BosstvKannada

RSS ಶಿಭಿರದಲ್ಲಿ ಲೈಂಗಿಕ ಕಿರುಕುಳ..? : ತಪ್ಪಿತಸ್ಥರ ವಿರುದ್ಧ ಸಿಡಿದೆದ್ದ ಪ್ರಿಯಾಂಕಾ ಗಾಂಧಿ

ಆರ್.ಎಸ್.ಎಸ್‌ಗೆ ನೂರು ವರ್ಷದ ಬೆನ್ನಲ್ಲೇ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಮೇಲೆ ಗಂಭೀರ ಆರೋಪ ಕೇಳಿ ಬಂದಿದೆ. ಆರ್.ಎಸ್.ಎಸ್ ಕಾರ್ಯಕರ್ತರಿಂದ ನಿರಂತರ ಲೈಂಗಿಕ ಕಿರುಕುಳ ಹಿನ್ನಲೆಯಲ್ಲಿ ಮನನೊಂದ ಟೆಕ್ಕಿಯೊಬ್ಬ ಡೆತ್​ನೋಟ್ ಬರೆದಿಟ್ಟು ಆತ್ಮಹತ್ಯೆಗೆ ಶರಣಾಗಿರುವ ಘಟನೆ ನಡೆದಿದೆ. ಕೇರಳದ ತಿರುವನಂತಪುರಂ ಲಾಡ್ಜ್‌ವೊಂದರಲ್ಲಿ ಟೆಕ್ಕಿ ಆತ್ಮಹತ್ಯೆಗೆ ಶರಣಾಗಿದ್ದಾನೆ. ಆನಂದ್ ಆತ್ಮಹತ್ಯೆಗೆ ಶರಣಾಗಿರುವ ಟೆಕ್ಕಿ. ಸಾವಿಗೂ ಮುನ್ನ ಆನಂದ್‌ ಇನ್‌ಸ್ಟಾಗ್ರಾಂನಲ್ಲಿ ಡೆತ್‌ನೋಟ್ ಬರೆದಿಟ್ಟಿದ್ದು, ಆರ್.ಎಸ್.ಎಸ್ ಸದಸ್ಯರಿಂದ ತನಗೆ ನಿರಂತ ಲೈಂಗಿಕ ಕಿರುಕುಳ ನೀಡಲಾಗಿದೆ. ಬಾಲ್ಯದಿಂದಲೂ ತಾನು ದೌರ್ಜ್ಯನ್ಯಕ್ಕೊಳಗಾಗಿದ್ದು, ಮಾನಸಿಕವಾಗಿ ನೊಂದಿದ್ದಾಗಿ ಡೆತ್‌ನೋಟ್‌ನಲ್ಲಿ ಉಲ್ಲೇಖಿಸಿದ್ದು ಭಾರೀ ಸಂಚಲನ ಮೂಡಿಸಿದೆ.

ಇನ್ನೂ ಈ ಕುರಿತಾಗಿ ತಮ್ಮ ಎಕ್ಸ್‌ ಖಾತೆಯಲ್ಲಿ ಪೋಸ್ಟ್‌ ಮಾಡಿರುವ ಕಾಂಗ್ರೆಸ್‌ ಸಂಸದೆ ಪ್ರಿಯಾಂಕಾ ಗಾಂಧಿ ವಾದ್ರ ಟೆಕ್ಕಿ ಮೇಲೆ ಲೈಂಗಿಕ ಕಿರುಕುಳ ನೀಡಿದವರ ವಿರುದ್ದ ಕ್ರಮ ಕೈಗೊಳ್ಳಬೇಕು ಎಂದಿದ್ದು, ತನಿಖೆಗೆ RSS ನಾಯಕರು ಸಹಕರಿಸಬೇಕು ಮತ್ತು RSSನ ನಾಯಕರ ಕೂಡ ಈ ಆರೋಪದ ಬಗ್ಗೆ ತಕ್ಷಣ ಕ್ರಮ ಕೈಗೊಳ್ಳಬೇಕು. ಆನಂದ್‌ ಅಜಿ ಬರೆದಿರುವ ಪತ್ರದಲ್ಲಿ ಆತನ ಮೇಲೆ ಪದೇ ಪದೇ ಲೈಂಗಿಕ ದೌರ್ಜನ್ಯ ಆಗಿರುವುದಲ್ಲದೇ RSSನ ಶಿಭಿರದಲ್ಲಿ ಅನೇಕರಿಗೆ ಲೈಂಗಿಕ ಕಿರುಕುಳ ನೀಡಲಾಗುತ್ತಿದೆ ಎಂಬುದು ತಿಳಿಯುತ್ತದೆ ಎಂದಿದ್ದಾರೆ. ಅಲ್ಲದೇ ಈ ಪ್ರಕರಣ ಸತ್ಯವೇ ಆಗಿದ್ದಲ್ಲಿ ಇದು ಭಯಾನಕವಾಗಿದೆ. RSS ಶಿಭಿರದಲ್ಲಿ ಲಕ್ಷಾಂತರ ಮಕ್ಕಳು ಸೇರುತ್ತಾರೆ, RSSನ ನಾಯಕರು ತಕ್ಷಣವೇ ಕ್ರಮ ಕೈಗೊಂಡು ತಮ್ಮ ತಪ್ಪನ್ನ ಒಪ್ಪಿಕೊಳ್ಳಬೇಕು ಎಂದು ಕಿಡಿಕಾರಿದ್ದಾರೆ.

ಈ ಕುರಿತಾಗಿ ಪ್ರತಿಕ್ರಿಯಿಸಿರುವ ಸಚಿವ ಪ್ರಿಯಾಂಕ್‌ ಖರ್ಗೆ RSSನ ಮೇಲೆ ಗಂಭೀರ ಆರೋಪ ಮಾಡಿದ್ದಾರೆ. ಕೇವಲ ಕೇರಳ ಮಾತ್ರವಲ್ಲ ಇಲ್ಲೂ ಸಹ RSSನ ನಾಯಕರಿಂದ ಲೈಂಗಿಕ ದೌರ್ಜನ್ಯ ನಡೆಯುತ್ತದೆ. ಈ ಕುರಿತಾಗಿ ಹನುಮೇಗೌಡ ಎಂಬುವವರು ಪುಸ್ತಕವನ್ನೇ ಬರೆದಿದ್ದಾರೆ ಎಂದು ಹರಿಹಾಯ್ದಿದ್ದಾರೆ.. ಜಗತ್ತಿನಲ್ಲೇ ಅತ್ಯಂತ ಗೌಪ್ಯವಾದ ಸಂಘಟನೆ ಇದು. ಯಾಕೆ ಅಷ್ಟೋಂದು ಗೌಪ್ಯತೆ ಕಾಪಾಡುತ್ತಾರೆ ಅಂತ ಪ್ರಶ್ನೆ ಮಾಡಿದ್ದಾರೆ..

Read Also : ಥೈರಾಯ್ಡ್‌ ಸಮಸ್ಯೆ ಇರುವವರು ಯಾವ ರೀತಿ ಪಥ್ಯ ಮಾಡಬೇಕು ಗೊತ್ತಾ?

Exit mobile version