್.. ಇದೊಂದು ಹೈಫೈ ರೂಪದರ್ಶಿಗಳು ಶ್ರೀಮಂತ ಪುರುಷರನ್ನು ಸಂಧಿಸುವ ತಾಣ. 1976ರಲ್ಲಿ ಒಂದು ಸಂಜೆ, ಡೊನಾಲ್ಡ್ ಟ್ರಂಪ್ ಈ ಬಾರ್ಗೆ ಎಂಟ್ರಿ ಕೊಟ್ಟಿದ್ದರು… ಅಲ್ಲಿ ಆಗ ಟ್ರಂಪ್ ದೃಷ್ಟಿ ಹರಿದಿದ್ದು ಜೆಕೋಸ್ಲೋವಿಯಾದ ರೂಪದರ್ಶಿ ಇವಾನಾ ಝೆಲೆನಿಕೋವಾ ಮೇಲೆ.. ಮೀಟಿಂಗು, ಟಾಕಿಂಗು, ಡೇಟಿಂಗು ಅಂತಾ ಇಬ್ಬರ ಪ್ರೀತಿ ಮುಂದುವರಿಯಿತು.. 1977ರಲ್ಲಿ ಟ್ರಂಪ್ ಇವಾನಾ ಝೆಲೆನಿಕೋವಾ ದಾಂಪತ್ಯ ಜೀವನಕ್ಕೆ ಕಾಲಿಟ್ಟರು.. ತಮ್ಮಿಬ್ಬರಿಗೆ 5 ಮಕ್ಕಳನ್ನು ಬಯಸಿದ್ದ ಟ್ರಂಪ್ ಈಕೆಯೊಂದಿಗೆ 3 ಮಕ್ಕಳನ್ನು ಪಡೆದರು. ಡೊನಾಲ್ಡ್ ಜೂನಿಯರ್, ಮಗಳು ಇವಾಂಕಾ, ಕಿರಿಯ ಮಗ ಎರಿಕ್ ಟ್ರಂಪ್ರ ಮಕ್ಕಳು.. ಪ್ರತಿ ಮಗು ಹುಟ್ಟಿದಾಗಲೂ ಟ್ರಂಪ್ ಇವಾನಾಗೆ 2.5 ಲಕ್ಷ ಡಾಲರ್ ಕೊಟ್ಟಿದ್ದಾರೆ..

ಟೆನಿಸ್ ಪಂದ್ಯ ವೀಕ್ಷಣೆ ವೇಳೆ ಮಾಡೆಲ್ ಮನಸು ಕದ್ದ ಟ್ರಂಪ್!
ಟ್ರಂಪ್ ಮೊದಲ ಮದುವೆಯಾದ 8 ವರ್ಷಕ್ಕೆ ಮತ್ತೊಂದು ಲವ್ ಶುರುವಾಯ್ತು.. 1985ರಲ್ಲಿ ಟ್ರಂಪ್ ಟೆನಿಸ್ ಪಂದ್ಯ ವೀಕ್ಷಿಸಲು ಹೋಗಿದ್ರು. ಆಗ ಮಾಡೆಲ್ ಮಾರ್ಲಾ ಮ್ಯಾಪಲ್ಸ್ ಪರಿಚಯ ಆಯಿತು. ಆಕೆ ಜತೆಗೂ ಟ್ರಂಪ್ ಸಂಬಂಧ ಮುಂದುವರಿಯಿತು.. ಮಾರ್ಲಾ ಜತೆಗೆ ಟ್ರಂಪ್ ಫೋಟೊಗಳು ಪತ್ರಿಕೆ, ಮ್ಯಾಗಜಿನ್ಗಳಲ್ಲಿ ಸಂಚಲನ ಸೃಷ್ಟಿಸಿದ್ವು.. ಇದೆಲ್ಲವನ್ನೂ ಸಹಿಸದ ಟ್ರಂಪ್ ಮೊದಲ ಪತ್ನಿ ಇವಾನಾ ವಿಚ್ಛೇದನ ನೀಡಿದರು. ಇವಾನಾಗೆ 36 ಕೋಟಿ ರೂಪಾಯಿ ಜೀವನಾಂಶ ಕೊಟ್ಟಿದ್ದಾರೆ.. ಆದ್ರೆ, ಮಾರ್ಲಾ ಜತೆಗೂ ಟ್ರಂಪ್ ಮೂರು ವರ್ಷ ಸಂಸಾರ ನಡೆಸಿ ಆಕೆಗೂ ಡಿವೋರ್ಸ್ ಕೊಟ್ಟರು.
