ಮತ್ತೊಂದು ಆರೋಗ್ಯ (Health)ಸಮಸ್ಯೆಯಿಂದ ಬಳಲುತ್ತಿರುವ ಸಮಂತಾ..



ಟಾಲಿವುಡ್ ಸ್ಟಾರ್(Tollywood star) ಹೀರೋಯಿನ್ ಸಮಂತಾ(Samantha) ತನಗೆ ಮತ್ತೊಂದು ಭಯಾನಕ ಕಾಯಿಲೆ ಇದೆ ಎಂದು ಬಾಂಬ್ ಸಿಡಿಸಿದ್ದಾರೆ. ಈ ಒಂದು ವಿಚಾರದ ಬೆನ್ನಲ್ಲೇ ನಟಿಯ ಆರೋಗ್ಯದ ಕುರಿತಾದ ಚರ್ಚೆಗಳು ಭಾರೀ ಜೋರಾಗಿದೆ. ಅಷ್ಟಕ್ಕೂ ಆಗಿದ್ದೇನು? ಈ ಬಗ್ಗೆ ಸಮಂತಾ ಶೇರ್ ಮಾಡಿರುವ ಪೋಸ್ಟ್ ವೈರಲ್ ಆಗಿದೆ. ಅವರು ಇನ್ಸ್ಟಾಗ್ರಾಮ್ನಲ್ಲಿ ಸ್ಟೋರಿವೊಂದನ್ನು ಪೋಸ್ಟ್ ಮಾಡಿದ್ದು, ಅದರಲ್ಲಿ ಜಿಮ್ನಲ್ಲಿ ವ್ಯಾಯಾಮ ಮಾಡುತ್ತಿದ್ದಾರೆ. ಚಿಕನ್ ಗುನ್ಯಾದಿಂದ ಉಂಟಾಗುವ ಸಂಧಿವಾತದಿಂದ ಚೇತರಿಸಿಕೊಳ್ಳುವುದು ತುಂಬಾ ಖುಷಿಯಾಗುತ್ತದೆ ಎಂದು ಅವರು ಬರೆದಿದ್ದಾರೆ. ಈ ಪೋಸ್ಟ್ಗೆ ದುಃಖದ ಎಮೋಜಿಯನ್ನು ಕೂಡ ಹಾಕಿದ್ದಾರೆ. ಸಧ್ಯ ಸಮಂತಾ(Samantha) ಶೇರ್ ಮಾಡಿರುವ ಈ ಪೋಸ್ಟ್ ಸಾಮಾಜಿಕ ಜಾಲತಾಣದಲ್ಲಿ ಫುಲ್ ವೈರಲ್ ಆಗಿದೆ. ಇದನ್ನು ಕಂಡು ಸಮ್ ಅಭಿಮಾನಿಗಳು ಆತಂಕಕ್ಕೆ ಒಳಗಾಗಿದ್ದು, ಸಮಂತಾ ಬೇಗ ಗುಣಮುಖರಾಗಿ ಅಂತ ವಿಶ್ ಮಾಡಿದ್ದಾರೆ.