ಓದುತ್ತಲೇ ಚಿತ್ರರಂಗದಲ್ಲಿ ಸಾನ್ವಿ!
Sudeep Daughter ಸಾನ್ವಿ ಅವರಿಗೆ ಹಾಡುವುದು ಎಂದರೆ ನಿಸ್ವಾರ್ಥ ಪ್ರೀತಿ. ಮುಂದಾಳೆಯಾಗಿ ಗಾಯಕಿಯಾಗಿ ಹೊರಹೊಮ್ಮುವುದು ಅಚ್ಚರಿಯ ವಿಷಯವಲ್ಲ. ಈಗ ಆಕೆ ತೆಲುಗು ಸಿನಿಮಾ ಕ್ಷೇತ್ರದಲ್ಲಿ ಧ್ವನಿಯಾಗಿದ್ದಾರೆ. ಯಾವ ಚಿತ್ರಕ್ಕೆ ಅಂತಾ ಕೇಳ್ತೀರಾ? ನಾನಿ ಅಭಿನಯದ ‘ಹಿಟ್ 3’ ಚಿತ್ರಕ್ಕಷ್ಟೆ! ನಾನಿಯವರೇ ಈ ಮಾಹಿತಿಯನ್ನು ಬಹಿರಂಗಪಡಿಸಿದ್ದಾರೆ. ಈ ವಿಚಾರ ತಿಳಿದ ಅಭಿಮಾನಿಗಳು ತುಂಬ ಖುಷಿಯಾಗಿದ್ದಾರೆ.
ಸಾನ್ವಿಯ ಧ್ವನಿ ವಿಭಿನ್ನವಾಗಿದೆ.
Sudeep Daughter ಸಾನ್ವಿ ಇಂಗ್ಲಿಷ್ ಪಾಪ್ ಹಾಡುಗಳನ್ನು ಅದ್ಭುತವಾಗಿ ಹಾಡುತ್ತಾರೆ. ಜೀ ಕನ್ನಡದ ‘ಸರಿಗಮಪ’ ವೇದಿಕೆಯಲ್ಲಿ ‘ಅಪ್ಪಾ ಐ ಲವ್ ಯು ಪಾ..’ ಹಾಡು ಹಾಡಿ ಎಲ್ಲರ ಗಮನ ಸೆಳೆದಿದ್ದಾಳೆ. ಈಗ ತೆಲುಗು ಸಿನಿಮಾಗೆ ಧ್ವನಿಯಾಗಿ, ಮತ್ತೊಂದು ಹಂತ ತಲುಪಿದ್ದಾರೆ. ‘ಹಿಟ್ 3’ ಟ್ರೈಲರ್‌ನ ಒಂದು ಹಾಡಿನಲ್ಲಿ ಸಾನ್ವಿಯ ಧ್ವನಿಯಿದೆ.
‘ಹಿಟ್ 3’ ಚಿತ್ರದ ಟ್ರೈಲರ್ ಕೆಲದಿನಗಳ ಹಿಂದೆ ಬಿಡುಗಡೆಯಾಗಿ ಗಮನ ಸೆಳೆದಿದೆ. ಟ್ರೈಲರ್‌ನ ಕೊನೆಯಲ್ಲಿ ಬ್ಯಾಕ್ಗ್ರೌಂಡ್ ಮ್ಯೂಸಿಕ್ ಜೊತೆಗೆ ಕೇಳಿಬರುವ ಧ್ವನಿ ಯಾರದು ಎಂಬುದು ಅನೇಕರಿಗೆ ತಿಳಿದಿರಲಿಲ್ಲ. ಆದರೆ ನಾನಿಯವರು ಅದನ್ನು ಸಾನ್ವಿಯ ಧ್ವನಿಯೆಂದು ಹೇಳಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ನಾನಿ ಮತ್ತು ಸಾನ್ವಿ ನಡುವಿನ ಪರಿಚಯಕ್ಕೆ ಕಾರಣ ‘ಈಗ’ ಸಿನಿಮಾ.
ಎಸ್.ಎಸ್. ರಾಜಮೌಳಿ ನಿರ್ದೇಶನದಲ್ಲಿ ಬಂದ ಈ ಸಿನಿಮಾದಲ್ಲಿ ನಾನಿ ನಾಯಕನಾಗಿ ಮತ್ತು ಸುದೀಪ್ ವಿಲನ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಆ ಚಿತ್ರ ಶೂಟಿಂಗ್ ಸಮಯದಲ್ಲಿಯೇ ನಾನಿಗೆ ಸಾನ್ವಿಯ ಪರಿಚಯವಾಗಿತ್ತು. ಅವರ ಸ್ನೇಹ ಇಂದುಲಗೂ ಮುಂದುವರೆದಿದೆ. ಸಾನ್ವಿ ಭವಿಷ್ಯದಲ್ಲಿ ಸಂಗೀತ ಲೋಕವನ್ನೇ ಆಯ್ಕೆ ಮಾಡುತ್ತಾಳಾ ಎಂಬುದು ಕಾದು ನೋಡಬೇಕಾಗಿದೆ.
Also Read: Pahalgam:11 ಜನರ ಜೀವ ಉಳಿಸಿದ ಮಟನ್..!
‘ಹಿಟ್ 3’ ಚಿತ್ರದಲ್ಲಿ ನಾನಿ ಹಾಗೂ ಶ್ರೀನಿಧಿ ಶೆಟ್ಟಿ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ.
ಈ ಚಿತ್ರದ ಬಗ್ಗೆ ಅಭಿಮಾನಿಗಳಲ್ಲಿ ಹೆಚ್ಚಿನ ನಿರೀಕ್ಷೆಯಿದೆ. ಸಿನಿಮಾ ಮೇ 1 ರಂದು ಬಿಡುಗಡೆಯಾಗಲಿದೆ.