ಮೂರನೇ ಪತ್ನಿ ಮೆಲಾನಿಯಾ.. ಇಬ್ಬರ ನಡುವೆ 19 ವರ್ಷ ಅಂತರ
ಇವಾನಾ, ಮಾರ್ಲಾ ನಂತರ ಟ್ರಂಪ್ ಬಾಳಿಗೆ ಎಂಟ್ರಿ ಕೊಟ್ಟಿದ್ದೇ ಮೆಲಾನಿಯಾ.. ಸ್ಲೋವೇನಿಯಾದ ಈ ಮಾಡೆಲ್, ಪರಿಚಯ ಆಗಿದ್ದು ಪಬ್ನಲ್ಲಿ.. ಇವರಿಬ್ಬರ ನಡುವೆ 19 ವರ್ಷ ವಯಸ್ಸಿನ ಅಂತರ ಇದೆ. 2000ನೇ ಇಸವಿಯಲ್ಲಿ ಮೆಲಾನಿಯಾ ಪ್ರೇಮದಲ್ಲಿ ಬಿದ್ದಿದ್ದ ಟ್ರಂಪ್ 5 ವರ್ಷ ಜೊತೆಯಾಗಿ ಓಡಾಡಿದ್ರು. ನಂತರ 2005ರಲ್ಲಿ ಟ್ರಂಪ್ ತಮ್ಮ 59ನೇ ವಯಸ್ಸಿನಲ್ಲಿ ಮೆಲಾನಿಯಾ ಜತೆ ಸಪ್ತಪದಿ ತುಳಿದರು.. ಆದ್ರೆ, ಈ ಬಾರಿ ಚುನಾವಣೆಯ ಪ್ರಚಾರದ ಆರಂಭದಲ್ಲಿ ಮೆಲಾನಿಯಾ ಗೈರಾಗಿದ್ದು, ಹಲವು ಅನುಮಾನಗಳು ವ್ಯಕ್ತವಾಗಿದ್ದವು.. ಆದ್ರೆ, ಟ್ರಂಪ್ ಹತ್ಯೆ ಯತ್ನದ ಬಳಿಕ ಮೆಲಾನಿಯಾ ಪತಿಗೆ ಬೆಂಬಲವಾಗಿ ಪೋಸ್ಟ್ ಮಾಡಿ ಎಲ್ಲ ವದಂತಿಗಳಿಗೂ ಬ್ರೇಕ್ ಹಾಕಿದ್ದರು. ಅಲ್ಲದೇ, ಟ್ರಂಪ್ ಜೊತೆಗೆ ಪ್ರಚಾರದಲ್ಲಿ ಕಾಣಿಸಿಕೊಂಡು ಇಬ್ಬರೂ ಒಟ್ಟಿಗೆ ಇದ್ದೇವೆ ಅನ್ನೋ ಸಂದೇಶ ರವಾನಿಸಿದ್ರು.
27 ಮಹಿಳೆಯರ ಮೇಲೆ ಟ್ರಂಪ್ ಲೈಂಗಿಕ ದೌರ್ಜನ್ಯ..?
ಇನ್ನು ಮೂವರು ಪತ್ನಿಯರ ಜತೆ ಸಂಸಾರದ ನಡುವೆಯೂ ಟ್ರಂಪ್ ವಿರುದ್ಧ ಗಂಭೀರ ಆರೋಪ ಕೇಳಿ ಬಂದಿತ್ತು.. 27 ಮಹಿಳೆಯರು, ತಮ್ಮ ಮೇಲೆ ಟ್ರಂಪ್ ಅತ್ಯಾಚಾರ ಎಸಗಿದ್ದಾರೆ ಅಂತಾ ಆರೋಪಿಸಿದ್ದು, ರಾಜಕೀಯ ವಲಯದಲ್ಲಿ ಭಾರಿ ಸಂಚಲನ ಸೃಷ್ಟಿಸಿತ್ತು.. ಇದೆಲ್ಲದರ ಮಧ್ಯೆ ಟಾಪ್ ಮಾಡೆಲ್ಗಳು, ಪೋರ್ನ್ ತಾರೆಯರ ಜತೆಗಿನ ಟ್ರಂಪ್ ಸಂಬಂಧದ ಬಗ್ಗೆಯೂ ಮಾಧ್ಯಮಗಳು ವರದಿ ಮಾಡಿವೆ..
ಈ ಎಲ್ಲಾ ವಿಚಾರಗಳೇ ಟ್ರಂಪ್ರ ರಸಿಕತೆಗೆ ಕನ್ನಡಿ ಹಿಡಿದಿವೆ.. ಸುರ ಸುಂದರಿಯರ ಸಾಂಗತ್ಯ, ಮೋಜು ಮಸ್ತಿ ಟ್ರಂಪ್ಗೆ ರಾಜಕೀಯ ಸೈಡ್ ಎಫೆಕ್ಟ್ಗೆ ಕಾರಣವಾಗಿವೆ ಅಂತಲೇ ವಿಶ್ಲೇಷಣೆ ಮಾಡಲಾಗ್ತಿದೆ..
1 Comment
Santosh somaning madane