ಸ್ವಾಮಿ ವಿವೇಕಾನಂದರ(Swami Vivekananda) ಜೀವನ ಕುರಿತ ವೀರ ಸಂನ್ಯಾಸಿಯ ಆತ್ಮಗೀತೆಯು (The Song of the Sannyasin) ಮತ್ತೊಮ್ಮೆ ನಿಮ್ಮ ಮುಂದೆ ಪ್ರದರ್ಶನಕ್ಕೆ ಸಜ್ಜಾಗಿದೆ.. ಏಪ್ರಿಲ್ 25ಕ್ಕೆ ಸಂಜೆ 6.30ಕ್ಕೆ ಬೆಂಗಳೂರಿನ ಮಲ್ಲೆಶ್ವರಂನ ಚೌಡಯ್ಯ ಹಾಲ್‌ನಲ್ಲಿ ಪರಮ್ ಕಲ್ಚರ್ ಅರ್ಪಿಸುತ್ತಿರುವ ವೀರ ಸಂನ್ಯಾಸಿಯ ಆತ್ಮಗೀತೆ ಪ್ರದರ್ಶನಗೊಳ್ಳಲಿದೆ. ಇದು ಸಂಗೀತ, ನೃತ್ಯ, ನಾಟಕಗಳ ಮೂಲಕ ಸ್ವಾಮಿ ವಿವೇಕಾನಂದರ ಜೀವನ – ಚಿಂತನೆಗಳನ್ನ ವಿಜೃಂಭಣಾತ್ಮಕವಾಗಿ ತೋರಿಸುವ ಒಟ್ಟು 2 ಗಂಟೆಗಳ ಕಾಲಾವಧಿಯ ಪ್ರದರ್ಶನವಾಗಿದೆ. ಸುಮಾರು 35ಕ್ಕೂ ಹೆಚ್ಚು ಅಂತಾರಾಷ್ಟ್ರೀಯ ಖ್ಯಾತಿಯ ಕಲಾವಿದರು ಭಾಗವಹಿಸಲಿದ್ದಾರೆ..

ಇನ್ನು, ಸ್ವತಃ ಸ್ವಾಮಿ ವಿವೇಕಾನಂದರಿಂದಲೇ ಇಂಗ್ಲಿಷ್, ಬಂಗಾಳಿ, ಸಂಸ್ಕೃತದಲ್ಲಿ ರಚಿಸಲ್ಪಟ್ಟ ಹಾಡುಗಳು ಹಾಗೂ ಕನ್ನಡದ ಮೇರು ಕವಿಗಳಾದ ಜಿ.ಎಸ್.ಶಿವರುದ್ರಪ್ಪ ಹಾಗೂ ಕುವೆಂಪುರವರ ಇನ್ನೂ ಹಲವು ಪ್ರಖ್ಯಾತ ಕವಿಗಳು ವಿವೇಕಾನಂದರ ಬಗ್ಗೆ ಬರೆದ ಹಾಡಗಳನ್ನ ಇಲ್ಲಿ ಪ್ರದರ್ಶಿಸಲಿದ್ದಾರೆ.. ಇನ್ನು ವಿಶೇಷವೆಂದರೆ, ಜನವರಿಯಲ್ಲೇ ಪ್ರದರ್ಶಿಸಲ್ಪಟ್ಟಿದ್ದ ವೀರ ಸಂನಾಸಿಯ ಆತ್ಮಗೀತೆ ಜನಮನ ಗೆದ್ದಿತ್ತು.. ಹೀಗಾಗಿ ಈ ಆತ್ಮಗೀತೆಗೆ ಪೇಕ್ಷಕರ ಬೇಡಿಕೆ ಹೆಚ್ಚಾಗಿತ್ತು.. ಇದೀಗ ಪ್ರೇಕ್ಷಕರ ಬೇಡಿಕೆಯ ಮೇರೆಗೆ ಈಗ ಮರುಪ್ರದರ್ಶನ ಕಾಣುತ್ತಿದೆ..
ಪ್ರಖ್ಯಾತ ಸಂಗೀತ ಸಂಯೋಜಕರಾದ ಪಂ. ಪ್ರವೀಣ್ ಡಿ. ರಾವ್ ಹಾಗೂ ಚಲನಚಿತ್ರ ನಿರ್ದೇಶಕರಾದ ಶ್ರೀ ಕಾರ್ತಿಕ್ ಸರಗೂರು ಇವರ ಸಾರಥ್ಯದಲ್ಲಿ ಕಾರ್ಯಕ್ರಮ ನಡೆಯುತ್ತಿದೆ.. ಸ್ವಾಮಿ ವಿವೇಕಾನಂದರ ತತ್ವ ಆದರ್ಶಗಳನ್ನು ಮನೆ ಮನೆಗೆ ತಲುಪಿಸುವ ಸಲುವಾಗಿ ಪರಂ ವಿಜ್ಞಾನ ಮತ್ತು ಸಂಸ್ಕೃತಿ ಕೇಂದ್ರ ಇಂಥಾದ್ದೊಂದು ಅದ್ಭುತ ಕಾರ್ಯಕ್ರಮ ಆಯೋಜಿಸುತ್ತಿದೆ..