
ಜಾತಿ ಗಣತಿ ಮಾಡುವ ವಿಚಾರವಾಗಿ ಇಂದು ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ಹೈವೋಲ್ಟೇಜ್ ಕ್ಯಾಬಿನೆಟ್ ಸಭೆ ನಡೀತು. ಕ್ಯಾಬಿನೆಟ್ ಸಭೆ ಆರಂಭವಾಗುತ್ತಿದ್ದಂತೆ ಸಿಎಂ ಸಿದ್ದರಾಮಯ್ಯ ಜಾತಿ ಗಣತಿ ಮಾಡುವ ಕುರಿತು ತೀವ್ರ ಬೇಸರ ವ್ಯಕ್ತಪಡಿಸಿದ್ದು, ಕೆಲವು ಸಚಿವರು ಸಮಾಧಾನಪಡಿಸಿದರು.. ಹೌದು.. ಜಾತಿ ಗಣತಿಯ ಉದ್ದೇಶವನ್ನು ಅರಿತುಕೊಳ್ಳದೇ ಅಪಪ್ರಚಾರ ಮಾಡುತ್ತಿದ್ದಾರೆ. ಅಲ್ಲದೇ, ವಿರೋಧವನ್ನೂ ಮಾಡುತ್ತಿರುವ ಕೆಲವು ಸಚಿವರ ವಿರುದ್ಧ ಸಿಎಂ ಸಿದ್ದರಾಮಯ್ಯ ತೀವ್ರ ಬೇಸರ ಹೊರಹಾಕಿದರು. ಇದು ಕೇವಲ ಸಮುದಾಯಗಳಲ್ಲಿನ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯಾಗಿದ್ದು, ಯಾವುದೇ ಜಾತಿಗಳನ್ನು ಒಡೆಯುವ ಸಮೀಕ್ಷೆಯಲ್ಲ ಎಂದು ತಮ್ಮ ಅಸಮಾಧಾನ ವ್ಯಕ್ತಪಡಿಸಿದರು. ಅದರಲ್ಲೂ ಕೆಲವು ಲಿಂಗಾಯತ ಸಮುದಾಯದ ಪ್ರಭಾವಿ ಸಚಿವರೇ ಜಾತಿ ಗಣತಿಯನ್ನು ವಿರೋಧಿಸುತ್ತಿರುವುದು ಸಿಎಂ ಆಕ್ರೋಶಕ್ಕೆ ಕಾರಣವಾಗಿದೆ ಎನ್ನಲಾಗ್ತಿದೆ..
Also read : ಬೊಜ್ಜು ಕರಗಿಸಲು ಇಲ್ಲಿದೆ ಬೆಸ್ಟ್ ಪ್ಲ್ಯಾನ್ : ಗ್ರೀನ್ ಟೀ ಕುಡಿಯುವ ಮುಂಚೆ ಇದನ್ನು ಪಾಲಿಸಿ