ಗೋಲ್ಡ್ ಸ್ಮಗ್ಲಿಂಗ್ (Gold Smuggling) ಕೇಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ಯಾಂಡಲ್ವುಡ್ ನಟಿ ಬಂಧಿತರಾಗಿದ್ದ (Sandalwood Actress) Ranya Rao ಸದ್ಯ ಜಾಮೀನು ಮಂಜೂರು ಆಗಿದೆ. ಈ ಬೆನ್ನಲ್ಲೆ ನಟಿಗೆ ಇಡಿ ಅಧಿಕಾರಿಗಳು ಶಾಕ್ ನೀಡಿದ್ದಾರೆ. ಇಡಿ ಅಧಿಕಾರಿಗಳಿಂದ Ranya Rao ಮನೆ ಸೇರಿದಂತೆ ಹಲವು ಕಡೆ ದಾಳಿ ಮಾಡುತ್ತಿದೆ. ಸದ್ಯ ಒಟ್ಟು 16 ಕಡೆ ದಾಳಿ ನಡೆಸಿದ್ದ ಇಡಿ ಅಧಿಕಾರಿಗಳು (ED) ಇಂದು ಮತ್ತಷ್ಟು ಸ್ಥಳಗಳಲ್ಲಿ ರೈಡ್ ಮಾಡಿದ್ದಾರೆ.
Also Read: MI Vs DC : ಕ್ಯಾಚ್ ಬಿಟ್ಟ ರೋಹಿತ್ ಶರ್ಮಾ, ಹೊರಗೆ ಕಳಿಸಿದ ಹಾರ್ದಿಕ್ ಪಾಂಡ್ಯಾ!
ಖಾಸಗಿ ವ್ಯಕ್ತಿಗಳ ಮುಖಾಂತರ ಅಕ್ರಮ ಹಣ ವರ್ಗಾವಣೆ ಮಾಡಿ ಕೋಟಿ ಕೋಟಿ ವ್ಯವಹಾರ ಮಾಡಿರೋದು ಪತ್ತೆಯಾದ ಹಿನ್ನೆಲೆಯಲ್ಲಿ ರೈಡ್ ಮಾಡಲಾಗುತ್ತದೆ ಎನ್ನಲಾಗಿದೆ. ಶಿಕ್ಷಣ ಸಂಸ್ಥೆಯಿಂದ ರನ್ಯಾ ಅಕೌಂಟ್ ಗೆ 45 ಲಕ್ಷ ಟ್ರಾನ್ಸ್ ಫರ್ ಆಗಿದೆ ಎಂದು ಕೂಡಾ ಹೇಳಲಾಗಿದೆ.
ಸದ್ಯ ಹಣಕ್ಕೆ ಸಂಬಂಧಿಸಿ ಯಾವುದೇ ದಾಖಲೆಗಳು ಪತ್ತೆಯಾಗಿಲ್ಲ ಎನ್ನಲಾಗಿದ್ದು, ಆರ್‌ಬಿಐ ಅನುಮತಿ ಇಲ್ಲದೇ ಸಾಕಷ್ಟು ಜನ ಈಕೆಯ ಜೊತೆ ವ್ಯವಹಾರ ಮಾಡಿದ್ದಾರೆ ಎಂಬ ಮಾಹಿತಿ ಇಡಿ ಅಧಿಕಾರಿಗಳ ತನಿಖೆಯಿಂದ ಬಯಲಾಗಿದೆ.

