BosstvKannada

ಭಟ್ಕಳದಲ್ಲಿ ರಾಶಿ ರಾಶಿ ದನಗಳ ಅಸ್ಥಿಪಂಜರ : ಇಬ್ಬರು ಪೊಲೀಸರ ಬಲೆಗೆ!

ಉತ್ತರ ಕನ್ನಡ ಜಿಲ್ಲೆಯ ಭಟ್ಕಳದ ಅರಣ್ಯದಲ್ಲಿ ರಾಶಿ ರಾಶಿ ದನಗಳ ಅಸ್ಥಿಪಂಜರ ಸಿಕ್ಕಿದ್ದರ ಬಗ್ಗೆ ಕೆಲ ದಿನಗಳ ಹಿಂದೆ ವಿಡಿಯೋ ವೈರಲ್‌ ಆಗಿತ್ತು. ಈ ಕುರಿತಾಗಿ ಹಿಂದೂ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದ್ದರು. ಈಗ ಗೋವಿನ ಕಳ್ಳ ಸಾಗಾಣಿಕೆ ಮತ್ತು ಮಾಂಸ ಮಾರಾಟಕ್ಕೆ ಸಂಬಂಧಪಟ್ಟಂತೆ ಕಾಡಿನಲ್ಲಿ ದೊರೆತ ದನಗಳ ಅಸ್ಥಿಪಂಜರದ ಪ್ರಕರಣವನ್ನು ಬಯಲಿಗೆಳೆಯುವಲ್ಲಿ ಉತ್ತರ ಕನ್ನಡ ಪೊಲೀಸರು ಕೊನೆಗೂ ಯಶಸ್ವಿಯಾಗಿದ್ದಾರೆ. ಹಲವು ಊರುಗಳಲ್ಲಿ ಕದ್ದ ಗೋವುಗಳನ್ನು ಭಟ್ಕಳಕ್ಕೆ ತಂದು ಮಾಂಸಕ್ಕಾಗಿ ಕಡಿದ ನಂತರ ಉಳಿದ ಮೂಳೆಗಳನ್ನು ಅರಣ್ಯದಲ್ಲಿ ಎಸೆದು ಪರಾರಿಯಾಗುತಿದ್ದರು ಎಂಬುದು ಇದೀಗ ಗೊತ್ತಾಗಿದೆ. ಈ ಸಂಬಂಧ ಇಬ್ಬರನ್ನು ಆರೋಪಿಗಳನ್ನ ಬಂಧಿಸಿರುವ ಪೊಲೀಸರು, ಇತರ ಆರೋಪಿಗಳಿಗಾಗಿ ಶೋಧ ಕಾರ್ಯ ನಡೆಸುತ್ತಿದ್ದಾರೆ.

ಭಟ್ಕಳದ ಮಗ್ದೂಂ ಕಾಲೂನಿ ಬಳಿಯ ಬೆಳ್ನೆ ಗ್ರಾಮದ ಸರ್ವೆ ನಂಬರ್ 74 ರ ಭಾಗದಲ್ಲಿ ಸಿಕ್ಕ ರಾಶಿ ರಾಶಿ ಮೂಳೆಗಳು ಜಿಲ್ಲೆಯ ಜನರನ್ನು ಬೆಚ್ಚಿ ಬೀಳಿಸಿತ್ತು. ಹಿಂದೂಪರ ಹೋರಾಟಗಾರರು ಸ್ಥಳಕ್ಕೆ ತೆರಳಿ ವಿಡಿಯೋ ಚಿತ್ರೀಕರಿಸಿ ಘಟನೆಯನ್ನು ಖಂಡಿಸಿದ್ದರು. ಆದರೆ, ಈ ವಿಡಿಯೋಗಳು ಸುಳ್ಳು. ಕೋಮು ಸಂಘರ್ಷ ನಡೆಸಲು ತಂತ್ರಜ್ಞಾನ ಬಳಸಿ ವಿಡಿಯೋ ಚಿತ್ರೀಕರಣ ಮಾಡಲಾಗಿದೆ ಎಂದು ಮಗ್ದೂಂ ಕಾಲೋನಿಯ ತಾಹೀರ್ ಮಸ್ತಾನ್ ಎಂಬಾತ ಕೆಲವರ ಮೇಲೆ ದೂರು ನೀಡಿದ್ದರು. ಸ್ಥಳಕ್ಕೆ ತೆರಳಿದ್ದ ಪೊಲೀಸರು, ಪುರಸಭೆ ಅಧಿಕಾರಿಗಳು ಹಾಗೂ ಅರಣ್ಯ ಇಲಾಖೆ ಅಧಿಕಾರಿಗಳು ತನಿಖೆ ನಡೆಸಿ ಗೋವುಗಳ ಮೂಳೆ ಇದ್ದುದನ್ನು ಪತ್ತೆ ಮಾಡಿದ್ದರು. ಇದರ ಬೆನ್ನಲ್ಲೇ ದನಗಳ ಅಸ್ಥಿಪಂಜರ ಸಿಕ್ಕ ಪ್ರಕರಣ ಸಂಬಂಧ 2 ತಂಡಗಳನ್ನು ಮಾಡಿ ತನಿಖೆ ಮಾಡಲಾಗಿತ್ತು. ಇದೀಗ ಪೊಲೀಸರು ಭಟ್ಕಳದ ಮೊಹ್ಮದ್ ಸಮಾನ್, ಮೊಹ್ಮದ್ ರಾಹೀನ್ ಎಂಬ ಇಬ್ಬರನ್ನು ಬಂಧಿಸಿದ್ದಾರೆ. ಉತ್ತರ ಕನ್ನಡ ಜಿಲ್ಲೆಯಲ್ಲಿ ಇಲ್ಲಿಯವರೆಗೆ 41 ಗೋವಿನ ಕಳ್ಳತನದ ಪ್ರಕರಣ ದಾಖಲಾಗಿದ್ದು ಇದರಲ್ಲಿ 98 ಮಂದಿ ದನಕಳ್ಳರನ್ನ ಬಂಧಿಸಲಾಗಿದ್ದು, 191 ಹಸುಗಳನ್ನ ರಕ್ಷಣೆ ಮಾಡಿ 2,425 ಕೆಜಿ ಗೋ ಮಾಂಸವನ್ನು ವಶಪಡಿಸಿಕೊಳ್ಳಲಾಗಿದೆ.

Read Also : ರಾಜ್ಯದಲ್ಲಿ ವಿದೇಶಿ ಕಂಪನಿಗಳ ಹೂಡಿಕೆ : ರೋಲ್ಸ್‌ ರಾಯ್ಸ್‌ನ ಜಿಸಿಸಿ ಕೇಂದ್ರ ಉದ್ಘಾಟಿಸಿದ ಎಂ.ಬಿ. ಪಾಟೀಲ್

Exit mobile version