ಪಾಕಿಸ್ತಾನಕ್ಕೆ ಬುದ್ದಿ ಬದಲಾಗುವಂತಿಲ್ಲ. ಅವರಲ್ಲಿ ಯಾವುದೇ ಸಾಕ್ಷಾತ್ಕಾರವಿಲ್ಲ. ಪಾಕ್ ಭಯೋತ್ಪಾದಕರನ್ನು ಪೋಷಿಸುತ್ತಿದೆ ಎಂದು ಪ್ರಪಂಚವೇ ಆರೋಪಿಸುತ್ತಿದ್ದರೆ, ಪಾಕಿಸ್ತಾನ ಮಾತ್ರ ಭಯೋತ್ಪಾದನೆ ನಮ್ಮಲ್ಲಿ ಇಲ್ಲ ಅಂತ ಸುಳ್ಳು ಹೇಳುತ್ತಲೇ ಕೆಟ್ಟ ಕೆಲಸ ಮಾಡುತ್ತಿದೆ. ಇದೀಗ ಆಪರೇಷನ್ ಸಿಂಧೂರ(Operation Sindoor)ಕ್ಕೆ ಬಲಿಯಾದ ಭಯೋತ್ಪಾದಕರಿಗೆ ಸಕಲ ಸರ್ಕಾರಿ ಗೌರವದೊಂದಿಗೆ ಅಂತ್ಯಕ್ರಿಯೆ ಮಾಡಿದ್ದಾರೆ..
ಈ ಕುರಿತ ಫೋಟೋಸ್ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ.

ಭಯೋತ್ಪಾದಕರು ಮತ್ತು ಪಾಕಿಸ್ತಾನಿ ಸೈನಿಕರು ಈ ಅಂತ್ಯಕ್ರಿಯೆಗಳನ್ನು ಒಟ್ಟಿಗೆ ಮಾಡಿದ್ದಾರೆ. ಇದರಿಂದ ಆ ದೇಶದಲ್ಲಿ ಉಗ್ರರ ಪೋಷಣೆ ಎಷ್ಟರ ಮಟ್ಟಿಗೆ ನಡೆಯುತ್ತಿದೆ ಎಂದು ಅರ್ಥವಾಗುತ್ತೆ. ಪಾಕಿಸ್ತಾನಿ ಸೇನೆ ಭಯೋತ್ಪಾದಕರನ್ನು ಪೋಷಿಸುತ್ತದೆ ಎಂಬುವುದಕ್ಕೆ ಇದಕ್ಕಿಂತ ದೊಡ್ಡ ಉದಾರಹಣೆ ಬೇಕಿಲ್ಲ. ಆಪರೇಷನ್ ಸಿಂಧೂರ್ (Operation Sindoor)ಹೊಡೆತಕ್ಕೆ ಜೈಶ್-ಎ-ಮೊಹಮ್ಮದ್(Jaish-e-Mohammed) ಧೂಳಿಪಟವಾಗಿದೆ. ಭಾರತ ನಡೆಸಿದ ಸೇಡಿನ ದಾಳಿಯಲ್ಲಿ ಮಸೂದ್ ಅಜರ್(Masood Azhar) ಅವರ ಇಡೀ ಕುಟುಂಬ ಸರ್ವನಾಶವಾಗಿದೆ. ಈ ದಾಳಿಯಲ್ಲಿ ಮಸೂದ್ ಅಜರ್ ಸಹೋದರಿ ಮತ್ತು ಮೌಲಾನಾ ಕಶಾಫ್ ಕುಟುಂಬ ಸೇರಿದಂತೆ ಒಟ್ಟು 14 ಜನರು ಪ್ರಾಣ ಕಳೆದುಕೊಂಡರು.








ಆದರೆ ಮಸೂದ್ ಅಜರ್ ಈಗ ಎಲ್ಲಿದ್ದಾನೆ…? ಯಾವಾಗಲೂ ಹೆಚ್ಚಿನ ಭದ್ರತೆ ನೀಡುವ ಪಾಕಿಸ್ತಾನ ಸರ್ಕಾರ ಅವರಿಗೆ ಭದ್ರತೆ ಒದಗಿಸಿದೆಯೇ..? ಅಥವಾ ಅವನು ಬೇರೆಲ್ಲಿಯಾದರೂ ಅಡಗಿಕೊಂಡಿದ್ದಾನೆಯೇ.? ಎಂದು ತಿಳಿದು ಬರಬೇಕಿದೆ. ಬಹುಷಃ ಮಸೂದ್ ಬಲಿ ಪಡೆಯುವವರೆಗೂ ಆಪರೇಷನ್ ಸಿಂದೂರ್ ಅಂತ್ಯವಾಗಲ್ಲ ಅಂತ ಅನಿಸುತ್ತಿದೆ.
Also Read : ಸರ್ವ ಪಕ್ಷಗಳ ಸಭೆಯಲ್ಲಿ ಕೇಂದ್ರದಿಂದ ಮಹತ್ವದ ನಿರ್ಧಾರ!