Site icon BosstvKannada

MI Vs DC : ಕ್ಯಾಚ್‌ ಬಿಟ್ಟ ರೋಹಿತ್‌ ಶರ್ಮಾ, ಹೊರಗೆ ಕಳಿಸಿದ ಹಾರ್ದಿಕ್‌ ಪಾಂಡ್ಯಾ!

MI Vs DC

IPL 2025 MI Vs DC: ಐಪಿಎಲ್‌ ಸೀಸನ್‌ 18ರ 63ನೇ ಪಂದ್ಯದಲ್ಲಿ ದೆಹಲಿ ತಂಡವನ್ನು ಮಣಿಸಿ ಮುಂಬೈ ಟೀಂ ಫ್ಲೇಆಫ್‌ಗೆ ಲಗ್ಗೆ ಇಟ್ಟಿದೆ.. ದೆಹಲಿ ವಿರುದ್ಧ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್‌ ಸುಲಭವಾಗಿ ಗೆಲುವು ದಾಖಲಿಸಿದೆ.. ಆದ್ರೆ, ಈ ಮ್ಯಾಚ್‌ನಲ್ಲಿ ಅಚ್ಚರಿಯ ಘಟನೆಯೊಂದು ನಡೆದಿದೆ.. ಹಿಟ್‌ಮ್ಯಾನ್‌ ರೋಹಿತ್‌ ಶರ್ಮಾ ಕ್ಯಾಚ್‌ ಮಿಸ್‌ ಮಾಡ್ತಿದ್ದಂತೆ ಅವರನ್ನು ಹಾರ್ದಿಕ್‌ ಪಾಂಡ್ಯಾ ಹೊರಗೆ ಕಳಿಸಿ ಎಲ್ಲರ ಕೆಂಗಣ್ಣಿಗೆ ಗುರಿಯಾಗಿದ್ದಾರೆ..

ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಮುಂಬೈ ಇಂಡಿಯನ್ಸ್ ತಂಡವು 20 ಓವರ್​ಗಳಲ್ಲಿ 180 ರನ್ ಕಲೆ ಹಾಕಿತ್ತು. ಬಲಿಷ್ಠ ಬ್ಯಾಟಿಂಗ್ ಲೈನಪ್ ಹೊಂದಿದ್ದ ಡೆಲ್ಲಿ ಕ್ಯಾಪಿಟಲ್ಸ್ ತಂಡವು ಈ ಗುರಿಯನ್ನು ಬೆನ್ನತ್ತುವ ವಿಶ್ವಾಸದೊಂದಿಗೆ ಕಣಕ್ಕಿಳಿದಿತ್ತು. ಆದರೆ‌ ಡೆಲ್ಲಿ ಕ್ಯಾಪಿಟಲ್ಸ್ ತಂಡವು ಆರಂಭಿಕ ಆಘಾತಕ್ಕೆ ಒಳಗಾಯ್ತು. ಅದರಲ್ಲೂ ಪದೇ ಪದೇ ಬೌಲರ್​ಗಳನ್ನು ಬದಲಿಸುವ ಮೂಲಕ ಪಾಂಡ್ಯ ಬ್ಯಾಟರ್​ಗಳ ಮೇಲೆ ಒತ್ತಡ ಹೇರುವಲ್ಲಿ ಯಶಸ್ವಿ ಯಾದರು. ಇದರ ನಡುವೆ ಬಂದ ವಿಪ್ರಾಜ್ ನಿಗಮ್ ‌ಸ್ಫೋಟಕ ಬ್ಯಾಟಿಂಗ್​ನೊಂದಿಗೆ ಗಮನ ಸೆಳೆದರು.

Also Read: FIR Against Madenur Manu : ಮಡೆನೂರು ಮನು ಕಾಮಕಾಂಡ ಬಯಲು!?

ಈ ಹಂತದಲ್ಲಿ ಹಾರ್ದಿಕ್ ಪಾಂಡ್ಯ ಬೌಲ್‌ ಮಾಡಲು ಮಿಚೆಲ್ ಸ್ಯಾಂಟ್ನರ್‌ಗೆ ಚಾನ್ಸ್‌ ಕೊಟ್ರು. ನಿರೀಕ್ಷೆಯಂತೆ ಸ್ಯಾಂಟ್ನರ್ ಎಸೆತದಲ್ಲಿ ವಿಪ್ರಾಜ್ ಕ್ಯಾಚ್ ನೀಡಿದ್ದರು. ಆದರೆ ಈ ಸುಲಭ ಕ್ಯಾಚ್ ಹಿಡಿಯುವಲ್ಲಿ ರೋಹಿತ್ ಶರ್ಮಾ ವಿಫಲರಾದರು. ಆದ್ರೆ, ಕ್ಯಾಚ್ ಕೈ ಬಿಟ್ಟ ಬೆನ್ನಲ್ಲೇ ಹಾರ್ದಿಕ್ ಪಾಂಡ್ಯ ಇಂಪ್ಯಾಕ್ಟ್ ಸಬ್ ಆಗಿ ಕರಣ್ ಶರ್ಮಾ ಅವರನ್ನು ಕಣಕ್ಕಿಳಿಸುವ ಮೂಲಕ ರೋಹಿತ್ ಶರ್ಮಾ ಅವರನ್ನು ಪೆವಿಲಿಯನ್​ಗೆ ಕಳುಹಿಸಿದರು.. ಸದ್ಯ ವಿಡಿಯೋ ವೈರಲ್‌ ಆಗಿದ್ದು, ಹಾರ್ದಿಕ್‌ ಪಾಂಡ್ಯಾ ವಿರುದ್ಧ ರೋಹಿತ್‌ ಶರ್ಮಾ ಅಭಿಮಾನಿಗಳು ಆಕ್ರೋಶ ಹೊರಹಾಕಿದ್ದಾರೆ..

Exit mobile version