ಜಮ್ಮುಕಾಶ್ಮೀರದ (Jammu Kashmir)ಪಹಲ್ಗಾಮ್ನ ಪ್ರವಾಸಿಗರ ಮೇಲೆ ನಡೆದ ಉಗ್ರರ(Terror Attack)ಅಟ್ಟಹಾಸಕ್ಕೆ ಇಡೀ ಜಗತ್ತೆ ತತ್ತರಿಸಿದೆ.. ಗುಂಡಿನ ದಾಳಿಯಲ್ಲಿ 26 ಜನರು ಜೀವ ಕಳೆದುಕೊಂಡಿದ್ದಾರೆ. ಹಲವರು ಗಂಭೀರ ಗಾಯಗೊಂಡಿದ್ದಾರೆ.. ಆರ್ಮಿಯ ಟೈಟ್ ಸೆಕ್ಯುರಿಟಿ ನಡುವೆಯೂ ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್ (pahalgam)ನಲ್ಲಿ ಟೂರಿಸ್ಟ್ಗಳ ಮೇಲೆ ಭಯೋತ್ಪಾದಕರು ಘನಘೋರ ದಾಳಿ ನಡೆಸಿದ್ದಾರೆ.. ನಮ್ಮನ್ನ ಬಿಟ್ಟುಬಿಡಿ ಅಂತ ಪ್ರಾಣಭಿಕ್ಷೆ ಕೇಳಿದ್ರೂ ಕ್ರೂರವಾಗಿ ಉಗ್ರರು ಅಟ್ಟಹಾಸ ಮೆರೆದಿದ್ದಾರೆ.. ಸ್ಥಳದಲ್ಲಿದ್ದ ಕೆಲವರು ಇದ್ರಿಂದ ತಪ್ಪಿಸಿಕೊಂಡ್ರೆ, ಇನ್ನೂ ಕೆಲವರು ಅದೃಷ್ಟವಶಾತ್ ಬಚಾವ್ ಆಗಿದ್ದಾರೆ. ಇದ್ರಲ್ಲಿ ಕೇರಳದ ಫ್ಯಾಮಿಲಿಯೂ ಒಂದು… ಹೌದು.. ಈ ಕೃತ್ಯ ನಡೆದ ಸಮಯದಲ್ಲಿ ಕೇರಳ (kerala)ದ ಕೊಚ್ಚಿಯ ಲಾವಣ್ಯ ಎಂಬುವವರ ಕುಟುಂಬವು ಪವಾಡ ಸದೃಶದಂತೆ ಬದುಕುಳಿದಿದೆ..
ಅದ್ಹೇಗೆ ಅಂದ್ರೆ, ಲಾವಣ್ಯಳ ಪತಿ ಆಲ್ಬಿ ಜಾರ್ಜ್, ಅವರ ಮೂವರು ಮಕ್ಕಳು, ಆಲ್ಬಿಯ ಪೋಷಕರು ಮತ್ತು ಇತರ ಸಂಬಂಧಿಕರೊಂದಿಗೆ ಶ್ರೀನಗರದ ಟ್ರಿಪ್ನಲ್ಲಿದ್ರು.. ದಾಳಿಯ ದಿನದಂದು ಶ್ರೀನಗರದಲ್ಲಿ sightseeing ಮುಗಿಸಿಕೊಂಡು ಪಹಲ್ಗಾಮ್ಗೆ ತೆರಳುತ್ತಿತ್ತು. ಈ ಮಧ್ಯದಲ್ಲಿ ತಮ್ಮ ಪತಿ ಊಟಕ್ಕೆ ನಿಲ್ಲುವಂತೆ ಒತ್ತಾಯಿಸಿದ್ರು.. ಅಲ್ಲೆ ದಾರಿಯಲ್ಲಿದ್ದ ರೆಸ್ಟೋರೆಂಟ್ಗೆ ತೆರಳಿದ ಕುಟುಂಬಸ್ಥರು, ಮಟನ್ ರೋಗನ್ ಜೋಶ್ ಆರ್ಡರ್ ಮಾಡಿತ್ತು.. ಈ ಮಟನ್ ರೋಗನ್ ಜೋಶ್ ತುಂಬಾ ಖಾರವಾಗಿತ್ತು ಅಂತ ರೆಸ್ಟೋರೆಂಟ್ ಸಿಬ್ಬಂದಿಗೆ ಹೇಳ್ತಾರೆ.. ಆಗ ರೆಸ್ಟೋರೆಂಟ್ ಸಿಬ್ಬಂದಿಗೆ ಅದನ್ನು ಮತ್ತೆ ತಯಾರಿಸುವಂತೆ ಒತ್ತಾಯಿಸ್ತಾರೆ.. ಇದರಿಂದಾಗಿ ಹೋಟೆಲ್ನಲ್ಲೇ ಕೆಲ ಹೊತ್ತು ಡಿಲೇ ಆಗುತ್ತೆ.. ಇದ್ರಿಂದಾಗಿ ಪಹಲ್ಗಾಮ್ಗೂ ಹೋಗೋದೂ ತಡವಾಗುತ್ತೆ.
ಇನ್ನೂ ಈ ರೆಸ್ಟೋರೆಂಟ್ ಪಹಲ್ಗಾಮ್ನಿಂದ ಕೆವಲ 2 ಕಿಲೋಮೀಟರ್ ದೂರದಲ್ಲಿತ್ತು.. ಆದ್ರಿಂದ ಲಾವಣ್ಯ ಅವರು ಈಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಂಚಿಕೊಂಡು ರೆಸ್ಟೋರೆಂಟ್ನವರಿಗೆ ಧನ್ಯವಾದ ತಿಳಿಸಿದ್ದಾರೆ.. ಮತ್ತೆ ಖಾದ್ಯ ತಯಾರಿಸಲು ವ್ಯಯಿಸಿದ ಆ ಹೆಚ್ಚುವರಿ ಸಮಯ ಬಹುಶಃ ನಮ್ಮ ಜೀವಗಳನ್ನು ಉಳಿಸಿರಬಹುದು ಎಂದು ಬರೆದುಕೊಂಡಿದ್ದಾರೆ… ಪಹಲ್ಗಾಮ್ ಭಯೋತ್ಪಾದಕ ದಾಳಿಯಿಂದ ಕೆಲವೇ ನಿಮಿಷಗಳಲ್ಲಿ 11 ಜನರ ಕೇರಳದ ಕುಟುಂಬ ಪಾರಾಗಿದೆ… ಸದ್ಯ ಈ ಘಟನೆಯಲ್ಲಿ ಈ ಕುಟುಂಬವು ಬಲಿಯಾಗ್ತಿತ್ತೋ ಏನೋ ಗೊತ್ತಿಲ್ಲಾ ಆದ್ರೆ ಕೂದಲೆಳೆ ಅಂತರದಲ್ಲಿ ಬಚಾವ್ ಆಗಿದ್ದಂತೂ ಸತ್ಯ…
Also Read: Swami Vivekananda: ವೀರ ಸಂನ್ಯಾಸಿಯ ಆತ್ಮಗೀತೆ ಮರುಪ್ರದರ್ಶನಕ್ಕೆ ಡೇಟ್ ಫಿಕ್ಸ್!

