BosstvKannada

ಲಂಡನ್‌ನಲ್ಲಿ ರಾಕಿ ಭಾಯ್‌ ಹವಾ : ಹಾಲಿವುಡ್‌ಗೆ ಎಂಟ್ರಿ ಕೊಟ್ಟ ಟಾಕ್ಸಿಕ್‌ ಕಿಂಗ್‌..?

ಕನ್ನಡದ ಬಹು ನೀರಿಕ್ಷಿತ ಸಿನಿಮಾ ಟಾಕ್ಸಿಕ್‌ ಇನ್ನೇನು ಚಿತ್ರೀಕರಣದ ಕೊನೆಯ ಹಂತದಲ್ಲಿದೆ. KGF ಯಶಸ್ಸಿನ ಬಳಿಕ ಯಶ್‌ ಪ್ಯಾನ್‌ ಇಂಡಿಯಾ ಸ್ಟಾರ್‌ ಆಗಿ ಮಿಂಚುತ್ತಿದ್ದಾರೆ. KGF 2 ಬಹುದೊಡ್ಡ ಯಶಸ್ಸಿನ ನಂತರ ಯಶ್‌ ಯಾವ ಸಿನಿಮಾ ಮಾಡ್ತಾರೆ ಎಂಬ ಕುತೂಹಲ ಇತ್ತು. ಯಾವಾಗ ಯಶ್‌ ಟಾಕ್ಸಿಕ್‌ ಸಿನಿಮಾದಲ್ಲಿ ನಟಿಸಲಿದ್ದಾರೆ ಅನ್ನೋ ಸುದ್ದಿ ಹೊರಬಿತ್ತೋ ನಿರೀಕ್ಷೆ ದುಪ್ಟಟ್ಟಾಯಿತು.. ಅದೇ ಯಶ್‌ ಈಗ ಪ್ಯಾನ್‌ ಇಂಡಿಯಾದಿಂದ ಪ್ಯಾನ್‌ ವರ್ಡ್‌ ಹೀರೋ ಆಗಲು ಹೊರಟಿದ್ದಾರೆ. ಯಶ್‌ ಅಭಿನಯದ ಟಾಕ್ಸಿಕ್‌ ಸಿನಿಮಾವನ್ನ ಪ್ಯಾನ್‌ ವರ್ಡ್‌ ಸಿನಿಮಾ ಮಾಡುವ ನಿಟ್ಟಿನಲ್ಲಿ ಯಶ್‌ ಹಾಗೂ ಸಿನಿಮಾ ತಂಡ ಶ್ರಮಿಸುತ್ತಿದ್ದು. ಈಗ ಚಿತ್ರದ ಬಿಡುಗಡೆಗಾಗಿ ಹಾಲಿವುಡ್‌ ಚಲನಚಿತ್ರ ವಿತರಣಾ ಸಂಸ್ಥೆ ಜೊತೆ ಕೊಲಾಬರೇಷನ್ ಮಾಡಲು ಮಾತುಕತೆ ನಡೆಸಲಾಗುತ್ತಿದೆ ಎನ್ನಲಾಗಿದೆ..

ರಾಕಿಂಗ್ ಸ್ಟಾರ್ ಯಶ್ ಅವರ ಟಾಕ್ಸಿಕ್ ಚಿತ್ರದ ಮುಂಬೈ ಶೂಟಿಂಗ್ ಮುಗಿದ ನಂತರ, ಯಶ್‌ ಲಂಡನ್‌ಗೆ ಹಾರಿದ್ದಾರೆ. ಈ ಸಿನಿಮಾಗೆ ಹಾಲಿವುಡ್ ಆ್ಯಕ್ಷನ್ ನಿರ್ದೇಶಕ ಜೆಜೆ ಪೆರ್ರಿ ಫೈಟ್‌ ಸೀನ್‌ ಚಿತ್ರಿಸುತ್ತಿದ್ದು, ಈ ಮೊದಲು ಹಾಲಿವುಡ್‌ ಸಿನಿಮಾಗಳಾದ ಫಾಸ್ಟ್ ಆ್ಯಂಡ್ ಫ್ಯೂರಿಯಸ್, ಜಾನ್ ವಿಕ್, ಡೇ ಶಿಫ್ಟ್ ರೀತಿಯ ಸೂಪರ್‌ ಆ್ಯಕ್ಷನ್ ಸಿನಿಮಾಗಳಿಗೆ ಆ್ಯಕ್ಷನ್ ಕಟ್‌ ಹೇಳಿದ್ದಾರೆ. ಮುಂಬೈನಲ್ಲಿ ಕಳೆದ ಒಂದು ತಿಂಗಳಿಂದ ನಡೆಯುತ್ತಿರು ಟಾಕ್ಸಿಕ್ ಚಿತ್ರೀಕರಣದಲ್ಲಿ ಆ್ಯಕ್ಷನ್ ದೃಶ್ಯಗಳನ್ನು ಅವರೇ ನಿರ್ದೇಶಿಸಿದ್ದಾರೆ. ಟಾಕ್ಸಿಕ್ ಸಿನಿಮಾ ಕನ್ನಡ ಹಾಗೂ ಇಂಗ್ಲಿಷ್​ನಲ್ಲಿ ಏಕಕಾಲಕ್ಕೆ ಶೂಟ್ ಆಗುತ್ತಿದ್ದು, ಉಳಿದ ಭಾಷೆಗಳಿಗೆ ಸಿನಿಮಾ ಡಬ್ ಮಾಡಲಾಗುತ್ತದೆ. ಇನ್ನೇನು ಮುಂದಿನ ವರ್ಷ ಸಿನಿಮಾ ಬಿಡುಗಡೆ ಆಗಲಿದೆ ಎಂಬ ಮಾತು ಕೇಳಿಬರುತ್ತಿದ್ದು, ಈಗ ಯಶ್ ಲಂಡನ್​ನ ನಿರ್ಮಾಣ ಸಂಸ್ಥೆಗಳ ಜೊತೆ ಸಿನಿಮಾ ಹಂಚಿಕೆ ಬಗ್ಗೆ ಮಾತುಕತೆ ನಡೆಸಲು ತೆರಳಿದ್ದಾರೆ ಎನ್ನಲಾಗುತ್ತಿದೆ. ಟಾಕ್ಸಿಕ್ ಸಿನಿಮಾಗೆ ಮಲಯಾಳಂನ ಗೀತು ಮೋಹನ್​ದಾಸ್ ಅವರು ನಿರ್ದೇಶನ ಮಾಡುತ್ತಿದ್ದು, ಕನ್ನಡದ ಕೆವಿಎನ್ ಸಂಸ್ಥೆ ಬಂಡವಾಳ ಹೂಡಿದೆ. ಈ ಸಿನಿಮಾ ಮುಂದಿನ ವರ್ಷ ತೆರೆಗೆ ಬರಲಿದೆ.

Read Also : ಜಾತಿ ಗಣತಿ ಕುರಿತು ಕ್ಯಾಬಿನೆಟ್‌ ಸಭೆ : ಆರಂಭದಲ್ಲೇ ಸಿದ್ದರಾಮಯ್ಯ ಬೇಸರ

Exit mobile version